Thursday, February 26, 2015

PRESS NOTE






  • ದಿನಾಂಕ 26/02/2015  ರಂದು ಉಡುಪಿ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ ಕೆ ಅಣ್ಣಾಮಲೈ ಐಪಿಎಸ್ ರವರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಂತೋಷ ಕುಮಾರ್ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಚಂದ್ರಶೇಖರ್ ಕೆ.ಎಮ್ ರವರ ಮಾರ್ಗದರ್ಶನದಲ್ಲಿ  ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಟಿ.ಆರ್ ಜೈಶಂಕರ್ ರವರು  ಮಣಿಪಾಲ ಪೊಲೀಸ್ ಠಾಣಾ ಅ.ಕ್ರ 24/2015 ಕಲಂ.380 ಐ.ಪಿ.ಸಿ ಪ್ರಕರಣದ ಆರೋಪಿ ಮಹ್ಮದ್ ನಜೀಮ್ @ ನವೀನ ಶೆಟ್ಟಿ ಪ್ರಾಯ: 32 ವರ್ಷ, ತಂದೆ: ಸುಧಾಕರ ಶೆಟ್ಟಿ ವಾಸ: ಗಣಿಬೆಟ್ಟು ಮನೆ, ಹಾವಂಜೆ ಅಂಚೆ ಮತ್ತು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಹಾಲಿ ವಾಸ: ಕೇರಾಫ್ ಹಮೀದ್, ಕೋಟೆ ಬಾಗಿಲು, ಮೂಡಬಿದ್ರೆ ಮಂಗಳೂರು ತಾಲೂಕು ಎಂಬವನನ್ನು  ಈ ದಿನ ದಸ್ತಗಿರಿ ಮಾಡಿ ಆತನು ಸಂತೋಷ ನಗರದ ಅಶ್ರಫ್ ಎಂಬವರ ಮನೆಯಲ್ಲಿ ಕಳವು ಮಾಡಿದ ಚಿನ್ನದ ಕರಿಮಣಿ ಸರ -1, ಚಿನ್ನದ ಉಂಗುರ -1, ಹಾಗೂ ಚಿನ್ನದ ಸಪೂರ ಸರ – 2 ಹಾಗೂ ಯಾವುದೇ ದಾಖಲಾತಿಗಳಿಲ್ಲದೇ ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಜೈಲೊ ಕಾರು ನಂಬ್ರ ಕೆಎ.41.ಎ.702, ನಂಬ್ರ ಪ್ಲೇಟ್ ಇಲ್ಲದ ಟಾಟಾ ಇಂಡಿಗೊ ಕಾರು ಹಾಗೂ ಯಮಹಾ ಫೇಜರ್ ಬೈಕ್ ನಂಬ್ರ ಕೆಎ.20.ಕ್ಯೂ.9759ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.  ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಅಂದಾಜು 13,40,000/- ರೂಪಾಯಿ ಆಗಿರುತ್ತದೆ.
    ಸದ್ರಿ ಆರೋಪಿ ಮಹ್ಮದ್ ನಜೀಮ್@ನವೀನ ಶೆಟ್ಟಿ ಎಂಬವನನ್ನು ಹಾಗೂ ಸ್ವಾಧೀನಪಡಿಸಿಕೊಂಡ ಸ್ವತ್ತುಗಳನ್ನು ಮಣಿಪಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈತನು ತೀರ್ಥಹಳ್ಳಿ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ ಆರೋಪಿಯಾಗಿದ್ದು, ಈತನು ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ದ ನ್ಯಾಯಾಲಯದಿಂದ ದಸ್ತಗಿರಿ ವಾರೆಂಟ್ ಇರುತ್ತದೆ.
      ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ರೋಸಾರಿಯೋ ಡಿಸೋಜ, ರವಿಚಂದ್ರ, ಸುರೇಶ, ಚಂದ್ರ ಶೆಟ್ಟಿ, ಸಂತೋಷ್ ಅಂಬಾಗಿಲು, ಸಂತೋಷ ಕುಂದರ್, ರಾಮು ಹೆಗ್ಡೆ, ಪ್ರವೀಣ, ರಾಘವೇಂದ್ರ ಉಪ್ಪುಂದ, ಥೋಮ್ಸನ್ ಶಿವಾನಂದ, ದಿನೇಶ್ ಮತ್ತು ವಾಹನ ಚಾಲಕ ಚಂದ್ರಶೇಖರರವರು ಪಾಲ್ಗೊಂಡಿರುತ್ತಾರೆ.

No comments: