Sunday, April 19, 2015

Daily Crimes Reported as On 19/04/2015 at 19:30 Hrs


ಹಲ್ಲೆ ಪ್ರಕರಣ
  • ಕುಂದಾಪುರ:ದಿನಾಂಕ:18/04/2015 ರಂದು ಪಿರ್ಯಾದಿದಾರರಾದ ಪ್ರಶಾಂತ (25) ತಂದೆ:ಶೀನ @ ಶ್ರೀನಿವಾಸ ಪೂಜಾರಿ ವಾಸ: ಕೆರಾಡಿ, ಮಾರಣಕಟ್ಟೆ, ಕುಂದಾಪುರ ತಾಲೂಕುರವರು ತನ್ನ ತಾಯಿ ಮನೆಯಾದ ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಸಂತೋಷ ನಗರದ ಮಕ್ಕಿಮನೆ 5 ಸೆಂಟ್ಸ್‌ನಲ್ಲಿ ಇರುವಾಗ ರಾತ್ರಿ 8:30 ಗಂಟೆಗೆ ಆಪಾದಿತ ಅಶೋಕನು ಮನೆಗೆ ಬಂದು ಆತನ ಹೆಂಡತಿ ಅಂದರೆ ಪ್ರಶಾಂತರವರ ಅಕ್ಕನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಪ್ರಶಾಂತರವರು ‘ಯಾಕೆ ಬೈಯುವುದು, ಸುಮ್ಮನಿರಿ’ ಎಂದು ಬುದ್ದಿವಾದ ಹೇಳಿದಾಗ ಆಪಾದಿತ ಅಶೋಕನು ಏಕಾಏಕಿಯಾಗಿ ಅಲ್ಲಿಯೇ ಇದ್ದ ಒಂದು ಕತ್ತಿಯಿಂದ ಪ್ರಶಾಂತರವರ ಬಲಭುಜಕ್ಕೆ ಹೊಡೆದು ರಕ್ತಗಾಯಗೊಳಿಸಿರುವುದಾಗಿದೆ. ಈ ಬಗ್ಗೆ ಪ್ರಶಾಂತರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಪರಾಧ ಕ್ರಮಾಂಕ 114/2015, ಕಲಂ:504, 324 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಪಘಾತ ಪ್ರಕರಣ
  • ಬೈಂದೂರು:ದಿನಾಂಕ:18/04/2015 ರಂದು 16:30 ಗಂಟೆಗೆ ಕುಂದಾಪುರ ತಾಲೂಕು ತೆಗ್ಗರ್ಸೆ ಗ್ರಾಮದ ಪಿರ್ಯಾದಿದಾರರಾದ ಗಣೇಶ ಗಾಣಿಗ (51) ತಂದೆ:ಕುಪ್ಪಯ್ಯ ಗಾಣಿಗ ವಾಸ:ಆಶಾದೀಪ ನಿಲಯ, ತೆಗ್ಗರ್ಸೆ ಗ್ರಾಮರವರ ಅಂಗಡಿಯ ಎದುರು, ಕೊಲ್ಲೂರು-ಬೈಂದೂರು ರಸ್ತೆಯಲ್ಲಿ, ಬೈಂದೂರು ಕಡೆಯಿಂದ ಕೊಲ್ಲೂರು ಕಡೆಗೆ ಬರುತ್ತಿದ್ದ ಕೆಎ 20 ಸಿ 8167 ನಂಬ್ರದ ಕಾರು ಚಾಲಕ ರಾಘವೇಂದ್ರ ಎಂಬವನು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ  ವಾಸು ಪೂಜಾರಿ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ವಾಸು ಪೂಜಾರಿರವರ ತಲೆಗೆ, ಎಡಭುಜಕ್ಕೆ, ಎರಡೂ ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಗಾಯಾಳುವನ್ನು  ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ.ಈ ಬಗ್ಗೆ ಗಣೇಶ ಗಾಣಿಗರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 92/2015 ಕಲಂ:279, 337 .ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.    
ಅಸ್ವಾಭಾವಿಕ ಮರಣ ಪ್ರಕರಣಗಳು
  • ಮಣಿಪಾಲ:ಪಿರ್ಯಾದಿದಾರರಾದ ಭಾರತಿ, ಸಫಾ ಮಹಲ್, ಉಚ್ಚಿಲ ಬಸ್ ನಿಲ್ದಾಣ ಬಳಿ, ಉಡುಪಿ  ತಾಲೂಕು ಮತ್ತು ಜಿಲ್ಲೆರವರ ಗಂಡ ಭುಜಂಗ ಎನ್. ಸನಿಲ್ (67) ಎಂಬವರು ದಿನಾಂಕ:23/3/2015 ರಂದು ಪೂನದಿಂದ ಉಡುಪಿಗೆ  ವಾಪಾಸು ರೈಲಿನಲ್ಲಿ ಪ್ರಯಾಣಿಸಿ ಬಂದವರು, ಉಡುಪಿ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದು ಅಸ್ವಸ್ಥಗೊಂಡವರನ್ನು, ಅದೇ ದಿನ 108 ಸರಕಾರಿ ಅಂಬುಲೆನ್ಸ್‌ನಲ್ಲಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಚಿಕಿತ್ಸೆ  ಬಗ್ಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದವರು ದಿನಾಂಕ:18/4/2015 ರಂದು ಮದ್ಯಾಹ್ನ 3:45 ಗಂಟೆಗೆ ಮೃತ ಪಟ್ಟಿದ್ದಾಗಿದೆ.ಈ ಬಗ್ಗೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 13/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಮಣಿಪಾಲ:ಪಿರ್ಯಾದಿದಾರರಾದ ರಮೇಶ್ ತಂದೆ:ಪೆರಿಯಪ್ಪನ್, ವಾಸ:ನೇತಾಜಿ ನಗರ, ಅಲೆವೂರು ಗ್ರಾಮ, ಉಡುಪಿರವರ ಅಣ್ಣ ಮುತ್ತು (39) ಎಂಬವನು ರಮೇಶ್‌ರವರ ಮನೆಯ ಬಳಿ ಬೇರೆ ಮನೆಯಲ್ಲಿ ವಾಸವಾಗಿದ್ದು, ವಿಪರೀತ ಅಮಲು ಪದಾರ್ಥ ಸೇವಿಸುತ್ತಿದ್ದು,  ಈ ಬಗ್ಗೆ ಕುಡಿತ ಬಿಡಿಸುವ ಔಷಧಿ ಮಾಡಿದ್ದು, 3 ತಿಂಗಳಿನಿಂದ ಕುಡಿತ ಬಿಟ್ಟಿದ್ದು,  ಇದರಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ:19/04/2015 ರಂದು ಬೆಳಿಗ್ಗೆ 09:00 ಗಂಟೆಗೆ ಆತನ ವಾಸದ ಮನೆಯೊಳಗೆ ಮರದ ಅಡ್ಡೆಗೆ ಕುತ್ತಿಗೆಗೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ರಮೇಶ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ   ಅಸ್ವಾಭಾವಿಕ ಮರಣ ಕ್ರಮಾಂಕ 14/2015 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



No comments: