Wednesday, April 15, 2015

Daily Crimes Reported as On 15/04/2015 at 07:00 Hrs


ಜುಗಾರಿ ಪ್ರಕರಣ

  • ಹೆಬ್ರಿ: ದಿನಾಂಕ 14-04-2015 ರಂದು ಬೇಳಂಜೆ ಗ್ರಾಮದ ದುರ್ಗಾ ಕ್ಯಾಶ್ಯೂ ಇಂಡಸ್ಟ್ರೀಸ್ ನ ಹಿಂಬದಿಯಲ್ಲಿದ್ದ ಹಾಡಿಯಲ್ಲಿ ಅಂದರ್‌ ಬಾಹರ್‌ ಎಂಬ ಅಕ್ರಮ ಜುಗಾರಿ ಆಟವನ್ನು ಆಡುತ್ತಿದ್ದ ಷಣ್ಮುಗ (28), ಕುಮಾರ್ (26), ಗಜೇಂದ್ರ (42) ಎಂಬುವವರನ್ನು ಸಮಯ ಸಂಜೆ 14:15 ಗಂಟೆಗೆ ಹೆಬ್ರಿ ಪೊಲೀಸ್‌ ಠಾಣಾ ಪಿ.ಎಸ್‌.ಐ ಸೀತಾರಾಮ.ಪಿ ರವರ ನೇತ್ರತ್ವದಲ್ಲಿ ದಾಳಿ ಮಾಡಿ, ಆಟಕ್ಕೆ ಬಳಸಿದ 52 ಇಸ್ಪೀಟ್‌ ಎಲೆಗಳನ್ನು, ಒಂದು ಹಳೆಯ ಪೇಪರ್‌ ಹಾಗೂ 1420/- ರೂ ನಗದು ಹಣವನ್ನು ಮಹಜರು ಮುಖೇನ ಪಂಚರ ಸಮಸಕ್ಷಮ ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  22/15, ಕಲಂ: 87 ಕೆ.ಪಿ ಆಕ್ಟ್‌ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಹೆಬ್ರಿ:  ಅಶೋಕ (35) ಎಂಬುವವರಿಗೆ ದಿನಾಂಕ 19-04-2015 ರಂದು ಮದುವೆ ಇದ್ದು, ಸದ್ರಿಯವರು ದಿನಾಂಕ 12-04-2015 ರಂದು ಬೆಳಿಗ್ಗೆ 9:00 ಗಂಟೆಗೆ ನಾಲ್ಕೂರು ಗ್ರಾಮದ, ಮುದ್ದೂರಿನಲ್ಲಿರುವ ತನ್ನ ಮನೆಯಿಂದ ಮದುವೆಯ ಕಾರ್ಡನ್ನು ಸಂಬಂಧಿಕರಿಗೆ ಕೊಟ್ಟು ಬರುತ್ತೇನೆ ಎಂದು ತನ್ನ ತಾಯಿಯ ಹತ್ತಿರ ಹೇಳಿ ಹೋದವರು ದಿನಾಂಕ 1404-2015 ರಾತ್ರಿ 19:30 ಗಂಟೆಯವರೆಗೂ ಮರಳಿ ಮನೆಗೆ ಬಾರದೇ ಇದ್ದುದಾಗಿದೆ.  ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  23/15 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 ಅಪಘಾತ ಪ್ರಕರಣ


  • ಪಡುಬಿದ್ರಿ: ಫಿರ್ಯಾದಿ ರಘುನಾಥ ಸುವರ್ಣ ಇವರು ಪಡುಬಿದ್ರಿಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ: 13/04/2015 ರಂದು ಸಂಜೆ 06:15 ಗಂಟೆಗೆ ತನ್ನ ಬಾಬ್ತು ಟಿವಿಎಸ್ ವೇಗೋ ದ್ವಿಚಕ್ರ ವಾಹನ ನಂ. ಕೆಎ 20 ಇಎಚ್ 0709 ನೇದರಲ್ಲಿ ಪಡುಬಿದ್ರಿಯಿಂದ ಇನ್ನಾದಲ್ಲಿರುವ ತನ್ನ ಮನೆಯ ಕಡೆ ಹೋಗುತ್ತಿದ್ದು, ನಂದಿಕೂರು ರೈಲ್ವೇ ಬಿಡ್ಜ್ ತಲುಪುವಾಗ್ಗೆ ರಾಜ್ಯ ಹೆದ್ದಾರಿ-01 ರಸ್ತೆಯಲ್ಲಿ ಎದುರುಗಡೆಯಿಂದ ಪಡುಬಿದ್ರಿ ಕಡೆಗೆ ಟಿಪ್ಪರ್ ಲಾರಿ ನಂ. ಕೆಎ 14 2520 ನೇದರ ಚಾಲಕನು ತನ್ನ ಬಾಬ್ತು ಟಿಪ್ಪರನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಫಿರ್ಯಾದುದಾರರು ತನ್ನ ವಾಹನ ಸಹಿತ ರಸ್ತೆಗೆ ಬಿದ್ದ ಪರಿಣಾಮ ಬಲಕಾಲಿನ ಮೂಳೆ ಮುರಿತ ಹಾಗೂ ಬಲ ಭುಜದ ಬಳಿ ತರಚಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 50/15 ಕಲಂ  279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ: ಕೃಷ್ಣ ಶೆಟ್ಟಿಯವರು ದಿನಾಂಕ: 11/04/2015ರಂದು ಸಂಜೆ 6.00 ಗಂಟೆಯ ಸಮಯಕ್ಕೆ ತನ್ನ ಭಾವ ನೆಂಟ ಸುಖೇಶ್ ಎಂಬವರು ಸವಾರಿ ಮಾಡಿಕೊಂಡಿದ್ದ ಬಜಾಜ್ ಪಲ್ಸರ್ ಮೋಟಾರ್ ಬೈಕ್ ನಂಬ್ರ KA 20 EG 5330 ನೇದರಲ್ಲಿ ಸಹಸವಾರನಾಗಿ ಪ್ರಯಾಣಿಸುತ್ತಿರುವಾಗ ಶಂಕರನಾರಾಯಣ ಗ್ರಾಮದ ಕಟ್ಟೆಮಕ್ಕಿ ಎಂಬಲ್ಲಿ ಸವಾರ ತನ್ನ ಬಾಬ್ತು ಮೋಟಾರ್ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಸವಾರ ಸುಖೇಶ್ ಹಾಗೂ ಸಹ ಸವಾರನಾದ ಕೃಷ್ಣ ಶೆಟ್ಟಿಯವರು ಬೈಕಿನಿಂದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸವಾರನಿಗೆ ತರಚಿದ ಗಾಯವಾಗಿ ಸಹ ಸವಾರನಿಗೆ ಎಡ ಭುಜಕ್ಕೆ ಒಳ ಜಖಂ ಆಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 65/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಶಂಕರನಾರಾಯಣ: ಶ್ರೀಮತಿ ಗುಲಾಬಿರವರು ದಿನಾಂಕ: 13/04/2015ರಂದು ಬೆಳಿಗ್ಗೆ 7.00 ಗಂಟೆಯ ಸಮಯಕ್ಕೆ ತನ್ನ ಅಕ್ಕನ ಮಗ ದೇವೇಂದ್ರ ಎಂಬವರು ಸವಾರಿಮಾಡಿ ಕೊಂಡಿದ್ದ TVS ಮೋಟಾರ್ ಬೈಕ್ ನಂಬ್ರ KA 20 W 3660 ನೇದರಲ್ಲಿ ಸಹಸವಾರಳಾಗಿ ಪ್ರಯಾಣಿಸುತ್ತಿರುವಾಗ ಗೋಳಿಯಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ತಿರುವಿನಲ್ಲಿ ಸವಾರ ತನ್ನ ಬಾಬ್ತು ಮೋಟಾರ್ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ ಬೈಕ್ ಸವಾರನ ಹತೋಟಿ ತಪ್ಪಿ ಎಡಕ್ಕೆ ವಾಲಿ ಸವಾರ ಹಾಗೂ ಸಹ ಸವಾರಳು ಬೈಕಿನಿಂದ ಮಣ್ಣು ರಸ್ತೆಗೆ ಎಸೆಯಲ್ಪಟ್ಟು ಸವಾರನಿಗೆ ತರಚಿದ ಗಾಯವಾಗಿ ಸಹಸವಾರಳಿಗೆ ಬಲ ಕೈಯ ಕೋಲು ಕೈಗೆ ಹಾಗೂ ಗಲ್ಲಕ್ಕೆ ತರಚಿದ ಗಾಯವಾಗಿ ತಲೆಯ ಹಿಂಭಾಗಕ್ಕೆ ಜಜ್ಜಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 66/15 ಕಲಂ  279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ

  • ಬೈಂದೂರು: ದಿನಾಂಕ 14/04/2015 ರಂದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಪಿರ್ಯಾಧಿ ಸತೀಶ್‌ ಪ್ರಭು ಇವರ ಮಗಳು ಅನಸೂಯಾಳು ಕುಂದಾಪುರ ತಾಲೂಕು ಶಿರೂರು ಗ್ರಾಮದ ಗುಮ್ಮನಾಡಿ ಎಂಬಲ್ಲಿ ಇರುವ ಅವರ ಬಾಬ್ತು ತೋಟದಲ್ಲಿರುವ ಪಂಪ್‌ಸೆಟ್‌ ಅನ್ನು ಚಾಲು ಮಾಡಲು ಹೋಗುತ್ತಿರುವಾಗ ಆಪಾದಿತಳಾದ ಪ್ರಿಯಾಳು ಅನಸೂಯಾಳನ್ನು ಅಡ್ಡಗಡ್ಡಿ ಅನಸೂಯಾಳನ್ನು  ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು  ಕೈಯಿಂದ ಗುದ್ದಿದಳು.  ಆಗ ಅಲ್ಲಿಯೇ ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಾಳ ತಂದೆ ವೆಂಕಟರಮಣ ಶ್ಯಾನುಭೋಗರವರು ಅಲ್ಲಿಗೆ ಬಂದು ತನ್ನ ಕೈಯಲ್ಲಿದ್ದ ಕತ್ತಿಯನ್ನು ಅನುಸೂಯಾಳ ಕಡೆ ತೋರಿಸಿ ಕೊಂದು ಹಾಕುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ 83/15 ಕಲಂ 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: