Monday, April 20, 2015

Daily Crimes Reported as On 20/04/2015 at 19:30 Hrs


ಅಪಘಾತ ಪ್ರಕರಣ
  • ಹೆಬ್ರಿ:ಪಿರ್ಯಾದಿದಾರರಾದ ಸಂಧ್ಯಾ (24), ತಂದೆ:ಮಂಜುನಾಥ ನಾಯ್ಕ್‌ ವಾಸ:ಮಾರಿಗಡು, ಹೆಬ್ರಿ ಗ್ರಾಮ, ಕಾರ್ಕಳ ತಾಲೂಕುರವರು ಅವರ ತಾಯಿ ಇಂದಿರಾ, ಹಾಗೂ ಅವರ ನೆರ ಮನೆಯವರಾದ ವಿನೋದ ಬಾಯಿರವರೊಂದಿಗೆ ಕೆಎ 20 ಸಿ 4913 ನೇ ಆಟೋ ರಿಕ್ಷಾದಲ್ಲಿ ಶಿವಪುರದಿಂದ ಹೆಬ್ರಿ ಕಡೆಗೆ ಪ್ರಯಾಣಿಸುತ್ತಿದ್ದಾಗ, ಬೆಳಿಗ್ಗೆ ಸುಮಾರು 11:30 ಗಂಟೆಗೆ ಆಟೋ ರಿಕ್ಷಾವು ಹೆಬ್ರಿ ಗ್ರಾಮದ ಕೊಳಗುಡ್ಡೆ ಎಂಬಲ್ಲಿಗೆ ತಲುಪುವಾಎದುರುಗಡೆಯಿಂದ ಅಂದರೆ ಹೆಬ್ರಿ ಕಡೆಯಿಂದ ಶಿವಪುರ ಕಡೆಗೆ ಕೆಎ 16 ಬಿ 9549 ನೇ ಕಾರನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಸಂಧ್ಯಾರವರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ, ಆಟೋ ಚಾಲಕ ದಿನೇಶ್ ಶೆಟ್ಟಿ ಸಮೇತ ಸದ್ರಿ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರೂ ಗಾಯಗೊಂಡಿರುವುದಲ್ಲದೇ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕಮಲಮ್ಮ ಎಂವರೂ ಗಾಯಗೊಂಡಿರುವುದಾಗಿದೆ ಹಾಗೂ ಎರಡೂ ವಾಹನವು ಜಖಂಗೊಂಡಿರುತ್ತದೆ. ಈ ಬಗ್ಗೆ ಸಂಧ್ಯಾರವರು ನೀಡಿದ ದೂರಿನಂತೆ ಹೆಬ್ರಿ ಠಾಣಾ ಅಪರಾಧ ಕ್ರಮಾಂಕ 24/15 ಕಲಂ:279,337,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: