Thursday, April 09, 2015

Daily Crime Reports As On 09/04/2015 At 07:00 Hrs

ಅಪಘಾತ ಪ್ರಕರಣಗಳು
  • ಕೋಟ:ಪಿರ್ಯಾದಿದಾರರಾದ ಸುಬ್ರಾಯ ಆಚಾರ್ (60), ತಂದೆ:ಗುಂಡು ಆಚಾರ್, ವಾಸ:ಅಲ್ತಾರು, ಯಡ್ತಾಡಿ ಗ್ರಾಮ, ಉಡುಪಿ ತಾಲೂಕುರವರು ದಿನಾಂಕ:08/04/2015 ರಂದು ಬೆಳಿಗ್ಗೆ 10:30 ಗಂಟೆಗೆ ತನ್ನ ಕೆ.:20 ಜೆ:7836ನೇ ನಂಬ್ರದ ಮೋಟಾರ್ ಸೈಕಲನ್ನು ರಾ.ಹೆ 66ರಲ್ಲಿ ಚಲಾಯಿಸಿ ಕೊಂಡು  ಬರುವಾಗ ಸಾಲಿಗ್ರಾಮ ನರ್ತಕಿ ಬಾರ್ ಎದುರು ಸಾಸ್ತಾನ ಕಡೆಯಿಂದ ಕೋಟ ಕಡೆಗೆ ಕೆ.20 9804 ನೇ ನಂಬ್ರದ 407 ಗೂಡ್ಸ್ ಟೆಂಪೋ ಚಾಲಕ ಸಂದೀಪ್ ಎಸ್ ಕುಂದರ್  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರ ಮೋಟಾರ್ ಸೈಕಲ್ಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದು ಬಲ ಕೈಯ ಕೋಲು ಕೈಗೆ,ಬಲ ಕಾಲಿನ ಮೊಣಗಂಟಿಗೆ ಹಾಗೂ ಎಡ ಭುಜಕ್ಕೆ ಗುದ್ದಿದ ಗಾಯಗೊಂಡು  ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  65/15 ಕಲಂ 279,337 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ. 
  • ಕುಂದಾಪುರ ಸಂಚಾರ:ದಿನಾಂಕ 08/04/2015 ರಂದು ಮಧ್ಯಾಹ್ನ ಸುಮಾರು 1:30 ಗಂಟೆಗೆ ಕುಂದಾಪುರ ತಾಲೂಕು  ಕಾಳಾವರ ಗ್ರಾಮದ  ಸಳ್ವಾಡಿ ಎಂಬಲ್ಲಿ ಪಿರ್ಯಾದಿ ಪ್ರಕಾಶ (32) ತಂದೆ:ಬಸವ ವಾಸ:ಗುರುಕುಲ ರಸ್ತೆ,  ವಕ್ವಾಡಿ ಗ್ರಾಮ, ಕುಂದಾಪುರ ಎಂಬವರು ರಸ್ತೆ  ದಾಟುತ್ತಾ ರಸ್ತೆಯ ಅಂಚಿಗೆ  ತಲುಪುವಾಗ ಆಪಾದಿತ ಪ್ರವೀಣ ಎಂಬವರು KA 03-HB-8464ನೇ ಬೈಕ್ ನ್ನು ಕೊಟೇಶ್ವರ ಕಡೆಯಿಂದ ಹಾಲಾಡಿ  ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಗಾಯಗೊಂಡು ಕೊಟೇಶ್ವರ  ಎನ್‌.ಆರ್  ಆಚಾರ್ಯ  ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದು,  ಬೈಕ್ ಸವಾರ ಪ್ರವೀಣ ಗಾಯಗೊಂಡು ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ.ಎಂ .ಸಿ ಆಸ್ಪತ್ರಗೆ ಹೋಗಿದ್ದು  ಬೈಕಿನ ಸಹ ಸವಾರ ಅಜಿತ್ ಶೆಟ್ಟಿ ಎಂಬವರು ಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ . ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ  37/2015  ಕಲಂ 279, 337   ಐಪಿಸಿ ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆಕೈಗೊಳ್ಳಲಾಗಿದೆ.


No comments: