Friday, April 10, 2015

Daily Crime Reports As On 10/04/2015 At 07:00 Hrsಮಟ್ಕಾ ಜುಗಾರಿ ಪ್ರಕರಣ

  • ಕೊಲ್ಲೂರು: ದಿನಾಂಕ 09/04/15 ರಂದು 4.15 ಗಂಟೆಗೆ ಕೊಲ್ಲೂರು ಠಾಣಾ ಪಿ.ಎಸ್.ಐರವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ಕರ್ತವ್ಯ ನಿರ್ವಹಿಸುತ್ತಿರುವಾಗ 17:00 ಗಂಟೆಯ ಸಮಯ ಚಿತ್ತೂರು ಗ್ರಾಮದ ಮಾರಣಕಟ್ಟೆ ರಸ್ತೆಯ ಶ್ರೀ ಬ್ರಹ್ಮಲಿಂಗೇಶ್ವರ ಕಲ್ಯಾಣ ಮಂಟಪದ ಎದುರು ಆಪಾದಿತ M.ನಾರಾಯಣ ಎಂಬವರು ಸಾರ್ವಜನಿಕರಿಂದ ಅಕ್ರಮವಾಗಿ ಹಣವನ್ನು ಪಣವಾಗಿ  ಸಂಗ್ರಹಿಸಿಕೊಂಡು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದವನನ್ನು ಸಿಬ್ಬಂದಿಗಳ ಸಹಾಯದಿಂದ ವಶಕ್ಕೆ ಪಡೆದಿದ್ದು ಆಪಾದಿತನಿಗೆ ಆತನ ತಪ್ಪಿತದ ಬಗ್ಗೆ ತಿಳಿಸಿ ವಿಚಾರಿಸಲಾಗಿ ತಾನು ಮಟ್ಕಾ ಜುಗಾರಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದು ಸಾರ್ವಜನಿಕರು ಮಟ್ಕಾ ನಂಬ್ರಕ್ಕೆ ಪಣವಾಗಿ ಕಟ್ಟಿದ್ದ ಹಣವನ್ನು ಮುಖ್ಯ ಬಿಡ್ಡರ್ಆಪಾದಿತ  ಮಂಜುನಾಥ ಹತ್ವಾರ್ಎಂಬವರಿಗೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಆಪಾದಿತನಿಂದ ಮಹಜರು ಮುಖೇನ ಆತನು ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ರೂ 500/-, ಬಾಲ್ಪೆನ್ನು-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ-1 ನ್ನು ವಶಪಡಿಸಿದ್ದು ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  36/2015 ಕಲಂ: 78(1)(111)  ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 06/04/15 ರಂದು  ಕುಂದಾಪುರ ತಾಲೂಕಿನ  ಹಾಲಾಡಿ 76 ಗ್ರಾಮದ  ಹುಯ್ಯಾರು ಉಪ್ಪರಿಗೆ ಮನೆ ಎಂಬಲ್ಲಿ  ಸುಮಾರು 55 ವರ್ಷ ಪ್ರಾಯದ ರಘುರಾಮ ಎಂಬುವರು  ಮನೆಯ ಬಳಿಯ ತೆಂಗಿನ ಮರದಿಂದ ಕಾಯಿ ತೆಗೆಯಲು ಮರ ಹತ್ತುವಾಗ  ಆಕಸ್ಮಾತ್ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡಿದ್ದು, ನಂತರ   ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ.ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 02/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: