Thursday, April 30, 2015

Daily Crime Reports As on 30/04/2015 at 19:30 Hrs



ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ಜೀವನ್ ಮಿಸ್ಕಿತ್ (28) ತಂದೆ: ಡೇನಿಸ್ ಮಿಸ್ಕಿತ್ ವಾಸ: ಲಿಲ್ಲಿ ಡಿಸೋಜಾ ಉದ್ಯಾವರ ಚರ್ಚ್ ಬಳಿ ಗುಡ್ಡೆಯಂಗಡಿ  ಉದ್ಯಾವರ ಗ್ರಾಮ ಎಂಬವರ ಮಾವ ವಿಕ್ಟರ್ ಡಿ ಸೋಜಾ (43 ವರ್ಷ) ಎಂಬವರಿಗೆ ಟಿ. ಬಿ ಕಾಯಿಲೆ ಇದ್ದು ದಿನಾಂಕ 30.04.2015 ರಂದು ಉದ್ಯಾವರ ಗ್ರಾಮದ ತನ್ನ ಮನೆಯಲ್ಲಿರುವಾಗ ಮಧ್ಯಾಹ್ನ 12.00 ಗಂಟೆ ಸಮಯಕ್ಕೆ ವಿಪರೀತ ರಕ್ತ ವಾಂತಿ ಮತ್ತು ಕೆಮ್ಮು ಪ್ರಾರಂಭವಾಗಿ  ಚಿಕಿತ್ಸೆ ಬಗ್ಗೆ ಉಡುಪಿ ಟಿ .ಎಂ. ಎ .ಪೈ ಆಸ್ಪತ್ರೆಗೆ ಕೊಂಡು ಹೋದಲ್ಲಿ ಮಧ್ಯಾಹ್ನ 1.00 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಜೀವನ್ ಮಿಸ್ಕಿತ್ ರವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 13/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

  • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರಶಾಂತ್ ಪ್ರಾಯ 25 ವರ್ಷ ತಂದೆ: ರತ್ನಾಕರ ರಾವ್ ವಾಸ: ಸಂಜೀವಿ ನಿಲಯ, ಕೊಂಡಾಡಿ ಶಾಲೆಯ ಬಳಿ ಗುಡ್ಡೆಅಂಗಡಿ, ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ರವರ ತಂದೆ ಪ್ರಾಯ: ಸುಮಾರು 65 ವರ್ಷದ ರತ್ನಾಕರ ರಾವ್ ಎಂಬವರಿಗೆ ಶರಾಬು ಕುಡಿಯುವ ಅಭ್ಯಾಸವಿದ್ದು ದಿನಾಂಕ: 23/04/2015 ರಂದು ಹಿರಿಯಡ್ಕದಲ್ಲಿ ಬಿದ್ದು ಗಾಯಮಾಡಿಕೊಂಡಿದ್ದು ಆ ಬಳಿಕ ಸದ್ರಿಯವರಿಗೆ ಜ್ವರ ಪ್ರಾರಂಭವಾಗಿದ್ದು ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ಇದ್ದು ದಿನಾಂಕ: 29/04/2015 ರಂದು ತಮ್ಮ ಮಗನ ಮನೆಯಾದ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಅಂಗಡಿ ಜೋಡುರಸ್ತೆ ಎಂಬಲ್ಲಿ ಮೃತಪಟ್ಟಿರುವುದಾಗಿದೆ ಎಂಬುದಾಗಿ ಪ್ರಶಾಂತ್ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 09/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 30/04/2015 ರಂದು 12.45 ಗಂಟೆಗೆ ಕುಂದಾಪುರ ತಾಲೂಕು ಕುಂದಾಪುರ ಕಸಭಾ ಗ್ರಾಮದ ಮುಖ್ಯರಸ್ತೆಯ ವೆಂಕಟ್ರಮಣ ದೇವಸ್ಥಾನದ ಎದುರುಗಡೆ ಆರೋಪಿಗಳಾದ 1) ನಾಗರಾಜ ತಂದೆ:ಕಡುರಪ್ಪ ವಾಸ: ಎಂ ಸಿ ಹಳ್ಳಿ, ತರಿಕೆರೆ, ಚಿಕ್ಕಮಂಗಳೂರು ಮತ್ತು 2)ಸತೀಶ ತಂದೆ: ಸಂಜೀವ ವಾಸ: ಬೋಳುಕಟ್ಟೆ, ಗುಡ್ಡೆಮನೆ, ಮಾವಿನಕಟ್ಟೆ, ಗುಲ್ವಾಡಿ ಗ್ರಾಮ, ಕುಂದಾಪುರ ತಾಲುಕು ಎಂಬವರು ಕೈ ಕೈ ಮಿಲಾಯಿಸಿ ಗಲಟೆ ಮಾಡಿಕೊಳ್ಳುತ್ತಿದ್ದು, ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಶಾಂತಿಗೆ ಭಂಗವುಂಟಾಗುವ ರೀತಿಯಲ್ಲಿ ಗಲಾಟೆ ಮಾಡುತಿದ್ದು, ಸದ್ರಿ ಆರೋಪಿತರಿಗೆ ಅವರ ತಪ್ಪಿನ ಬಗ್ಗೆ ತಿಳಿಸಿ ಅವರ ವಿರುದ್ದ ಕುಂದಾಪುರ ಪೊಲೀಸ್ ಠಾಣೆಯ ಎ.ಎಸ್.ಐ ಶ್ರೀ ದೂಮಪ್ಪ ಶೆಟ್ಟಿಗಾರ್ ರವರು ಠಾಣಾ ಅಪರಾಧ ಕ್ರಮಾಂಕ 125/2015 ಕಲಂ 160 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿದ್ದಾಗಿದೆ.

No comments: