Sunday, April 12, 2015

Daily Crime Reports As on 12/04/2015 at 17:00 Hrs



ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 12/04/2015 ರಂದು ಸಮಯ ಸುಮಾರು ಬೆಳಿಗ್ಗೆ 3:45 ಗಂಟೆಗೆ  ಕುಂದಾಪುರ ತಾಲೂಕು  ಬಳ್ಕೂರು  ಗ್ರಾಮದ  ಬಳ್ಕೂರು ಎಂಬಲ್ಲಿ ರಾಜ್ಯ ರಸ್ತೆಯಲ್ಲಿ ಆಪಾದಿತ ಜಗದೀಶ ಎಂಬವರು KA 20-C-2629 ನೇ ಬಸ್ಸನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು  ಬಂದು, ಪಿರ್ಯಾದಿದಾರರಾದ ಮಹೇಶ್‌ ಮೋಗವೀರ ಪ್ರಾಯ: 28 ವರ್ಷ ತಂದೆ: ದುರ್ಗ ಮೋಗವೀರ ವಾಸ: ಗಂಗಾಜಲ ನಿಲಯ ಬಳ್ಕೂರ್‌ ಕುಂದಾಪುರ ತಾಲೂಕು  ಎಂಬವರು ಕುಳಿತುಕೊಂಡು ಮಾರ್ಕ ಡಿಸೋಜಾ ಎಂಬವರು ರಸ್ತೆಯ ಬದಿಯಲ್ಲಿ  ನಿಲ್ಲಿಸಿಕೊಂಡಿದ್ದ   KA20-B-6131ನೇ ಗೂಡ್ಸ್‌  ಪಿಕ್‌ ‌‌ಅಪ್‌‌  ವಾಹನಕ್ಕೆ  ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಾರ್ಕ ಡಿಸೋಜಾ ರವರು ಚಿನ್ಮಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರಗೆ ದಾಖಲಾಗಿರುವುದಾಗಿದೆ ಎಂಬುದಾಗಿ ಮಹೇಶ್‌ ಮೋಗವೀರ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2015 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

  • ಹೆಬ್ರಿ: ಪಿರ್ಯಾದಿದಾರರಾದ ಸಿಬ್ಗಾತುಲ್ಲಾ (34) ತಂದೆ: ಹಾಜಿ ಮೊಹಮ್ಮದ್ ಸೈಪುಲ್ಲಾ ವಾಸ: ಬೈಪಾಸ್‌ ರೋಡ್‌ , ದಿಲ್ಲಿ ದರ್ಬಾರ್ ಎದುರು, ಜಯದೇವ ರೈಸ್‌ ಮಿಲ್‌ಮುರಾದ್‌ ನಗರ, ಶಿಮೊಗ್ಗ ಜಿಲ್ಲೆ ಎಂಬವರ ಭಾವ ಸುಬಾನ್ (18) ಎಂಬವರು ದಿನಾಂಕ 12-04-2015 ರಂದು ಬೆಳಿಗ್ಗೆ ಶಿವಮೊಗ್ಗದಿಂದ ಮಂಗಳೂರಿಗೆ ಕೆಎ.14.ಬಿ.2315 ನೇ ಕೃಷ್ಣ ಮಿನಿ ಬಸ್ಸಿನಲ್ಲಿ ಬಸ್ಸಿನ ಎಡ ಬಿದಿಯ ಕಿಟಕಿ ಬಳಿ ಕುಳಿತುಕೊಂಡು ತೀರ್ಥಹಳ್ಳಿ ಆಗುಂಬೆ ಮಾರ್ಗವಾಗಿ ಪ್ರಯಾಣಿಸುತ್ತಿದ್ದಾಗ ಬೆಳಿಗ್ಗೆ ಸುಮಾರು 7:30 ಗಂಟೆಗೆ ನಾಡ್ಪಾಲು ಗ್ರಾಮದ ಸೋಮೇಶ್ವರ ಜಕ್ಕನಮಕ್ಕಿ ಎಂಬಲ್ಲಿ ತಲುಪುವಾಗ ಸುಬಾನ್‌ ರವರು ವಾಂತಿ ಮಾಡುವ ಸಲುವಾಗಿ ಬಸ್ಸಿನ ಕಿಟಕಿಯಿಂದ ತಲೆ ಹೊರ ಹಾಕಿ ವಾಂತಿ ಮಾಡುತ್ತಿದ್ದಾಗ ಸದ್ರಿ ಬಸ್ಸಿನ ಚಾಲಕನಾದ ಶಿವಕುಮಾರ ರವರು ಎದುರುಗಡೆಯಿಂದ ಬರುತ್ತಿದ್ದ ಕ್ಯಾಂಟರ್ ವಾಹನವನ್ನು ಹಾಗೂ ರಸ್ತೆಯ ಎಡ ಬದಿಯಲ್ಲಿದ್ದ ವಿದ್ಯುತ್‌ ಕಂಬವನ್ನು ಗಮನಿಸಿಯೂ ಕಿರಿದಾದ ರಸ್ತೆಯಲ್ಲಿ ಬಸ್ಸನ್ನು ನಿಲ್ಲಿಸದೇ ರಸ್ತೆಯ ತೀರಾ ಎಡಕ್ಕೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ರಸ್ತೆಯ ಎಡ ಬದಿಯಲ್ಲಿದ್ದ ವಿದ್ಯುತ್ ಕಂಬವು ಸುಬಾನ್‌ ರವರ ತಲೆ ಹಾಗೂ ಮಖಕ್ಕೆ ಬಡಿದ ಪರಿಣಾಮ ತೀವ್ರ ತರದ ಗಾಯಗೊಂಡು ಮೃತಪಟ್ಟಿರುವುದಾಗಿದ್ದು, ಸದ್ರಿ ಅಪಘಾತದಲ್ಲಿ ನಿರ್ವಾಹಕ ಮೇಘರಾಜ್ ರವರ ನಿರ್ಲಕ್ಷ್ಯವು ಕಾರಣವಾಗಿರುತ್ತದೆ ಎಂಬುದಾಗಿ ಸಿಬ್ಗಾತುಲ್ಲಾ ರವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2015 ಕಲಂ 279, 304(ಎ) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 11/04/2015  ರಂದು 20:00 ಗಂಟೆಯಿಂದ ದಿನಾಂಕ 12/04/2015 ರಂದು ಬೆಳಿಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು  ಮಿಯ್ಯಾರು ಗ್ರಾಮದ ಜೋಡುಕಟ್ಟೆ ಶ್ರೀ ಮಹಾ ಗಣಪತಿ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಬಾಗಿಲನ್ನು ಯಾರೋ ಕಳ್ಳರು ತೆರೆದಿದ್ದು ಅದರ  ಬಳಿ ಇರುವ ನಾಗನ ಗುಡಿಯ ದೇವರ ಹುಂಡಿಯನ್ನು ತೆರೆದು ಹುಂಡಿ ಹಣವನ್ನು ಕಳವು ಮಾಡಿರುತ್ತಾರೆ. ಹುಂಡಿಯಲ್ಲಿ ಸುಮಾರು 5,000/- ಹಣ ಇದ್ದಿರಬಹುದು ಎಂಬುದಾಗಿ ರಾಜೇಂದ್ರನ್ (57) ತಂದೆ ಕೆ ದೊರೆಸ್ವಾಮೀ ವಾಸ ವೀರಮಾರುತಿ ನಿಲಯ, ಸುರೇಖನಗರ, ಜೋಡುಕಟ್ಟೆ.ಮಿಯ್ಯಾರು ಪೋಸ್ಟ್ ಕಾರ್ಕಳ ತಾಲೂಕು ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2015 ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: