Friday, April 10, 2015

Daily Crimes Reported as On 10/04/2015 at 17:00 Hrs


ಅಪಘಾತ ಪ್ರಕರಣ
  • ಗಂಗೊಳ್ಳಿ:ದಿನಾಂಕ:09/03/2015 ರಂದು 19:30 ಗಂಟೆಗೆ ಪಿರ್ಯಾದಿದಾರರಾದ ಜರ್ನಾಧನ ಮಧ್ಯಸ್ಥ (48) ತಂದೆ:ದಿವಂಗತ ಶಂಕರ  ನಾರಾಯಣ ಮಧ್ಯಸ್ಥ, ಮೂಡು ಮರವಂತೆ, ಮರವಂತೆ ಗ್ರಾಮರವರು ತನ್ನ ಮೋಟಾರ್ ಸೈಕಲ್ ನಂಬ್ರ KA 20 Q 3971 ರಲ್ಲಿ N.H 66 ತ್ರಾಸಿಯಿಂದ ಮುಳ್ಳಿಕಟ್ಟೆ ಕಡೆಗೆ ಹೋಗುತ್ತಿದ್ದಾಗ, ಮೊವಾಡಿ ಕ್ರಾಸ್ ಹತ್ತಿರ ಬರುವಾಗ ಎದುರಿನಿಂದ ಕೆಎ 20 ಸಿ 3295 ರಿಕ್ಷಾ ಚಾಲಕ ಪ್ರಶಾಂತ ಡಿ. ಎಂಬವನು ರಿಕ್ಷಾವನ್ನು ಅತಿವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಮೊವಾಡಿ ಕ್ರಾಸ್ ಹತ್ತಿರ ಬರುವಾಗ ಜರ್ನಾಧನ ಮಧ್ಯಸ್ಥ ರವರ ಮೋಟಾರು ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಜರ್ನಾಧನ ಮಧ್ಯಸ್ಥರ ಬಲ ಕಾಲು ಗಂಟಿನಿಂದ ಕೆಳಗೆ ಮುರಿದಿದ್ದು, ರಕ್ತ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.ಈ ಬಗ್ಗೆ ಜರ್ನಾಧನ ಮಧ್ಯಸ್ಥರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 46/2015 ಕಲಂ:279,338 IPC ಜೊತೆಗೆ 134 (A) &(B) IMV ACT ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ಕಳವು ಪ್ರಕರಣ
  • ಮಣಿಪಾಲ:ಪಿರ್ಯಾದಿದಾರರಾದ ಶ್ರೀಮತಿ ಜಯಶ್ರೀ ಆರ್. ಕುಂದರ್‌ (55), ಗಂಡ:ರಮೇಶ ಜಿ ಕುಂದರ್, ವಾಸ:ಅಸಿಸ್ಟೆಂಟ್‌ ಡಿವಿಜನಲ್‌ ಮ್ಯಾನೆಜರ್‌, ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್ ಕಂಪೆನಿ, ಉದಯವಾಣಿ ಬಿಲ್ಡಿಂಗ್‌, ಮಣಿಪಾಲ, ಉಡುಪಿರವರು ಯುನೈಟೈಡ್‌ ಇಂಡಿಯಾ ಇನ್ಸೂಶೆರೆನ್ಸ್‌ ಕಂಪೆನಿ, ಮಣಿಪಾಲ ಡಿವಿಷನಲ್‌ ಬ್ರಾಂಚ್‌ನಲ್ಲಿ ಅಸಿಸ್ಟೆಂಟ್‌ ಡಿವಿಜನಲ್‌ ಮ್ಯಾನೆಜರ್‌ ಆಗಿ ಉದ್ಯೋಗ ಮಾಡಿಕೊಂಡಿರುತ್ತಾರೆ. ಸದ್ರಿ ಕಚೇರಿಗೆ ಯಾರೋ ಕಳ್ಳರು ದಿನಾಂಕ:09/04/2015 ರಂದು ಸಂಜೆ 06:30  ಗಂಟೆಯಿಂದ ದಿನಾಂಕ:10/04/15 ರ ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಕಚೇರಿಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಒಳ ಪ್ರವೇಶಿಸಿ ಗೋದ್ರೇಜ್‌ ಕಪಾಟಿನ ಬೀಗವನ್ನು ಮುರಿದು ಅದರ ಒಳಗಿದ್ದ ಗೋದ್ರೇಜ್‌ ಕ್ಯಾಶ್‌ ಬಾಕ್ಸ‌ನ್ನು ಹೊರಗೆ ಎಳೆದು ಅದನ್ನು ಒಡೆದು ಅದರೊಳಗಿದ್ದ 18,922/- ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ.ಈ ಬಗ್ಗೆ ಜಯಶ್ರೀ ಆರ್. ಕುಂದರ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 55/2015 ಕಲಂ:457, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಲೆ ಪ್ರಕರಣ
  • ಬೈಂದೂರು:ದಿನಾಂಕ:10/04/2015 ರಂದು ರಾತ್ರಿ 01:00 ಗಂಟೆಯ ವೇಳೆಗೆ ಪಿರ್ಯಾದಿದಾರರಾದ ಇಸ್ಮಾಯಿಲ್ (42) ತಂದೆ:ಮೊಯ್ದೀನ್ ಸಾಹೇಬ್ ವಾಸ:ಶ್ರೀ ವಿನಾಯಕ ಹೋಟೆಲ್, ಮಸ್ಕಿ, ನಾವುಂದ ಗ್ರಾಮ, ಕುಂದಾಪುರ ತಾಲೂಕುರವರು ತನ್ನ ಬೈಕಿನಲ್ಲಿ ಗಂಗೊಳ್ಳಿಯಿಂದ ಮನೆಯಾದ ನಾವುಂದ ಕಡೆಗೆ ಬರುತ್ತಾ ನಾವುಂದ ಪೆಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಒಂದು ಲಾರಿ ನಿಂತಿದ್ದು, ಸುಮಾರು 25 ಅಡಿ ದೂರ ಹಿಂದಕ್ಕೆ ಲಾರಿಯ ಎಡ ಬದಿಯಲ್ಲಿ ಸುಮಾರು 22 ವರ್ಷದ ಯುವಕನ ತಲೆಗೆ ತೀವೃ ಜಖಂ ಆಗಿ ರಕ್ತ ಸ್ರಾವ ಆಗಿ ಕಾಲು, ಮೈಗೆ ತೀವೃ ಗಾಯವಾಗಿ ಮೃತಪಟ್ಟಿದ್ದು, ಸ್ಥಳದಲ್ಲಿ ತುಂಬಾ ರಕ್ತ ಬಿದ್ದಿರುತ್ತದೆ. ಲಾರಿಯು ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಮುಖ ಮಾಡಿ ನಿಂತಿದ್ದು ಲಾರಿ ನಂಬ್ರ ಎಮ್ ಹೆಚ್ 12 ಹೆಚ್ ಡಿ 5777 ಆಗಿರುತ್ತದೆ. ಸದ್ರಿ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದನು. ಮೃತ ಯುವಕನು ಅಪಘಾತಕ್ಕೀಡಾಗಿ ಮೃತನಾದನೋ ? ಲಾರಿ ಕ್ಲೀನರ್ ಆಗಿದ್ದವನು ಬಿದ್ದನೋ? ಮೃತನನ್ನು ಯಾರಾದರೋ ಹೊಡೆದು ಸಾಯಿಸಿರುವ ಸಾಧ್ಯತೆ ಇರಬಹುದಾಗಿದ್ದು ಯಾ ಇನ್ನಿತರ ಕಾರಣಗಳಿಂದ ಅಸ್ವಾಭಾವಿಕವಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಇಸ್ಮಾಯಿಲ್‌ರವರು ನೀಡಿದ ದೂರಿನಂತೆ ಬೈಂದೂರು ಠಾಣಾ ಅಪರಾಧ ಕ್ರಮಾಂಕ 81/2015 ಕಲಂ:302 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: