Wednesday, April 29, 2015

Daily Crime Reports As on 29/04/2015 at 19:30 Hrsಅಪಘಾತ ಪ್ರಕರಣಗಳು  

  • ಉಡುಪಿ: ದಿನಾಂಕ 28/04/2015 ರಂದು  ಪಿರ್ಯಾದಿದಾರರಾದ ಕರುಣಾಕರ ಶೆಟ್ಟಿ (38) ತಂದೆ ದಿ,ಜಗನ್ನಾಥ ಶೆಟ್ಟಿ ವಾಸ: ಬಡಗುದಾರೆ ಹೌಸ್ ದೆಂದೂರುಕಟ್ಟೆ ಗ್ರಾಮ ಮಣಿಪುರ ಪೋಸ್ಟ್ ರವರು ರಾತ್ರಿ 8.00 ಗಂಟೆಗೆ ಸ್ನೇಹಿತ ಪ್ರಶಾಂತರವರ ಕೆಎ-20 ಇಜಿ-4085 ನೇ ಸ್ಕೂಟರ್‌ನಲ್ಲಿ ಸಹಸವಾರನಾಗಿ ಕುಳಿತುಕೊಂಡು  ಕಲ್ಯಾಣಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾಗ ಎನ್‌ ಹೆಚ್‌ -66 ರಲ್ಲಿ  ನಿಟ್ಟೂರು ಗಣೇಶ್ ಹೋಟೆಲ್ ಬಳಿ ತಲುಪುತಿದ್ದಂತೆಯೇ ರಸ್ತೆ ಬದಿಯಲ್ಲಿ ಉಡುಪಿ ಕಡೆಗೆ ಮುಖ ಮಾಡಿ ನಿಂತಿದ್ದ ಭಾರತ್ ಗ್ಯಾಸ್ ಕಂಪೆನಿಯ ಲಾರಿ ನಂಬ್ರ ಕೆಎ-19 ಸಿ-7281 ಯನ್ನು ಅದರ ಚಾಲಕ ಮಹಮದ್ ಹನೀಫ್ ಎಂಬಾತನು ಒಮ್ಮೇಲೆ ಸ್ಟಾರ್ಟ ಮಾಡಿ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಪ್ರಶಾಂತರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಕಾಲಿನ ಪಾದದ ಬಳಿ, ಬಲಕಾಲಿನ ಹೆಬ್ಬೆರಳಿನ ಬಳಿ, ಬಲಕಾಲಿನ ಮೊಣಗಂಟಿನ ಬಳಿ, ತರಚಿದ ಗಾಯವಾಗಿದ್ದು, ತಲೆಯ ಹಿಂಬದಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಲಾರಿ ಚಾಲಕ ಹಾಗೂ ಅಲ್ಲಿ ಸೇರಿದವರು ಚಿಕಿತ್ಸೆ ಬಗ್ಗೆ  ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಬಂದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಟಿಎಂಪೈ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ ಎಂಬುದಾಗಿ ಕರುಣಾಕರ ಶೆಟ್ಟಿ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 36/15 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ದಿನಾಂಕ 26/04/2015 ರಂದು ಪಿರ್ಯಾದಿದಾರರಾದ ಶ್ರೀಮತಿ ಸರಸ್ವತಿ (66) ಗಂಡ:ದಾಮೋದರ ಶೆಟ್ಟಿಗಾರ್ ವಾಸ: ಮನೆ ನಂ-3-63 ರೈಲ್ವೆ ಸೇತುವೆ ಹತ್ತಿರ ಕುಕ್ಕಿಕಟ್ಟೆ, ಉಡುಪಿ ತಾಲೂಕು ರವರು ತನ್ನ ಮಗ ಉದಯಕುಮಾರ್ (46) ರವರ ಜೊತೆಗೆ ವಾಕಿಂಗ್ ಹೋಗಿ ವಾಪಾಸು ಮನೆ ಕಡೆಗೆ ಹೋಗುವರೇ ಡಯಾನಾ ಟಾಕೀಸ್ ಬಳಿ ಇರುವ ಆಶಾ ಸ್ಟೋರ್ ಬಳಿ ತಲುಪುವಾಗ ಸಮಯ ಸುಮಾರು ಬೆಳಿಗ್ಗೆ 05:30 ಗಂಟೆಗೆ ಕೆಎ-20 ಎ-599 ನೇ ಆಟೋ ರಿಕ್ಷಾ ಚಾಲಕ ಗಣೇಶ್ ಎಂಬವರು ತನ್ನ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಮಗ ಉದಯಕುಮಾರ್‌ನಿಗೆ ಡಿಕ್ಕಿ ಹೊಡೆದ ಪರಿಣಾಮ ಅವನ ಬಲಕೈ ಮೊಣಗಂಟಿನ ಕೆಳಗೆ ಕೋಲು ಕೈಯಲ್ಲಿ ಗುದ್ದಿದ ಒಳ ಜಖಂ ಆಗಿದ್ದು, ಬಲಕಾಲಿನ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ, ನಂತರ ಪಿರ್ಯಾದಿದಾರರು ಹಾಗೂ ಅಲ್ಲಿ ಸೇರಿದವರು ಉದಯಕುಮಾರ್‌ನನ್ನು ಮೇಲಕ್ಕೆತ್ತಿ ಉಪಚರಿಸಿ ಅವರ ಮನೆಗೆ ತಲುಪಿಸಿದ್ದು, ಎರಡು ದಿನಗಳ ನಂತರ ಅಂದರೆ ದಿನಾಂಕ 28/04/2015 ರಂದು ವಿಪರೀತ ನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆ ಬಗ್ಗೆ ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ಬಂದು ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಅಪಘಾತಪಡಿಸಿದ ರಿಕ್ಷಾ ಚಾಲಕ ಗಣೇಶ್ ರವರು ಚಿಕಿತ್ಸೆಯ ವೆಚ್ಚವನ್ನು ಭರಿಸಿರುವುದಿಲ್ಲ,  ಈ ಅಪಘಾತಕ್ಕೆ ಕೆಎ-20 ಎ-599 ನೇ ಆಟೋರಿಕ್ಷಾ ಚಾಲಕ ಗಣೇಶ್ ಇವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ಶ್ರೀಮತಿ ಸರಸ್ವತಿ ರವರು ನೀಡಿದ ದೂರಿನಂತೆ ಉಡುಪಿ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/15 ಕಲಂ 279, 337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: