Saturday, April 11, 2015

Daily Crimes Reported as On 11/04/2015 at 17:00 Hrs


ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ:ದಿನಾಂಕ:10/04/2015 ರ ರಾತ್ರಿ 9:00 ಗಂಟೆಯಿಂದ 11/04/2015 ರ ಬೆಳಿಗ್ಗೆ 05:45 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು, ಕಾಡೂರು ಗ್ರಾಮದ ಬೆಳ್ತಾಡಿ ಎಂಬಲ್ಲಿ ಪಿರ್ಯಾದಿದಾರರಾದ ಕೃಷ್ಣ ಪೂಜಾರಿ (45) ತಂದೆ:ದಿವಂಗತ ಗಿರಿಯಾ ಪೂಜಾರಿ, ವಾಸ:ಶ್ರೀ ದುರ್ಗಾ ನಿಲಯ, ನಡೂರು ಕಂಡಿಕೆ, ನೆಕ್ಕರ್ಕೆ, ನಡೂರು  ಗ್ರಾಮ ಉಡುಪಿ ತಾಲೂಕುರವರ ತಂಗಿ ಸುಮತಿ (40) ಎಂಬವರು ತನ್ನ ಗಂಡ ತೀರಿ ಹೋದ ಚಿಂತೆಯಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು ಮತ್ತು ಹಣಕಾಸಿನ ಅಡಚಣೆಯಿದ್ದು ಅಥವಾ ಬೇರೆ ಯಾವುದೋ ವೈಯಕ್ತಿಕ ಕಾರಣಗಳಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ವಾಸದ ಮನೆಯ ಕೋಣೆಯ ಗೋಡೆಯ ಮರದ ಜಂತಿಗೆ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೃಷ್ಣ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 20/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮಟ್ಕಾ ಜುಗಾರಿ ಪ್ರಕರಣ
  • ಕೊಲ್ಲೂರು:ಈ ದಿನ ದಿನಾಂಕ:11/04/15 ರಂದು 13:15 ಗಂಟೆಗೆ ವಿಜಯ ಅಮೀನ್‌, ಎ.ಎಸ್.ಐ, ಕೊಲ್ಲೂರು ಪೊಲೀಸ್‌ ಠಾಣೆರವರು ಕುಂದಾಪುರ ಮಾನ್ಯ ಪೊಲೀಸ್ ಉಪಾಧೀಕ್ಷಕರವರ ಆದೇಶದಂತೆ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಉದಯ ಕುಂದರ್, ರತ್ನಾಕರ ಮತ್ತು ಪ್ರಕಾಶ್‌ ಜೊತೆಗೆ ಇಲಾಖಾ ಜೀಪು ನಂಬ್ರ KA 20 G-346 ನೇದರಲ್ಲಿ ಚಾಲಕ ಗಿರೀಶ್‌ ಜೊತೆಗೆ ಖಚಿತ ವರ್ತಮಾನದ ಮೇರೆಗೆ 13:20  ಗಂಟೆಗೆ ಚಿತ್ತೂರು ಗ್ರಾಮದ ಚಿತ್ತೂರು ಜಂಕ್ಷನ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಮಟ್ಕಾಜುಗಾರಿ ಆಟ ನಡೆಸುತ್ತಿದ್ದ ಆಪಾದಿತ ರಮೇಶ ಪೂಜಾರಿ (30) ತಂದೆ:ಶೀನ ಪೂಜಾರಿ ವಾಸ:ಮುಂಬಾರು ಕಾವ್ರಾಡಿ ಗ್ರಾಮ ಕುಂದಾಪುರ ತಾಲೂಕು ಎಂಬವನನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದಿದ್ದು, ಆಪಾದಿತನಿಗೆ ಆತನ ತಪ್ಪಿತದ ಬಗ್ಗೆ ತಿಳಿಸಿ ವಿಚಾರಿಸಲಾಗಿ, ತಾನು ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದು, ಸಾರ್ವಜನಿಕರು ಮಟ್ಕಾ ನಂಬ್ರಕ್ಕೆ ಪಣವಾಗಿ ಕಟ್ಟಿದ್ದ ಹಣವನ್ನು ಮುಖ್ಯ ಬಿಡ್ಡರ್‌ ಆಪಾದಿತ ಸಂಜೀವ ಪೂಜಾರಿ ವಂಡ್ಸೆ ಎಂಬವರಿಗೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಆಪಾದಿತನಿಂದ ಮಹಜರು ಮುಖೇನ ಆತನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು ರೂಪಾಯಿ 930/-, ಬಾಲ್‌ ಪೆನ್ನು-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1ನ್ನು ವಶಪಡಿಸಿಕೊಂಡಿದ್ದಾಗಿದೆ.ಈ ಬಗ್ಗೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 37/2015 ಕಲಂ:78(i)(iii) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: