Saturday, April 11, 2015

Daily Crimes Reported as On 11/04/2015 at 07:00 Hrs


ಅಪಘಾತ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ಮನೋಜ್ ಖಾರ್ವಿ (43), ತಂದೆ:ದಿವಂಗತ ಗೋಪಾಲ ಖಾರ್ವಿ, ವಾಸ:ಜ್ಯೋತಿ ನಗರ, ಕಾಸರ ಕೋಡು, ಹೊನ್ನಾವರ ತಾಲೂಕುರವರು ದಿನಾಂಕ 07/04/2015 ರಂದು 21:30 ಗಂಟೆಗೆ ಸಾಸ್ತಾನದ ಮಧುರ ಹೋಟೆಲ್ ನಿಂದ ಊಟ ತೆಗೆದುಕೊಂಡು ರಾ.ಹೆ 66 ರಲ್ಲಿ  ರಸ್ತೆಯ ಪೂರ್ವಬದಿಯಲ್ಲಿ ನಿಂತಿರುವಾಗ, ಕೋಟ ಕಡೆಯಿಂದ ಉಡುಪಿ ಕಡೆಗೆ ಹೋಗುವ ಕೆಎ 20 ವೈ 8494 ನೇ ಮೋಟಾರು ಸೈಕಲ್ ಸವಾರನು  ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ರಸ್ತೆಯ ಪೂರ್ವ ಬದಿಯಲ್ಲಿ ನಿಂತಿದ್ದ ಮನೋಜ್ ಖಾರ್ವಿರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಮನೋಜ್ ಖಾರ್ವಿರವರ ಎರಡು ಕೈಗಳ ಮೂಳೆ ಮುರಿದಿದ್ದು, ಕಾಲುಗಳಿಗೆ ರಕ್ತಗಾಯವಾಗಿರುತ್ತದೆ.ಈ ಬಗ್ಗೆ ಮನೋಜ್ ಖಾರ್ವಿರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 67/15 ಕಲಂ:279, 338 ಐಪಿಸಿ & 134 (ಬಿ) ಐ.ಎಂ.ವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಬ್ರಹ್ಮಾವರ: ದಿನಾಂಕ: 10/04/2015 ರಂದು  ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ  3 ಗಂಟೆಯ ಮದ್ಯದ ಅವಧಿಯಲ್ಲಿ ಉಡುಪಿತಾಲೂಕು ಹೆಗ್ಗುಂಜೆ ಗ್ರಾಮದ ನಡುಜೆಡ್ಡು ಎಂಬಲ್ಲಿ ಪಿರ್ಯಾದಿ ಪ್ರಶಾಂತ ಪೂಜಾರಿ (27) ತಂದೆ: ಸುಧಾಕರ ಪೂಜಾರಿ ವಾಸ:ನಡುಜೆಡ್ಡು  ಮಂದರ್ತಿ ಅಂಚೆ, ಹೆಗ್ಗುಂಜೆ ಗ್ರಾಮ ಉಡುಪಿ ತಾಲೂಕು ಇವರ ದೊಡ್ಡಮ್ಮನಾದ ಸುಮಾರು 56 ವರ್ಷ ಪ್ರಾಯದ ಅಮ್ಮಣ್ಣಿ ಪೂಜಾರ್ತಿ ಎಂಬವರು ಮಾನಸಿಕ ಖಿನ್ನತೆಯಿಂದ ಇದ್ದು ಅಲ್ಲದೆ ಅಸೌಖ್ಯದಲ್ಲಿದ್ದು ಅದೇ ಚಿಂತೆಯಿಂದ ಅವರ ಮನೆಯ ಎದುರುಗಡೆ ಇರುವ ಪಾರ್ವತಿ ಶೆಡ್ತಿಯವರ ಮನೆಯ ಕೋಣೆಯ ಮಾಡಿಗೆ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಕೊಂಡಿರುವುದಾಗಿದೆ. ಈ ಬಗ್ಗೆ ಪ್ರಶಾಂತ ಪೂಜಾರಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 19/2015 ಕಲಂ:174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾರ್ಕಳ ನಗರ:ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಬೋರ್ಕಟ್ಟೆಯ ಅನ್ಕಾಡಿ ನಿವಾಸಿ ಪಿರ್ಯಾದಿದಾರರಾದ ಶ್ರೀ ಹರಿಶ್ಚಂದ್ರ ಆಚಾರ್ಯ (40), ತಂದೆ:ದಿವಂಗತ ವಾದಿರಾಜ ಆಚಾರ್ಯ, ವಾಸ:ದರ್ಖಾಸು ಮನೆ ಬೊರ್ಕಟ್ಟೆ, ಮಿಯ್ಯಾರು ಗ್ರಾಮ, ಕಾರ್ಕಳ ತಾಲೂಕುರವರ ಅಣ್ಣ ಚಂದ್ರಶೇಖರ ಆಚಾರ್ಯ (53) ಎಂಬವರು  ಕಳೆದ 3 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತಿದ್ದು,  ಅದೇ ವಿಚಾರದಲ್ಲಿ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:10/04/2015 ರಂದು  ಮದ್ಯಾಹ್ನ 13:00 ಗಂಟೆಗೆ  ತನ್ನ ಮನೆಯ ಛಾವಡಿಯಲ್ಲಿರುವ ಮರದ ಆಡ್ಡೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.ಈ ಬಗ್ಗೆ ಹರಿಶ್ಚಂದ್ರ ಆಚಾರ್ಯರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 11/2015 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ನಗರ:ಕಾರ್ಕಳ ತಾಲೂಕು ಕಸಬ ಗ್ರಾಮದ ಕುಂಟಲ್ಪಾಡಿ ನಿಯೋನ್‌ ಮನೆಯ ನಿವಾಸಿ ಜೋಯೆಲ್‌ ಪೀಟರ್‌ ಕರ್ಕಡ (40) ಎಂಬವರು ಪಿತ್ತಜನಕಾಂಗದ ಖಾಯಿಲೆಯಿಂದ ಬಳಲುತ್ತಿದ್ದವರು ದಿನಾಂಕ 10/04/2015 ರಂದು 16:30 ಗಂಟೆಗೆ ತನ್ನ ಮನೆ ಎದುರು ನಿಲ್ಲಿಸಿದ್ದ ಕಾರಿನಲ್ಲಿ ಕುಳಿತಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶ್ರೀಮತಿ ನವನೀತ ರಶ್ಮಿ ಕರ್ಕಡ, (35) ಗಂಡ:ಜೋಯೆಲ್‌ ಪೀಟರ್‌ ಕರ್ಕಡ, ವಾಸ:ನಿಯೋನ್”, ಕುಡ್ವ ಕಾಂಪೌಂಡ್‌, ಕುಂಟಲ್ಪಾಡಿ 1 ನೇ ಅಡ್ಡ ರಸ್ತೆ, ಕಸಬ ಗ್ರಾಮ, ಕಾರ್ಕಳ ತಾಲೂಕುರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 12/2015 ಕಲಂ 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣ
  • ಉಡುಪಿ ನಗರ: ದಿನಾಂಕ 10/04/2015 ರಂದು ಮಧ್ಯಾಹ್ನ 12:00 ಗಂಟೆಗೆ ಪಿರ್ಯಾದಿ ವಿಷ್ಣುಮೂರ್ತಿ ಉಪಾದ್ಯಾಯ ‌(39) ತಂದೆ:ವಿ.ವೆಂಕಟರಮಣ ವಾಸ:ಪಾಂಡುರಂಗ ಕೂಡಂಕೂರು ಪೋಸ್ಟ್‌ ನಿಟ್ಟೂರು ಪುತ್ತೂರು ಗ್ರಾಮ  ಇವರು ಉಡುಪಿ ತಾಲೂಕು ಪುತ್ತೂರು ಗ್ರಾಮದ  ‌ಕೂಡಂಕೂರು, ನಿಟ್ಟೂರು ಎಂಬಲ್ಲಿರುವ ತಮ್ಮ ಹೆಂಡತಿಯೊಂದಿಗೆ ಮನೆಯಲ್ಲಿರುವಾಗ ಎದುರು ಮನೆಯ ವಾಸಿ ಉಷಾ ಎಂಬವರು ಪಿರ್ಯಾದಿದಾರರ ಮನೆಯ ಗೇಟ್ ಬಳಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ಮಾಟ ಮಂತ್ರ ಮಾಡಿಸುತ್ತೀಯಾ, ಇದೇ ರೀತಿ ಮಾಟ ಮಂತ್ರ ಮುಂದುವರೆಸಿದಲ್ಲಿ ನಿನ್ನನ್ನು ಮತ್ತು ನಿನ್ನ ಹೆಂಡತಿ ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2015 ಕಲಂ 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
ಇತರ ಪ್ರಕರಣ
  • ಹಿರಿಯಡ್ಕ:ದಿನಾಂಕ:10/04/2015 ರಂದು ಪಿರ್ಯಾದಿದಾರರಾದ ವಾದಿರಾಜ್ ಆಚಾರ್ಯ (53) ತಂದೆ:ರುದ್ರಯ್ಯ ಆಚಾರ್ಯ, ವಾಸ:ಈರೆಬೆಟ್ಟು ಪಾಡಿಗಾರ, ಪೆರ್ಡೂರು ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕುರವರು ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಕುಂಜದಕಟ್ಟೆ ಎಂಬಲ್ಲಿರುವ ಶಾಂತಾರಾಮ ಸೂಡ ಎಂಬವರ ಜಾಗದಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ 2:30 ಗಂಟೆಗೆ ವಾದಿರಾಜ್ ಆಚಾರ್ಯರವರ ಪರಿಚಯದ ತುಕಾರಾಮ ನಾಯಕ್ ತಂದೆ:ದಾಮೋದರ ನಾಯಕ್ ಹಾಗೂ ಇನ್ನೊಬ್ಬ ಕಾರು ನಂಬ್ರ ಕೆಎ 30 ಎಮ್ 3037 ನೇದರಲ್ಲಿ ಬಂದು ಸಮಾನ ಉದ್ದೇಶದಿಂದ ವಾದಿರಾಜ್ ಆಚಾರ್ಯರವರಿಗೆ ಏಕಾಏಕಿ ಕೈಯಿಂದ ಹಲ್ಲೆ ನಡೆಸಿ, ವಾದಿರಾಜ್ ಆಚಾರ್ಯರವರ ಶರ್ಟ್‌ ಕಿಸೆಯಲ್ಲಿ ಇದ್ದ ಸುಮಾರು 3000/- ರೂಪಾಯಿ ನಗದು ಹಾಗೂ ಸುಮಾರು 2000/- ಬೆಲೆಬಾಳುವ ಸ್ಯಾಮ್‌ಸಂಗ್ ಮೊಬೈಲನ್ನು ಕಸಿದುಕೊಂಡು ವಾದಿರಾಜ್ ಆಚಾರ್ಯರವರನ್ನು ಉದ್ದೇಶಿಸಿ ಇನ್ನು ಮುಂದಕ್ಕೆ ಈ ಸ್ಥಳದಲ್ಲಿ ಕಾಣಿಸಿಕೊಂಡರೆ ನಿನ್ನ ಕೈಕಾಲು ಮುರಿದು ಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ವಾದಿರಾಜ್ ಆಚಾರ್ಯರವರು ನೀಡಿದ ದೂರಿನಂತೆ ಹಿರಿಯಡ್ಕ ಠಾಣಾ ಅಪರಾಧ ಕ್ರಮಾಂಕ 26/2015 ಕಲಂ 394 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: