Monday, April 20, 2015

Daily Crime Reports As on 20/04/2015 at 17:00 Hrs



ಕೊಲೆ ಪ್ರಕರಣ

  • ಮಲ್ಪೆ: ಕೊಡವೂರು ಗ್ರಾಮದ ಮದ್ವನಗರದ ಕಂಬಳಕಟ್ಟ ಎಂಬಲ್ಲಿ  ಪಿರ್ಯಾದಿ ಶ್ರೀಮತಿ ಉಮಾಶ್ರೀ ಇವರು ಗಂಡ ಪ್ರಕಾಶ ಆಚಾರ್ಯ, ಮೈದುನ ಉಮೇಶ ಆಚಾರ್ಯ, ಅತ್ತೆ ಮತ್ತು ಮಗಳೊಂದಿಗೆ ವಾಸವಾಗಿರುತ್ತಾರೆ. ಪಿರ್ಯಾದಿದಾರರ ಗಂಡನವರು ಸುಮಾರು 3 ವರ್ಷದಿಂದ ಮನೆಯನ್ನು ಕಟ್ಟಲು ಪ್ರಾರಂಭಿಸಿದ್ದು ಹಣದ ಸಮಸ್ಯೆಯಿಂದ ಮುಕ್ತಾಯಗೊಂಡಿರುವುದಿಲ್ಲ. ಈ ವಿಚಾರವಾಗಿ ಹಣಕ್ಕಾಗಿ ತಮ್ಮನೊಂದಿಗೆ ಆಗಿಂದಾಗ್ಗೆ ಜಗಳಮಾಡಿಕೊಳ್ಳುತ್ತಿದ್ದರು. ಹೀಗಿರುವಾಗ ದಿನಾಂಕ: 19-04-2015 ರಂದು 22:00 ಗಂಟೆಗೆ ಪಿರ್ಯಾದಿದಾರರ ಗಂಡ ಮತ್ತು ಮೈದುನ ಇಬ್ಬರೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಜಗಳ ವಿಕೋಪಕ್ಕೆ ಹೋಗಿ ಉಮೇಶನು ಮನೆಯ ಒಳಗಡೆಯಿದ್ದ ಒಲೆಗೆ ಹಾಕುವ ಕಟ್ಟಿಗೆಯನ್ನು ತೆಗೆದುಕೊಂಡು ಹೊರಗೆ ಬಂದನು. ಆಗ ಪಿರ್ಯಾದಿದಾರರ ಗಂಡನವರು ನನಗೆ ಹೊಡೆಯುತ್ತಿಯಾ ಎಂದು ಹೊರಗಡೆ ಬಂದರು. ಅಷ್ಟರಲ್ಲಿ ಉಮೇಶನು ಕೋಪದಿಂದ ನಿನಗೆ ಹೊಡೆಯುವುದಲ್ಲ ಸಾಯಿಸುತ್ತೇನೆ ಎಂದು ಹೇಳಿದವನೇ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಪಿರ್ಯಾದಿದಾರರ ಗಂಡನಿಗೆ ಕೈ, ಕಾಲು ಹಾಗೂ ತಲೆಗೆ ಎದ್ವಾ ತದ್ವಾ ಹೊಡೆದನು. ಪರಿಣಾಮ ತಲೆಯಿಂದ ರಕ್ತ ಸುರಿಯುತ್ತಿತ್ತು. ನಂತರ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ಕೊಂಡು ಹೋದಲ್ಲಿ ದಿನಾಂಕ:20/04.2015 ರಂದು ಸಮಯ 01:00 ಗಂಟೆಗೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 57/15 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಹಿರಿಯಡ್ಕ: ದಿನಾಂಕ 20/04/15 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾದಿ ಶ್ರೀಧರ ಆಚಾರ್ಯ  ಇವರಿಗೆ ದಿವಾಕರ  ಶೆಟ್ಟಿ ಎಂಬವರು ಸಾಂಗ್ಲಿಯಿಂದ  ದೂರವಾಣಿ ಮುಖೇನ ತನ್ನ  ಜಾಗದ ತೆರೆದ ಬಾವಿಯಲ್ಲಿ ಮಗುವಿನ ಶವ ತೇಲುತ್ತಿರುವ ಮಾಹಿತಿ ಇದ್ದು  ಪರಿಶೀಲಿಸಿ ಬರಲು ಸೂಚಿಸಿದ್ದು ಅದರಂತೆ ಫಿರ್ಯಾದಿಯು ಹೋಗಿ ನೋಡಿದಾಗ ಪೆರ್ಡೂರು ಗ್ರಾಮದ ಜೋಗಿ ಬೆಟ್ಟು ಎಂಬಲ್ಲಿಯ ತೆರೆದ ಬಾವಿಯಲ್ಲಿ ಸುಮಾರು ಎರಡು ದಿನದ ಹಿಂದೆ ಹುಟ್ಟಿರ ಬಹುದಾದ ನವಜಾತ ಹೆಣ್ಣು ಮಗುವಿನ ಶವ ನೀರಿನಲ್ಲಿ ತೇಲುತ್ತಿರುವುದು ಕಂಡು  ಬಂದಿದ್ದು, ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 29/15 ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ನಾಗರಾಜ ಶೆಟ್ಟಗಾರ್ ಎಂಬವರು ದಿನಾಂಕ 19/04/15 ರಂದು ಪರ್ಕಳದ ವಿಘ್ನೇಶ್ವರ ಸಭಾ ಭವನದಲ್ಲಿ ನಡೆಯುತ್ತಿದ್ದ ಸಮಾರಂಭದಲ್ಲಿ ಪಾಲುಗೊಂಡಿದ್ದು  ಸಂಜೆ ಸುಮಾರು 5:00 ಗಂಟೆಗೆ ಸಭೆ ಮುಗಿದ ಬಳಿಕ  ಮನೆಗೆ ಬಾರದೇ   ಕಾಣೆಯಾಗಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 60/15 ಕಲಂ. ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
ಇತರೇ ಪ್ರಕರಣ
  •  ಶಿರ್ವಾ: ಪಿರ್ಯಾದಿ ಕಸ್ತೂರಿ ಪಿ ಶೆಟ್ಟಿ ಇವರು ದಿನಾಂಕ:13-04-2015 ರಂದು ಸಮಯ ಸುಮಾರು 03-00 ಗಂಟೆಗೆ ತನ್ನ ಗಂಡನೊಂದಿಗೆ ಶಿರ್ವಾ ಗ್ರಾಮದ ಗಂಗೆರ ಎಂಬಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಜಾಗವನ್ನು  ನೋಡಲು ಹೋದಾಗ ಆರೋಪಿತ ಸುರೇಂದ್ರ ಪೂಜಾರಿ, ಜ್ಯೋತಿ ಪೂಜಾರ್ತಿ, ಬೇಬಿ ಪೂಜಾರ್ತಿ ಮತ್ತು ಐತಪ್ಪ ಕೋಟ್ಯಾನ್ ಇವರು ಪಿರ್ಯಾದಿದಾರರ ಬಾಬ್ತು ಜಾಗದಲ್ಲಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು, ನಿಮ್ಮ ಮೇಲೆ  ದೂರು ನೀಡಿ ಪೊಲೀಸ್  ಕೇಸು  ದಾಖಲು ಮಾಡುತ್ತೇವೆಂದು  ಬೆದರಿಸಿ, ಆಸ್ತಿ  ಬಗ್ಗೆ ಒಂದು ಲಿಖಿತ ಪತ್ರಕ್ಕೆ ಸಹಿ ಮಾಡಿಸಿರುವ ಬಗ್ಗೆ  ಎಂಬಿತ್ಯಾದಿ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 22/15 ಕಲಂ: 447, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

No comments: