Wednesday, April 08, 2015

Daily Crimes Reported as On 08/04/2015 at 07:00 Hrs

ಅಪಘಾತ ಪ್ರಕರಣ
  • ಕಾರ್ಕಳ: ದಿನಾಂಕ: 07/04/2015 ರಂದು 13-15 ಗಂಟೆಗೆ ಫಿರ್ಯಾದಿ ಪೃಥ್ವಿರಾಜ್ ಜೈನ್ ಇವರ ಪರಿಚಯದ ನಲ್ಲೂರು ಗ್ರಾಮ ವಾಸಿ  ಭುಜಬಲಿ ಜೈನ್ ರವರು ಅವರ ಬಾಬ್ತು ಕೆಎ: 05, ಇಯು: 3495 ನೇ ಬಜಾಜ್ ಪಲ್ಸರ್ ಮೋಟಾರು ಸೈಕಲ್ ನಲ್ಲಿ ನಲ್ಲೂರು ಕಡೆಗೆ ಕಾರ್ಕಳ ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ನಲ್ಲೂರು ಗಾಂಧಿ ನಗರ ಎಂಬಲ್ಲಿ ಅವರ ಎದುರಿನಿಂದ ಅಂದರೆ ಧರ್ಮಸ್ಥಳ ಕಡೆಯಿಂದ ಕಾರ್ಕಳ ಕಡೆಗೆ ಕೆಎ: 20, ಸಿ: 7009 ನೇ ನಂಬ್ರದ ವಿಶಾಲ್ ಬಸ್ಸಿನ ಚಾಲಕ ಸುರೇಶ್ ಆಚಾರ್ಯರವರು  ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಭುಜಬಲಿ ಜೈನ್ ರವರ ಮೋಟಾರು ಸೈಕಲ್ ಗೆ  ಮುಖಾಮುಖಿ ಡಿಕ್ಕಿ ಹೊಡೆದು, ಭುಜಬಲಿ ಜೈನ್ ರವರ ಕೈ, ಕಾಲುಗಳಿಗೆ ತೀವ್ರ ತರಹದ ರಕ್ತಗಾಯ ಉಂಟಾಗಿ ತಲೆಯು ನುಜ್ಜುಗುಜ್ಜಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 52/2015 ಕಲಂ 279.304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾಪು: ದಿನಾಂಕ 07-04-2015 ರಂದು ರಾತ್ರಿ 08:30 ಗಂಟೆಗೆ ಪಿರ್ಯಾದಿ ಶಿವ ಇವರು ಕೂಲಿ ಕೆಲಸ ಮುಗಿಸಿಕೊಂಡು  ಕಾಪು ಪಡು ಗ್ರಾಮದ ಕೊಪ್ಪಲಂಗಡಿ ಮದ್ರಸ್ ಬಳಿ ನಿಂತುಕೊಂಡಿದ್ದಾಗ ಸ್ವಲ್ಪ ದೂರದಲ್ಲಿ ಜೋರಾಗಿ ಶಬ್ದ ಕೇಳಿದಾಗ ಪಿರ್ಯಾದುದಾರರು ಮತ್ತು ಇತರರು ಹೋಗಿ ನೋಡಲಾಗಿದ್ದು ಯಾವುದೋ ಅಪರಿಚಿತ ವಾಹನದ ಚಾಲಕನು ರಾಹೇ 66ರಲ್ಲಿ  ಮಂಗಳೂರು ರಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ವಾಹನವನ್ನು ಚಲಾಯಿಸಿ ರಾ ಹೇ 66ರ ಪಶ್ಚಿಮ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ  ಮಾನಸಿಕ ಅಸ್ವಸ್ಥ ಮುದುಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುತ್ತಾರೆ. ಅಪರಿಚಿತ ಸುಮಾರು 60-65 ಪ್ರಾಯದ ಮುದುಕಿಯ ಬಲ ಕಾಲಿನ ಪಾದದ ಗಂಟಿನ ಬಳಿ ಗಾಯವಾಗಿರುತ್ತದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ 71/2015 ಕಲಂ 279, 337 ಐಪಿಸಿ ಮತ್ತು 134(ಎ)(ಬಿ) ಜೊತೆಗೆ 187 ಐಎಂವಿ ಕಾಯಿದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕೋಟ: ದಿನಾಂಕ:06-04-2015 ರಂದು ಪ್ರಕರಣದ ಪಿರ್ಯಾದಿ ನಾರಾಯಣ ಆಚಾರಿಯವರು ಹುಣ್ಸೆಮಕ್ಕಿಗೆ ಹೋಗಿ ಅಲ್ಲಿಂದ ಮನೆಗೆ ಹೊರಟು ಕೋಟೇಶ್ವರ-ಹಾಲಾಡಿ ರಾಜ್ಯ ಹೆದ್ದಾರಿಯಲ್ಲಿ ಅವರ ಬಾಬ್ತು ಕೆಎ 14 ಆರ್ 0313 ನೇ ನಂಬ್ರದ ಬಜಾಜ್ ಬಾಕ್ಸರ್ ಮೋಟಾರ್ ಸೈಕಲ್ಲನ್ನು ಚಲಾಯಿಸಿಕೊಂಡು ಹೋಗುತ್ತಾ ರಾತ್ರಿ 20.00 ಗಂಟೆ ಸುಮಾರಿಗೆ ವಿಶ್ವನಾಥ ಪೈ ಕಂಪೌಂಡ್ ಎದುರು ತಲುಪಿ ಮನೆ ಕಡೆ ತಿರುಗಿಸುತ್ತಾ ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿರುವಾಗ, ಬಿದ್ಕಲ್‌ ಕಟ್ಟೆ ಕಡೆಯಿಂದ ಆಪಾದಿತ ಸತೀಶ ನಾಯ್ಕ ಎಂಬುವರು ಅವರ ಬಾಬ್ತು ಹೊಸ ನಂಬರ್ ಪ್ಲೇಟ್ ಇಲ್ಲದ ಬಜಾಜ್ ಡಿಸ್ಕವರಿ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಬಂದು ಢಿಕ್ಕಿ ಹೊಡೆದ ಪರಿಣಾಮ, ಪಿರ್ಯಾದುದಾರರು ರಸ್ತೆಗೆ ಬಿದ್ದು ಎಡಕಾಲಿಗೆ ಮೂಳೆ ಮುರಿತವಾಗಿದ್ದು, ಕೂಡಲೇ ಅವರನ್ನು ಕುಂದಾಪುರ ಚಿನ್ಮಯ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಪಘಾತದಿಂದ ಆಪಾದಿತರು ಬೈಕ್ ಸಮೇತ ರಸ್ತೆಗೆ ಬಿದ್ದು ಆಪಾದಿತರಿಗೆ ಹಾಗೂ ಸಹ ಸವಾರರಿಗೆ ತರಚಿದ ಗಾಯಗಳಾಗಿರುತ್ತವೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 64/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಪಡುಬಿದ್ರಿ: ದಿನಾಂಕ 7.4.2015 ರಂದು ಹಗಲು 08.30 ಗಂಟೆಗೆ ಉಡುಪಿ ತಾಲೂಕು ಬಡಾ ಎರ್ಮಾಳ್ ಗ್ರಾಮದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಎದುರು ರಾಹೆ 66 ರಲ್ಲಿ ಏಕಮುಖ ರಸ್ತೆಯಲ್ಲಿ ಪಿರ್ಯಾಧಿದಾರರು ಸಂಬಂಧಿ ಸಂದೇಶ್ ಎಂಬವರೊಂದಿಗೆ ಅವರ ಬಾಬ್ತು ಬುಲೆಟ್ ಬೈಕ್ ನಂಬ್ರ ಕೆಎ 20 ಇಎಫ್‌ - 4432 ರಲ್ಲಿ ಕಾಪುವಿನಿಂದ ಎರ್ಮಾಳ್ ಕಡೆಗೆ ಸಹ ಸವಾರನಾಗಿ ಬರುತ್ತಿರುವ ವೇಳೆ ಏಕ ಮುಖ ರಸ್ತೆಯ ನಿಯಮಕ್ಕೆ ವಿರೋಧವಾಗಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಆರೋಪಿ ತನ್ನ ಬಾಬ್ತು ಕಾರು ನಂಬ್ರ ಕೆಎ 19 ಎಂಸಿ - 6473 ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಬರುತ್ತಿದ್ದು ಬುಲೆಟ್‌ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತವೆಸಗಿರುತ್ತಾರೆ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು  ಪಿರ್ಯಾಧಿಗೆ ಬಲಕಾಲಿಗೆ ಹಾಗೂ ಎರಡೂ ಕೈಗಳಿಗೆ ಗಾಯವಾಗಿದ್ದು ಬೈಕ್ ಸವಾರ ಸಂದೇಶ್ ರವರಿಗೆ ಎದೆಗೆ ಗುದ್ದಿದ ಗಾಯ ಹಾಗೂ ಕೈ ಮತ್ತು ಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 46/15 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
ಅಸ್ವಾಭಾವಿಕ ಮರಣ ಪ್ರಕರಣ
  • ಕಾರ್ಕಳ : ಉದಯ ಕುಮಾರ (44) ಇವರು   ಕುಡಿತದ ಚಟ ಹೊಂದಿದ್ದು ಇವರು ಜಾಂಡಿಸ್ ಖಾಯಿಲೆಯಿಂದ ಬಳಲುತ್ತಿದ್ದು  ದಿನಾಂಕ:06.04.2015 ರಂದು ಬೆಳಗ್ಗೆ  ಸುಮಾರು 8:00 ಗಂಟೆಗೆ ಕಾರ್ಕಳ ತಾಲೂಕು ಕೆದಿಂಜೆ  ಗ್ರಾಮದ ತನ್ನ ಮನೆಯ ಬಾತ್ ರೂಂ ನಲ್ಲಿ ಮುಖ ತೊಳೆಯುವ ಸಂದರ್ಭದಲ್ಲಿ ರಕ್ತ ವಾಂತಿ ಮಾಡಿಕೊಂಡಿದ್ದು  ನಂತರ ಅಲ್ಲೆ ಕುಸಿದು ಬಿದ್ದು ಹಣೆಗೆ ಮತ್ತು ಮುಖಕ್ಕೆ ರಕ್ತ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 07.04.2015 ರಂದು 3:00 ಗಂಟೆಗೆ  ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 10/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: