Wednesday, April 08, 2015

Daily Crimes Reported as On 08/04/2015 at 17:00 Hrs

ಅಪಘಾತ ಪ್ರಕರಣ

  • ಕಾರ್ಕಳ:ದಿನಾಂಕ:07/04/2015 ರಂದು 7:30 ಗಂಟೆಗೆ ಆರೋಪಿ ಸುರೇಶ ನಾಯ್ಕ ಎಂಬುವನು ತನ್ನ ಕೆ..20 ಬಿ 8961 ಅಪೆ ಆಟೋ ರಿಕ್ಷಾವನ್ನು  ಕುದುರೆಮುಖ ಕಡೆಯಿಂದ ಬಜಗೋಳಿ ಕಡೆಗೆ ಕುದುರೆಮುಖ ರಸ್ತೆ ಪೆಜಿತ್ತ್ ಗುರಿ ಎಂಬಲ್ಲಿ ಪ್ರಯಾಣಿಕ ವಸಂತ ಆಚಾರ್ಯ ಎಂಬವರನ್ನು ಕುಳ್ಳಿರಿಸಿಕೊಂಡು ಆಟೋ ರಿಕ್ಷಾವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರಿಂದ, ಸದ್ರಿ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲಭಾಗದ 10 ಅಡಿ ಆಳದ ಹೊಂಡಕ್ಕೆ ಮಗುಚಿ ಬಿದ್ದಿದ್ದು ಇದರಿಂದ ಸದ್ರಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ  ವಸಂತ ಆಚಾರ್ಯ ಎಂಬವರನ್ನು ಚಿಕಿತ್ಸೆಗಾಗಿ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 53/15 ಕಲಂ 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಕಳವು ಪ್ರಕರಣ

  • ಶಂಕರನಾರಾಯಣ:ಉಡುಪಿ ತಾಲೂಕು ಹಿಲಿಯಾಣ ಗ್ರಾಮದ ಹಿಲಿಯಾಣ ಗರಡಿ ರಸ್ತೆಗೆ ಆವರ್ಸೆ ಗ್ರಾಮ ಪಂಚಾಯತ್‌ರವರು 13 ನೇ ಹಣಕಾಸು ಯೋಜನೆ ಅಡಿ ಅಳವಡಿಸಿದ್ದ ಸೋಲಾರ್‌ ಬ್ಯಾಟರಿಯನ್ನು ಯಾರೋ ಕಳ್ಳರು ದಿನಾಂಕ 01/11/2014 ರಿಂದ ದಿನಾಂಕ 05/03/2015 ರ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 59/15 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ : ಕಾರ್ಕಳ ತಾಲೂಕಿನ ಕಸಬ ಗ್ರಾಮದ ಕಲ್ಲೊಟ್ಟೆ ಗಿರಿಜಾ ಪ್ರಸಾದ್ ಮನೆಯ ನಿವಾಸಿ ಗಿರಿಜಾ (81) ಇವರು ದಿನಾಂಕ: 7/04/2015 ರಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಪ್ರಯುಕ್ತ ದೇವಸ್ಥಾನದ ಭೋಜನ ಶಾಲೆಯಲ್ಲಿ ನಡೆದ ಭೋಜನ ಪ್ರಸಾದವನ್ನು ಸ್ವೀಕರಿಸಿ ಮಧ್ಯಾಹ್ನ 13:00 ರಿಂದ 14:00 ಗಂಟೆಯ ನಡುವಿನ ಅವಧಿಯಲ್ಲಿ ಕೈತೊಳೆಯುವರೇ ಮೆಟ್ಟಿಲು ಇಳಿದು ಬರುತ್ತಿರುವಾಗ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಅವರು ಪಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 10/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: