Sunday, April 26, 2015

Daily Crime Reports As on 26/04/2015 at 19:30 Hrs

ಗಂಡಸು ಕಾಣೆ ಪ್ರಕರಣ


  • ಕೋಟ: ಪಿರ್ಯಾದಿದಾರರಾದ ಕೆ. ಚಂದ್ರ ಪುತ್ರನ್ (44).ತಂದೆ: ಕೂಸ ಮರಕಾಲ.ವಾಸ ಶ್ರೀ ಗಂಗಾ, ಕೋಟತಟ್ಟು ಪಡುಕೆರೆ, ಕೋಟತಟ್ಟು ಗ್ರಾಮ, ಉಡುಪಿ ತಾಲುಕು ರವರ ತಮ್ಮ ಪ್ರಕಾಶ ಪುತ್ರನ್ ಪ್ರಾಯ (28) ಎಂಬವರು ದಿನಾಂಕ 25/04/2015 ರಂದು ಮಧ್ಯಾಹ್ನ 3:30 ಗಂಟೆಗೆ ಉಡುಪಿ ತಾಲೂಕು ಕೊಟತಟ್ಟು ಗ್ರಾಮದ ಪಡುಕೆರೆ ಎಂಬಲ್ಲಿನ ತನ್ನ ಮನೆಯಿಂದ ಬಾಂಬೆಯ ರತ್ನಗಿರಿಯಲ್ಲಿರುವ ಟಿ.ಜೆ ಮೆರೈನ್ ಕಂಪೆನಿಗೆ ಕೆಲಸಕ್ಕೆಂದು ಮಧ್ಯಾಹ್ನ 4:20 ಗಂಟೆಗೆ ಕುಂದಾಪುರದಿಂದ ಮತ್ಸ್ಯಗಂಧ ರೈಲಿನಲ್ಲಿ ಹೋಗಿದ್ದು  ರಾತ್ರಿ ಸುಮಾರು 7:45 ಗಂಟೆಗೆ ಅವರ ಅಕ್ಕ ಗುಲಾಬಿಯವರು ಆತನ ಮೊಬೈಲ್‌ಗೆ ಕರೆ ಮಾಡಿದಾಗ ತಾನು ರತ್ನಗಿರಿ ಹತ್ತಿರ ರೈಲಿನಲ್ಲಿ ಹೋಗುತ್ತಿರುವುದಾಗಿ ತಿಳಿಸಿದ್ದು ಬಳಿಕ ಯಾವುದೇ ಪೋನ್ ಕರೆ ಮಾಡಿರುವುದಿಲ್ಲ ಹಾಗೂ ಆತನ ಮೊಬೈಲ್ ಪೋನ್ ಸ್ವೀಚ್ ಆಫ್ ಆಗಿದ್ದು, ಇದುವರೆಗೂ ರತ್ನಗಿರಿಯ ಆಫೀಸಿಗೆ ಹೋಗದೆ ಕಾಣೆಯಾಗಿರುತ್ತಾರೆ  ಎಂಬುದಾಗಿ ಕೆ. ಚಂದ್ರ ಪುತ್ರನ್ ರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2015 ಕಲಂ ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ
  • ಕೊಲ್ಲೂರು: ಪಿರ್ಯಾದಿದಾರರಾದ ಶಂಕರ ಶೆಟ್ಟಿ (42) ತಂದೆ:ರಾಮಣ್ಣ ಶೆಟ್ಟಿ ವಾಸ: ಹನಬೇರು, ಹೊಸೂರು ಗ್ರಾಮ ಕುಂದಾಪುರ ತಾಲೂಕು ರವರು ಬೆಂಗಳೂರಿನಿಂದ ಕುಂದಾಪುರದಲ್ಲಿರುವ ಸಂಬಂಧಿಕರ ಮದುವೆಗೆ ಸಂಸಾರದೊಂದಿಗೆ ಕೆ.ಎ 04 ಎಮ್.ಎಮ್ 7957 ಇನ್ನೋವಾ ಕಾರಿನಲ್ಲಿ ಹೊರಟವರು ದಿನಾಂಕ:26/04/2015 ರಂದು ಸಮಯ ಸುಮಾರು ಮುಂಜಾನೆ 05;15 ಗಂಟೆಗೆ ಕುಂದಾಪುರ ತಾಲೂಕು ಹಾಲ್ಕಲ್ ಎಂಬಲ್ಲಿ ತಲುಪುವಾಗ ರಾಜ್ಯ ಹೆದ್ದಾರಿಯಲ್ಲಿ ಚಾಲಕ ರವಿ ಕುಮಾರ್ ಗೊಲ್ಲರಹಟ್ಟಿ ಬೆಂಗಳೂರು ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿ ಒಂದು ಮೋರಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವೃ ಗಾಯಗೊಂಡ ನಾಗರಾಜ ಶೆಟ್ಟಿಯವರನ್ನು ಉಡುಪಿ ಆದರ್ಶ ಆಸ್ಪತ್ರೆಗೂ ಹಾಗೂ ಪಿರ್ಯಾದಿದಾರರು, ಕೀರ್ತನ, ಜಾನಕಿ ಹಾಗೂ ಅನಿಲ್ ರವರಿಗೆ ಸಣ್ಣ ಪುಟ್ಟ ಗಾಯ ಉಂಟಾಗಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೂ ದಾಖಲಾಗಿದ್ದಾಗಿದೆ ಎಂಬುದಾಗಿ ಶಂಕರ ಶೆಟ್ಟಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2015 ಕಲಂ 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಹೆಬ್ರಿ: ಪಿರ್ಯಾದಿದಾರರಾದ ಜೈಜು ಎಮ್‌ ಬೆರ್‌ನಾಡೂಸ್‌ (28) ತಂದೆ: ಎಮ್‌.ಜಿ ಬೆರ್‌ನಾಡೂಸ್‌ ವಾಸ: ಆದಿಶಕ್ತಿ ದೇವಸ್ಥಾನ, ಮುದ್ರಾಡಿ ಗ್ರಾಮ, ಕಾರ್ಕಳ ತಾಲೂಕು ರವರು ವರಂಗ ಗ್ರಾಮದ, ವರಂಗ ಪೇಟೆಯ, ಬಳಿ ಬಾಲಾಜಿ ತಂಪು ಪಾನಿಯ ಫ್ಯಾಕ್ಟರಿಯ ಎದುರು ವಾಸವಾಗಿರುವ ತಮ್ಮ ಪರಿಚಯದ ತಂಗಚ್ಚನ್‌ (55) ರವರಿಂದ ಅವರ ಮನೆಯಲ್ಲಿ ಬೆಳೆದ ಹೆಡಿಗೆ ಗೆಣಸನ್ನು ಪಡೆದುಕೊಂಡು ಹೋಗಲು ಬೆಳಿಗ್ಗೆ ಸುಮಾರು 10:30 ಗಂಟೆಗೆ ಸದ್ರಿಯವರ ಮನೆಗೆ ಬಂದಿದ್ದು, ಮನೆ ಎದುರು ಒಳಗಡೆ ಲಾಕ್‌ ಆಗಿದ್ದು, ಎಷ್ಟು ಕೂಗಿದರೂ ತಂಗಚ್ಚನ್‌ ರವರು ಬಾಗಿಲು ತೆಗೆಯದಿದ್ದಾಗ ಪಿರ್ಯಾದಿದಾರರು ಅವರ ಮನೆಯ ಹಿಂದೆ ಹೋಗಿದ್ದು, ಹಿಂದಿನ ಬಾಗಿಲು ತೆರೆದಿರುವುದು ಕಂಡು ಒಳಕ್ಕೆ ಹೋಗಿ ನೋಡಲಾಗಿ ತಂಗಚ್ಚನ್‌ ರವರ ದೇಹವು ಮನೆ ಒಳಗೆ ಹಾಲ್‌ ನಲ್ಲಿದ್ದ ಮಂಚದ ಅಂಚಿಗೆ ಮಗುಚಿಕೊಂಡಂತೆ ಇರುವುದು ಕಂಡು ಬಂದಿದ್ದು, ಕೂಡಲೇ ಹತ್ತಿರದವರನ್ನು ಕರೆದು ತೋರಿಸಿದಲ್ಲಿ ಅವರು ಮೃತ ಪಟ್ಟಿರುವುದು ಕಂಡು ಬಂದಿರುವುದಾಗಿದೆ. ಸದ್ರಿಯವರು ಅತಿಯಾದ ಬಿ.ಪಿ ಶುಗರ್ ಹಾಗೂ ಕ್ಷಯ ರೋಗದಿಂದ ಬಳಲುತ್ತಿದ್ದು, ರೋಗ ಉಲ್ಬಣಗೊಂಡು ದಿನಾಂಕ 24-04-2015 ರಂದು ಬೆಳಿಗ್ಗೆ 8:00 ಗಂಟೆಯಿಂದ ದಿನಾಂಕ 26-04-2015 ರಂದು ಬೆಳಿಗ್ಗೆ 10:30 ಗಂಟೆಯ ನಡುವೆ ಮೃತ ಪಟ್ಟಿರುವುದಾಗಿದೆ ಎಂಬುದಾಗಿ ಜೈಜು ಎಮ್‌ ಬೆರ್‌ನಾಡೂಸ್‌ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 15/2015 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: