Tuesday, April 14, 2015

Daily Crimes Reported as On 14/04/2015 at 17:00 Hrs


ಹಲ್ಲೆ ಪ್ರಕರಣ
  • ಪಡುಬಿದ್ರಿ:ದಿನಾಂಕ:12/04/2015 ರಂದು ಸಂಜೆ 15:30 ಗಂಟೆಗೆ ಉಡುಪಿ ತಾಲೂಕು ನಡ್ಸಾಲು ಗ್ರಾಮದ ಕಂಚಿನಡ್ಕ ಎಂಬಲ್ಲಿ ಪಿರ್ಯಾದಿದಾರರಾದ ಇಸ್ಮಾಯಿಲ್, (42), ತಂದೆ:ಅಬ್ದುಲ್ ಖಾದರ್, ವಾಸ:ಜುಬೇದಾ ಪ್ಯಾಲೇಸ್, ಕಂಚಿನಡ್ಕ ಶಾಲೆ ಬಳಿ, ಪಡುಬಿದ್ರಿ, ಉಡುಪಿ ತಾಲೂಕು ಮತ್ತು ಜಿಲ್ಲೆರವರು ಮನೆಯಲ್ಲಿದ್ದ ಸಮಯ ಇಸ್ಮಾಯಿಲ್‌ರವರ ಮಗ ಮೊಹಮ್ಮದ್ ಫವಾಝ್ ಹಾಗೂ ಇಸ್ಮಾಯಿಲ್‌ರವರ ಹೆಂಡತಿಯ ತಮ್ಮಂದಿರಾದ ಅನ್ಸರ್ ಮತ್ತು ತೌಸೀಫ್‌ರವರು ಇಸ್ಮಾಯಿಲ್‌ರವರ ಮನೆಗೆ ಬಂದಿದ್ದ ಸಮಯ ಮಗನಲ್ಲಿ  ಇಸ್ಮಾಯಿಲ್‌ರವರು  ಮನೆಗೆ ಯಾಕೆ ಬರುವುದಿಲ್ಲವಾಗಿ ಹಾಗೂ ತನ್ನಲ್ಲಿ ಯಾಕೆ ಮಾತನಾಡುವುದಿಲ್ಲವಾಗಿ ಕೇಳಿದಾಗ, ಏರುಧ್ವನಿಯಲ್ಲಿ ಮಾತನಾಡಿದ್ದು, ಇದೇ ವಿಚಾರದಲ್ಲಿ ಮನೆಗೆ ಬಂದ ಅನ್ಸರ್ ಹಾಗೂ ತೌಸೀಫ್‌‌ರವರೊಂದಿಗೆ ಮಾತಿಗೆ ಮಾತು ಬೆಳೆದು ಅನ್ಸರ್ ಹಾಗೂ ತೌಸೀಫ್‌ರವರು ಕೈಗಳಿಂದ ಇಸ್ಮಾಯಿಲ್‌ರವರ ಮುಖಕ್ಕೆ, ಬೆನ್ನಿಗೆ ಹಾಗೂ ದೇಹಕ್ಕೆ ಹೊಡೆದು ಗುದ್ದಿದ ನೋವುಂಟು ಮಾಡಿದ್ದು, ಅಲ್ಲದೇ ಅನ್ಸರ್‌ರವರು ಕೈಯಲ್ಲಿದ್ದ ಆಯುಧದಿಂದ ಇಸ್ಮಾಯಿಲ್‌ರವರಿಗೆ ಬೀಸಿದಾಗ ಎರಡೂ ಕೋಲು ಕೈಗೆ ಗೀರು ಗಾಯಾವಾಗಿರುತ್ತದೆ. ಇಸ್ಮಾಯಿಲ್‌ರವರು ಬೊಬ್ಬೆ ಹಾಕಿದಾಗ ಆರೋಪಿಗಳು ಮನೆಯಿಂದ ಹೊರಟು ಹೋಗಿದ್ದು, ಹೋಗುವ ಸಮಯ ಇಸ್ಮಾಯಿಲ್‌ರವರನ್ನು ಉದ್ದೇಶಿಸಿ “ನಿನ್ನನ್ನು ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ” ಎಂಬುದಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಇಸ್ಮಾಯಿಲ್‌ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 49/15 ಕಲಂ:323, 324, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. No comments: