Monday, April 13, 2015

Daily Crimes Reported as On 13/04/2015 at 07:00 Hrs

ಅಪಘಾತ ಪ್ರಕರಣ
  • ಅಮಾಸೆಬೈಲು : ದಿನಾಂಕ  11/04/2015 ರಂದು ಪಿರ್ಯಾದಿ ಮಂಜುನಾಥ ಶೆಟ್ಟಿ  ಇವರು ಹಾಗೂ ಅವರ ಭಾವ ಶಾಂತರಾಮ ಶೆಟ್ಟಿರವರೊಂದಿಗೆ ಬೆಂಗಳೂರಿನಿಂದ ತಮ್ಮ ಪರಿಯದ ಗಿರೀಶ ಯಾಧವ ರವರ ಇಂಡಿಕಾ ಕಾರನಲ್ಲಿ  ಊರಿಗೆ ಬರುತ್ತಿರುವಾಗ ದಿನಾಂಕ 12/04/2015 ರಂದು  ಬೆಳಿಗ್ಗೆ  03.00 ಗಂಟೆಗೆ ಆಗುಂಬೆ ಮಾರ್ಗವಾಗಿ  ಮಡಾಮಕ್ಕಿ  ಶಿರಂಗೂರು  ಬಳಿ ಬರುತ್ತಿರುವಾಗ ಕಾರಿನ ಚಾಲಕ ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿದ ಪರಿಣಾಮ  ಕಾರು  ರಸ್ತೆಯ  ಬಲ  ಬದಿಗೆ ಚರಂಡಿಗೆ ಹೋಗಿ ಬಿದ್ದ ಪರಿಣಾಮ ಕಾರಿನಲ್ಲಿದ್ದ  ಶಾಂತರಾಮ ಶೆಟ್ಟಿ  ಯವರಿಗೆ ಬಲ  ಕೈ ಜಖಂ ಉಂಟಾಗಿರುತ್ತದೆ ಹಾಗೂ ಪಿರ್ಯಾದಿದಾರಿಗೆ ಕುತ್ತಿಗೆ ಭಾಗಕ್ಕೆ ನೋವು ಉಂಟಾಗಿರುತ್ತದೆ, ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ ಸಿ  ಆಸ್ಪತ್ರೆಯಲ್ಲಿ   ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಕಾರಿನ ನಂಬ್ರ ಕೆ.ಎ 53.ಬಿ 2270 ಆಗಿರುತ್ತದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  13/15 ಕಲಂ: ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಉಡುಪಿ: ಪಿರ್ಯಾದಿ ಸಂತೋಷ ಇವರು ದಿನಾಂಕ 13.04.2015 ರಂದು ತನ್ನ ಬಾಬ್ತು ರಿಕ್ಷಾವನ್ನು ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಮೊರ್ಡನ್ ಸೆಲೂನ್ ಎದುರು ಇರುವ ಅಟೋ ರಿಕ್ಷಾ ನಿಲ್ದಾಣದಲ್ಲಿ ತನ್ನ ರಿಕ್ಷಾದ ಬಳಿ ನಿಂತಿರುವಾಗ ಬೆಳಗಿನ ಜಾವ ಸಮಯ ಸುಮಾರು 2:30 ಗಂಟೆಗೆ ಪರಿಚಯದ ಮೂವರು ವ್ಯಕ್ತಿಗಳು ಬಂದು ಅವಾಚ್ಯವಾಗಿ ಬೈದು ಸಂತೋಷ ಮತ್ತು ಸುರೇಂದ್ರ @ ಗುರುಪ್ರಸಾದ್  ಎಂಬವರು ಕೈಯಿಂದ ಹೊಡೆದು ಮತ್ತು ಅನ್ಸರ್ ಎಂಬವನು ಒಂದು ಸೊಡಾ ಬಾಟ್ಲಯಿಂದ ಹೊಡೆದ ಪರಿಣಾಮ ಎಡಕಿವಿ ಹಿಂದೆಗಡೆ ಒಳಜಖಂಗೊಂಡಿರುತ್ತದೆ.ಪಿರ್ಯಾದಿದಾರರಿಗೆ ಹಲ್ಲೆ ಮಾಡುತ್ತಿರುವುದನ್ನು ನೋಡಿ ರಿಕ್ಷಾ ನಿಲ್ದಾಣದಲ್ಲಿದ್ದ ಯೊಗೀಶ ಮತ್ತು ಸಂದೀಪ್‌ರವರು ಬಂದ ಕೊಡಲೇ ಅವರುಗಳು ಬಂದ ರಿಕ್ಷಾದಲ್ಲಿ ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  86/2015  ಕಲಂ 323,324,  504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
  • ಬೈಂದೂರು: ದಿನಾಂಕ 05-01-2015 ರಂದು ಮದ್ಯಾಹ್ನ 11:00 ಗಂಟೆಯ ಸಮಯಕ್ಕೆ ಕುಂದಾಪುರ ತಾಲೂಕು ಮುದ್ರಮಕ್ಕಿ  ರಸ್ತೆ ಶಿರೂರು ಗ್ರಾಮ ಎಂಬಲ್ಲಿರುವ ಪಿರ್ಯಾಧಿ ಪ್ರಿಯಾ ವೆಂಕಟರಮಣ ಶ್ಯಾನುಭಾಗ್‌  ಇವ ಬಾಬ್ತು ಜಾಗದಲ್ಲಿ ಸರ್ವೇಯರ್ಮುಖಾಂತರ ಜಾಗದ ಸರ್ವೇ ಮಾಡಿಸುತ್ತಿರುವ ಸಮಯ ಆರೋಪಿತ 1) ಸುಬ್ರಾಯ ಪ್ರಭು 2) ಸುಬ್ರಾಯ ಪ್ರಭು ಹೆಂಡತಿ 3) ಸತೀಶ್ಸುಬ್ರಾಯ ಪ್ರಭು 4) ಸತೀಶ್ಸುಭ್ರಾಯ ಪ್ರಭು ಹೆಂಡತಿ  ಪಿರ್ಯಾಧಿದಾರರ ಬಾಬ್ತು ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ  ಆಪಾದಿತ ಸತೀಶ್ಸುಬ್ರಾಯ ಪ್ರಭು ಎಂಬುವವರು ಜೀವ ಬೆದರಿಕೆ ಹಾಕಿರುತ್ತಾನೆ. ಉಳಿದ ಆರೋಪಿತರು ಪಿರ್ಯಾಧಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  82/15 ಕಲಂ: ಕಲಂ 447, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಮಣಿಪಾಲ: ಕುಮಾರ ಪ್ರಾಯ 50 ವರ್ಷ ಇವರು  ವಿಪರೀತವಾಗಿ ಅಮಲು ಪದಾರ್ಥ ಸೇವಿಸಿಕೊಂಡಿದ್ದವನು  ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದವನು ರಾತ್ರಿ ಸಮಯ ಜ್ವರ ಬಂದಿದ್ದು  ದಿನಾಂಕ 12/04/2015 ರಂದು ಬೆಳಿಗ್ಗೆ 9:00 ಗಂಟೆಗೆ  ಜ್ವರ ಜಾಸ್ತಿಯಾದದ್ದರಿಂದ ಉಡುಪಿ ಸರಕಾರಿ ಆಸ್ಪತ್ರೆಗೆ  ಚಿಕಿತ್ಸೆಗೆ ಕೊಂಡು ಹೋದಾಗ  ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾಗಿದೆ. ಈ ಬಗ್ಗೆ ಮಣಿಪಾಲ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 11/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


No comments: