ಅಸ್ವಾಭಾವಿಕ ಮರಣ ಪ್ರಕರಣ
- ಬ್ರಹ್ಮಾವರ:ದಿನಾಂಕ:21/03/2015 ರಂದು ಬೆಳಿಗ್ಗೆ ಸುಮಾರು 7:00 ಗಂಟೆಯಿಂದ 7:45 ಗಂಟೆಯ ಮಧ್ಯದ ಅವಧಿಯಲ್ಲಿ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಪಿರ್ಯಾದಿದಾರರಾದ ಚಂದ್ರಕಾಂತ ನಾಯಕ್ (39) ತಂದೆ:ಮಹಾಬಲ ನಾಯಕ್, ವಾಸ:ಇಂದಿರಾ ನಗರ, ವಾರಂಬಳ್ಳಿರವರ ಮನೆಯ ಕೊಟ್ಟಿಗೆಯ ಮಾಡಿಗೆ ಅವರ ತಂದೆ ಸುಮಾರು 95 ವರ್ಷದ ಮಹಾಬಲ ನಾಯಕ್‌ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರು ಕಳೆದ 20 ವರ್ಷದಿಂದ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದು, ಕಣ್ಣು ಸರಿಯಾಗಿ ಕಾಣದೆ, ಕಿವಿ ಕೂಡಾ ಸರಿಯಾಗಿ ಕೇಳದಿದ್ದು, ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿದೆ.ಈ ಬಗ್ಗೆ ಚಂದ್ರಕಾಂತ ನಾಯಕ್‌ರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 14/2015 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
- ಬ್ರಹ್ಮಾವರ:ದಿನಾಂಕ:20/03/2015 ರಂದು ಬೆಳಿಗ್ಗೆ 08:30 ರಿಂದ 10:30 ಗಂಟೆಯ ಮಧ್ಯದ ಅವಧಿಯಲ್ಲಿ ಅಪಾದಿತ 1]ರಾಮ ನಾಯ್ಕ, 2]ಕರಿಯ ನಾಯ್ಕ, 3]ಅಣ್ಣಯ್ಯ ನಾಯ್ಕ, 4]ಶಿವಾನಂದ, ಎಲ್ಲರೂ ಹೊಸೂರು ಗ್ರಾಮದವರು ಇವರುಗಳು ಉಡುಪಿ ತಾಲೂಕು ಹೊಸೂರು ಗ್ರಾಮದ ಕರ್ಜೆ ಹೆಗ್ಗುಂಜೆಡ್ಡು ಸಾರ್ವಜನಿಕ ರಸ್ತೆಯಲ್ಲಿ ಕಲ್ಲುಗಳನ್ನು ತಂದು ರಾಶಿ ಹಾಕಿ ಸುಮಾರು 50 ವರ್ಷಕ್ಕಿಂತಲೂ ಹೆಚ್ಚು ವರ್ಷಗಳಿಂದ ನೂರಾರು ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಯನ್ನು ಬಂದ್ ಮಾಡಿ, ಸಾರ್ವಜನಿಕರಿಗೆ ಸಂಚರಿಸದಂತೆ ತೊಂದರೆ ಉಂಟುಮಾಡಿದ್ದು, ಈ ಬಗ್ಗೆ ಹೊಸೂರು ಗ್ರಾಮದ ಸಾರ್ವಜನಿಕರು ಪಿರ್ಯಾದಿದಾರರಾದ ಗುರುಪ್ರಸಾದ್, ತಹಶೀಲ್ದಾರರು, ಉಡುಪಿ ತಾಲೂಕು ಕಛೇರಿ, ಉಡುಪಿರವರಿಗೆ ನೀಡಿದ ಮನವಿಯಂತೆ, ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 51/15 ಕಲಂ:431 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
No comments:
Post a Comment