Sunday, April 05, 2015

Daily Crime Reports As on 05/04/2015 at 17:00 Hrs


ವಂಚನೆ ಪ್ರಕರಣ
  • ಮಣಿಪಾಲ: ಆರೋಪಿತನಾದ ಗಣೇಶ್ ಮಲ್ಲಂಪಳ್ಳಿ, ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ರವರು ಪಿರ್ಯಾದಿದಾರರಾದ ಪ್ರಶಾಂತ್ ಭಟ್ ಪ್ರಾಯ : 32 ತಂದೆ : ಶ್ರೀಪತಿ ಭಟ್  ವಾಸ: ಮೂಡು ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ರವರೊಂದಿಗೆ ದಿನಾಂಕ: 28-04-2014 ರಂದು ತನ್ನ ಜಾಗವನ್ನು 21,00,000/- ರೂಪಾಯಿಗೆ ಕೊಡುವುದಾಗಿ ತಿಳಿಸಿ ಕರಾರು ಮಾಡಿಕೊಂಡು ಈ ಬಗ್ಗೆ ಪಿರ್ಯಾದಿದಾರರಿಂದ 4,00,000/- ರೂಪಾಯಿ ಹಣವನ್ನು ಮುಂಗಡ ಪಡೆದುಕೊಂಡಿದ್ದು, ತದ ನಂತರ ಜನವರಿ -2015 ರಲ್ಲಿ ವಿಚಾರಿಸಿದಾಗ ಆರೋಪಿತರು ತನ್ನ ಜಾಗವನ್ನು ಮಾರಾಟ ಮಾಡುವುದಿಲ್ಲ ಎಂದು ತಿಳಿಸಿ  ಕರಾರು ಮುಕ್ತಾಯ ಮಾಡುವ ಎಂದು ಹೇಳಿ ಈ ಬಗ್ಗೆ ನಷ್ಟ ಭರ್ತಿ ಮಾಡಿಕೊಡುವುದಾಗಿ ದಿನಾಂಕ: 17-02-2015 ರಂದು ಕರಾರು ಮಾಡಿಕೊಂಡಿದ್ದು, ಸದ್ರಿ ಕರಾರಿನಂತೆ ದಿನಾಂಕ: 31-03-2015 ರವರೆಗೆ ಆರೋಪಿತನು ಪಿರ್ಯಾದಿದಾರರಿಗೆ ಹಣ ವಾಪಾಸು ನೀಡಿರುವುದಿಲ್ಲ. ಅದರಂತೆ ದಿನಾಂಕ 04-04-2015 ರಂದು ಬೆಳಿಗ್ಗೆ ಸುಮಾರು 8:00 ಗಂಟೆಗೆ ಪಿರ್ಯಾದಿದಾರರು ಆರೋಪಿತನಲ್ಲಿ  ಹಣ ನೀಡುವಂತೆ ಕೇಳಿದಾಗ ಆರೋಪಿತನು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯನ್ನು ಹಾಕಿರುತ್ತಾನೆ ಎಂಬುದಾಗಿ ಪ್ರಶಾಂತ್ ಭಟ್ ರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 52/15 ಕಲಂ 420,504,506 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ
  • ಉಡುಪಿ: ಪಿರ್ಯಾದಿದಾರರಾದ ಪ್ರಸಾದ್ ರಾವ್ (45), ತಂದೆ: ದಿ ದೇವರಾಜ್ ರಾವ್ ವಾಸ: ಮನೆ ನಂ 11-3-64 ವಿಶ್ವೇಶ್ವರಯ್ಯ ರೋಡ್ ಬನ್ನಂಜೆ ಮೂಡನಿಡಂಬೂರು ಗ್ರಾಮ ಉಡುಪಿ ತಾಲೂಕು ರವರು ದಿನಾಂಕ 04/04/2015 ರಂದು ರಾತ್ರಿ ಊಟ ಮಾಡಿ ಮಲಗಿರುವಾಗ ಸಮಯ ಸುಮಾರು 23:45 ಗಂಟೆಯ ಸಮಯದಲ್ಲಿ ಯಾರೋ ಬಲತ್ಕಾರವಾಗಿ ಬಾಗಿಲನ್ನು ದೂಡಿ ಸುಮಾರು 3 ರಿಂದ 4 ಜನ  ಒಳಗೆ ಬಂದು ಪಿರ್ಯಾದಿದಾರರ ಮುಖ, ಕಾಲುಗಳನ್ನು ಒತ್ತಿ ಹಿಡಿದು ಆರೋಪಿತರು ಕೈಯಿಂದ ಮುಖಕ್ಕೆ ಹಲ್ಲೆ ಮಾಡಿದ್ದು, ಅಲ್ಲದೇ ಕಬ್ಬಿಣದ ರಾಡ್ ನಿಂದ ಬಲ ಕೈಯ ಬೆರಳಿಗೆ, ತೋಳಿಗೆ, ತೊಡೆಗೆ ಬಲಕಾಲಿನ ಮೊಣಗಂಟಿಗೆ ಮತ್ತು ಕಾಲಿನ ಗಂಟಿಗೆ ಹಲ್ಲೆ ಮಾಡಿರುತ್ತಾರೆ . ಪಿರ್ಯಾದಿದಾರರ ಬೊಬ್ಬೆ ಹಾಕಿದಾಗ ಆರೋಪಿತರು ಓಡಿ ಹೋಗಿರುತ್ತಾರೆ, ಪಿರ್ಯಾದಿದಾರರಿಗೂ ಮತ್ತು ಕುಟುಂಬದವರಿಗೂ ಆಸ್ತಿಯ ವಿಚಾರವಾಗಿ ತಕರಾರು ಇದ್ದು ಈ ವಿಚಾರವಾಗಿ ಹಲ್ಲೆ ಮಾಡಿರಬಹುದಾಗಿದೆ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ ಎಂಬುದಾಗಿ ಪ್ರಸಾದ್ ರಾವ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 78/15 ಕಲಂ 448, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

No comments: