Sunday, April 19, 2015

Daily Crime Reports As on 19/04/2015 at 07:00 Hrs


ಕಳವು ಪ್ರಕರಣ
  • ಹಿರಿಯಡ್ಕ: ದಿನಾಂಕ 18/4/15 ರಂದು ಅಪರಾಹ್ನ 03:00 ಗಂಟೆಯಿಂದ ಸಂಜೆ 04:00 ಗಂಟೆಯ ನಡುವಿನ ವೇಳೆಯಲ್ಲಿ,  ಪೆರ್ಡೂರು ಗ್ರಾಮದ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಬಳಿ  ವಾಸಿಸುವ ಫಿರ್ಯಾದುದಾರರಾದ ರಾಜಾರಾಮ ಅಡಿಗ (44) ತಂದೆ ಕೃಷ್ಣ  ಅಡಿಗ ರವರ ಮನೆಯ ಕಚೇರಿಯಲ್ಲಿ ಇರಿಸಿದ್ದ  ‘’ ಏಸರ್‌ ‘’  ಕಂಪೆನಿ ತಯಾರಿಕೆಯ ಸುಮಾರು 17,000/-  ರೂ ಮೌಲ್ಯದ ಲ್ಯಾಪ್‌ ಟ್ಯಾಪ್‌  ನ್ನು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ ಎಂಬುದಾಗಿ ರಾಜಾರಾಮ ಅಡಿಗ ರವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2015 ಕಲಂ 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 
 ಅಸ್ವಾಭಾವಿಕ ಮರಣ ಪ್ರಕರಣ
  • ಪಡುಬಿದ್ರಿ: ಪಿರ್ಯಾದಿದಾರರಾದ ವಿಶ್ವಾನಂದ ಹೆಗ್ದೆ, 54 ವರ್ಷ, ತಂದೆ:- ಜಯಣ್ಣ ಶೆಟ್ಟಿ. ವಾಸ:-ಮುಂಡಿಗದ್ದೆ, ತೀರ್ಥಹಳ್ಳಿ ತಾಲೂಕು, ಬಸ್ ನಿಲ್ದಾಣದ ಬಳಿ, ಶಿವಮೊಗ್ಗ ಜಿಲ್ಲೆ ರವರ ತಂದೆಯಾದ ಜಯಣ್ಣ ಶೆಟ್ಟಿ 90 ವರ್ಷ ಎಂಬವರು ಮಾನಸಿಕ ಒತ್ತಡದಿಂದ ಹಾಗೂ ಅಸೌಖ್ಯದಿಂದ ಬಳಲುತ್ತಿದ್ದವರು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ. 18.04.2015 ರಂದು ಬೆಳಿಗ್ಗೆ 8:30 ಗಂಟೆಗೆ ನಂದಿಕೂರು ಗ್ರಾಮದ ನಂದಿಕೂರು ಎಂಬಲ್ಲಿರುವ ತನ್ನ ಮನೆಯ ಕೊಟ್ಟಿಯ ಮಾಡಿನ ಜಂತಿಗೆ ಹಗ್ಗದಿಂದ ನೇಣು ಬಿಗಿದು ಮೃತ ಪಟ್ಟಿರುತ್ತಾರೆ ಎಂಬುದಾಗಿ ವಿಶ್ವಾನಂದ ಹೆಗ್ದೆ ರವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 15/2015 ಕಲಂ 174 ಸಿ.ಆರ್.ಪಿ.ಸಿ ಪ್ರಕರಣ ದಾಖಲಾಗಿರುತ್ತದೆ.

No comments: