Tuesday, April 14, 2015

Daily Crime Reports As on 14/04/2015 at 19:30 Hrs

ಅಪಘಾತ ಪ್ರಕರಣಗಳು
  • ಕಾರ್ಕಳ: ಪಿರ್ಯಾದಿದಾರರಾದ ಅಬ್ದುಲ್ ಹಮೀದ್ ಪ್ರಾಯ: 34 ವರ್ಷ, ತಂದೆ: ದಿ. ಅಮ್ಮಬ್ಬ ವಾಸ:ಗುಂಡೀರ್ ಹೌಸ್, ತೆಂಕ ಮಿಜಾರು ಗ್ರಾಮ, ಮಂಗಳೂರು ತಾಲೂಕು ರವರು ದಿನಾಂಕ 13/04/2015 ರಂದು ತನ್ನ ಮೋಟಾರು ಸೈಕಲ್ ನಲ್ಲಿ ಶೃಂಗೇರಿ ಕಡೆಗೆ ಬಜಗೋಳಿ ಕಡೆಯಿಂದ ಹೋಗುತ್ತಿರುವಾಗ ಮಾಳ ಚೆಕ್ ಪೋಸ್ಟ್  ನಿಂದ ಎಸ್ ಕೆ. ಬಾರ್ಡ ರ್ ಕಡೆಗೆ 2 ಕಿ.ಮೀ ದೂರ ಮಾಳ ಘಾಟ್ ನ ಏರಿಕೆ ತಿರುವು ರಸ್ತೆಯಲ್ಲಿ ಕೆಎ: 19 ಡಿ: 444 ನೇ ಬಸ್ಸಿನ ಚಾಲಕ ಸೋಮ ಶೇಖರ ಎಂಬಾತನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಎದುರಿನಿಂದ ಅಂದರೆ ಎಸ್.ಕೆ. ಬಾರ್ಡರ್ ಕಡೆಯಿಂದ ಮಾಳ ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದ ಕೆಎ:19, ಎಂಸಿ: 5764 ನೇ ಸ್ವಿಫ್ಟ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡು, ಕಾರಿನಲ್ಲಿದ್ದ ಚಾಲಕ ಅಬ್ದುಲ್ ರಹಿಮಾನ್ ರವರ ಹೆಂಡತಿ ಆಬಿದಾ, ಹೆಣ್ಣು ಮಕ್ಕಳಾದ ಜೈನಭಾ, ಹಾಗೂ ಸಾರಾ ಆಫಿಯಾರವರಿಗೆ ರಕ್ತಗಾಯ ಉಂಟಾಗಿರುತ್ತದೆ ಎಂಬುದಾಗಿ ಅಬ್ದುಲ್ ಹಮೀದ್ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಪಿರ್ಯಾದಿದಾರರಾದ ಹೆಚ್ ಮೆಹಬೂಬ (52) ತಂದೆ: ಸತ್ತಾರ್ ಸಾಬ್, ವಾಸ: ಕೆ ಹೊಸಾರ್ಬೆಟ್ಟದಳ್ಳಿ, ತರಿಕೆರೆ ತಾಲೂಕು, ಚಿಕ್ಕಮಂಗಳೂರು ಜಿಲ್ಲೆ ರವರು ಚಿಕ್ಕಮಂಗಳೂರು ಜಿಲ್ಲೆ ತರಿಕೆರೆ ತಾಲೂಕು ಟಿ.ವಿ ಜಯಣ್ಣ ಎಂಬುವರ ಕೆ.ಎ 12 -3715 ನೇ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 13.04.2015 ರಂದು ಬೆಳಿಗ್ಗೆ 11: 30 ಗಂಟೆಗೆ ತನ್ನ ಲಾರಿಯಲ್ಲಿ ಮಂಗಳೂರಿನಿಂದ ಮರಳು ಲೋಡ್ ಮಾಡಿ ತರಿಕೆರೆಗೆ ಹೋಗುತ್ತಾ ಮಾಳಾ ಗ್ರಾಮದ ಮಾಳಾ ಘಾಟ್ ನ ಎಸ್.ಕೆ ಬಾರ್ಡರ್‌ ನ ಎನ್ ಹೆಚ್ 13 ತಿರುವು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕೆ.ಎ 45 ಎಂ 0912 ನೇ ಹುಂಡೈ ಐ 10 ಕಾರನ್ನು ಅದರ ಚಾಲಕ ಚಂದನ್ ಎಂಬವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಲಾರಿಯ ಬಲ ಬದಿಯ ಬಂಪರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಬಂಪರ್ ಜಖಂಗೊಂಡಿರುತ್ತದೆ ಅಲ್ಲದೆ ಕಾರಿನ ಮುಂಬಾಗ ಜಖಂಗೊಂಡು ಕಾರಿನಲ್ಲಿದ್ದ ರಾಜೇಂದ್ರ, ಸ್ವರ್ಣಲತಾ  ಎಂಬವರಿಗೆ ಎಡ ತೋಳಿಗೆ ಮತ್ತು ಎಡ ಕಾಲಿನ ಮಂಡಿಗೆ ಗಾಯವಾಗಿರುತ್ತದೆ, ಹಾಗೂ ಪುನೀತ್ ಎಂಬುವರಿಗೆ ತರಚಿದ ಮತ್ತು ಗುದ್ದಿದ ಗಾಯವಾಗಿರುತ್ತದೆ. ಈ  ಅಫಘಾತಕ್ಕೆ ಕೆ.ಎ 45 ಎಂ 0912 ನೇ ನಂಬ್ರದ ಕಾರು ಚಾಲಕ ಚಂದನ್ ಇವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆ ಕಾರಣವಾಗಿರುತ್ತದೆ ಎಂಬುದಾಗಿ ಹೆಚ್ ಮೆಹಬೂಬ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 58/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ದಿನಾಂಕ 14.04.15 ರಂದು ಪಿರ್ಯಾದಿದಾರರಾದ ಚಂದ್ರ ಎಸ್‌, ತಂದೆ: ದಿ.ಶೀನಪ್ಪ, ವಾಸ: ಸುಭಾಷ್‌ನಗರ, ಕುರ್ಕಾಲು ಗ್ರಾಮ, ಉಡುಪಿ ತಾಲೂಕು ರವರು ತನ್ನ ಸ್ಕೂಟಿ ವಾಹನ ನಂಬ್ರ ಕೆಎ 20 ಈಈ 5667 ನೇದರಲ್ಲಿ ತನ್ನ ಮಕ್ಕಳಾದ ಸಚ್ಚಿನ್‌ ಹಾಗೂ ಸಂಗೀತಾರವರನ್ನು ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ತನ್ನ ಮನೆ ಕಡೆಯಿಂದ ಉಡುಪಿ ಕಡೆಗೆ ಬರುತ್ತಿರುವಾ ಬೆಳಿಗ್ಗೆ 09:30 ಗಂಟೆಗೆ ಅಲೆವೂರು ಗ್ರಾಮದ ಪಡು ಅಲೆವೂರು ಆರ್‌.ಕೆ ಏಜೆನ್ಸಿಸ್‌ ಬಳಿ ರಸ್ತೆಯಲ್ಲಿ ತಲುಪುವಾ ಎದುರಿನಿಂದ ಕೆಎ 20 ಸಿ 6414ನೇದರ ಟಿಪ್ಪರ್‌ನ ವಾಹನದ ಚಾಲಕನು ತಾನು ಚಲಾಯಿಸಿಕೊಂಡು ಬಂದ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ಮಕ್ಕಳು ವಾಹನ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ಮೂಳೆ ಮುರಿತ, ಬಲಕೈ ಹಾಗೂ ಎಡಕೈಗೆ ತರಚಿದ ಗಾಯವಾಗಿರುತ್ತದ ಹಾಗೂ ಮಗಳಾದ ಸಂಗೀತಾಳಿಗೆ ಹಣೆಗೆ ಮತ್ತು ಮೂಗಿಗೆ ತರಚಿದ ಗಾಯ, ಮಗ ಸಚ್ಚಿನ್‌ಗೆ  ಬಲಕಾಲಿಗೆ ಹಾಗೂ ಬಲಕಣ್ಣಿನ ಕೆಳಗಡೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಹಾಗೂ ಅವರ ಮಕ್ಕಳನ್ನು ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬುದಾಗಿ ಚಂದ್ರ ಎಸ್‌ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2015 ಕಲಂ 279, 337, 338 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ
  • ಕುಂದಾಪುರ: ದಿನಾಂಕ 13/04/2015 ರಂದು ರಾತ್ರಿ 8:00 ಗಂಟೆಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕೆ.ಜಿ.ಬಿ. ಕಾಂಪ್ಲೆಕ್ಸ್ ಎಂಬಲ್ಲಿರುವ ಪಿರ್ಯಾದಿದಾರರಾದ ಸೌರಾಭಿ ವಿ ಪೈ (38) ಗಂಡ : ವೆಂಕಟರಮಣ ಪೈ ರವರ ಮನೆಯ ಒಳಗೆ  ಆಪಾದಿತರಾದ  ಶುಭ ಕಾರಂತ ರವರು ಅಕ್ರಮವಾಗಿ ಪ್ರವೇಶಿಸಿ ಪಿರ್ಯಾದಿದಾರರನ್ನು ಉದ್ದೇಶಿಸಿ ಈ ತಿಂಗಳ ಒಳಗೆ ಅಂಗಡಿ ಖಾಲಿ ಮಾಡಬೇಕು. ಇಲ್ಲವಾದಲ್ಲಿ ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಕೊಲ್ಲವುದಾಗಿ ಜೀವ ಬೆದರಿಕೆ  ಹಾಕಿರುವುದಲ್ಲದೇ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿರುವುದಾಗಿದೆ. ಆಪಾದಿತರಾದ  ಶುಭ ಕಾರಂತ ರವರು ಈ ಹಿಂದಿನ ಹಳೆಯ ದ್ವೇಷದಿಂದ ಈ ಕೃತ್ಯ ನಡೆಸಿದ್ದಾಗಿರುತ್ತದೆ ಎಂಬುದಾಗಿ ಸೌರಾಭಿ ವಿ ಪೈ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/2015 ಕಲಂ 448, 506, 323 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಇತರ ಪ್ರಕರಣ

  • ಕಾರ್ಕಳ: ದಿನಾಂಕ 02.04.2015 ರಿಂದ ದಿನಾಂಕ 04.04.2015 ರ ಮದ್ಯ ಅವದಿಯಲ್ಲಿ ಬೋಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋಳ ಸಚ್ಚರಿ ಪೇಟೆ ರಸ್ತೆ ಹಾಗು ಬರಬೈಲು ಬಳಿಯ ಕೆಮ್ಮಣ್ಣು ನಿಟ್ಟೆ ಬೋಳ ರಸ್ತೆಯಲ್ಲಿ ಶಿಲಾನ್ಯಾಸದ ಕಲ್ಲುಗಳನ್ನು ಯಾರೋ ದುಷ್ಕರ್ಮಿಗಳು ಒಡೆದು ಹಾಕಿ ಹಾಳು ಮಾಡಿರುವುದಾಗಿದೆ ಎಂಬುದಾಗಿ ಹರೀಶ ಕೆವಿ ಪಿಡಿಒ  ಬೋಳ ಗ್ರಾಮ ಪಂಚಾಯತ್‌ ಬೋಳ ಗ್ರಾಮ, ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 57/2015 ಕಲಂ 427 ಜೊತೆಗೆ 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಲಾಗಿದೆ. 

No comments: