Saturday, February 28, 2015

Daily Crimes Reported as on 28/02/2015 at 07:00 Hrs

ಅಪಘಾತ ಪ್ರಕರಣ : 
  • ಕಾಪು: ದಿನಾಂಕ 27-02-2015 ರಂದು ಸಂಜೆ ಸುಮಾರು 6-40 ಗಂಟೆಗೆ ಮೂಳೂರು ಗ್ರಾಮದ ಖಾಜಿ ಟವರ್‌ ಹಾರ್ಡ್‌ವೇರ್‌ ಅಂಗಡಿಯ ಬಳಿ ಎನ್‌.ಎಚ್‌. 66 ರಲ್ಲಿ ಕಾಪು ಕಡೆಯಿಂದ ಪಡುಬಿದ್ರೆ ಕಡೆಗೆ ಬಸ್‌ ನಂಬ್ರ ಕೆ.ಎ. 20 ಬಿ 63 ನೇದನ್ನು  ಅದರ ಚಾಲಕ ನಾಸೀರ್‌ ಎಂಬುವವರು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಒಮ್ಮೇಲೆ ಬಲ ಬದಿಗೆ ಚಲಾಯಿಸಿ ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತಿದ್ದ ರೋಡಿನ್‌ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಎಸಯಲ್ಪಟ್ಟು ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಹೈಟೆಕ್‌ ಆಸ್ಪತ್ರೆಗೆ ಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು ಗಾಯಾಳುವನ್ನು ಸಂಜೆ 7:00 ಗಂಟೆಗೆ ಪರೀಕ್ಷಿಸಿ ಗಾಯಾಳು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2015 ಕಲಂ 279 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ : ತಿರುಮಲೇಶ್ , ತಂದೆ, ಬಾಳನ್, ವಾಸ: ಚಾರ್ಲಕುತ್ತೂರು ಗೋವರ್ಧನ ಮಂಡಲದೋನ್ ತಾಲೂಕು, ಕರ್ನೂಲ್ ಜಿಲ್ಲೆ ಆಂದ್ರಪ್ರದೇಶ ರಾಜ್ಯ ಇವರು ಎಪಿ21 ಟಿಟಿ 7833ನೇ ಲಾರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 23-02-2015 ರಂದು ಲಾರಿಯಲ್ಲಿ ಸಿಮೆಂಟ್ ಲೋಡ್ ಮಾಡಿ ಮಂಗಳೂರಿಗೆ ಆನಲೋಡ್ ಮಾಡುವರೆ ಬರುತ್ತಿದ್ದು ದಿನಾಂಕ 24/02/2015 ರಂದು ಶೃಂಗೇರಿ ಕಡೆಯಿಂದ ಕಾರ್ಕಳ ಕಡೆ ಬರಯುವಾಗ ಕಾರ್ಕಳ ತಾಲೂಕಿನ, ಮಾಳಘಾಟ್ ಅಬ್ಬಾಸ್ ಕಟ್ಟಿಂಗ್ ಎಂಬಲ್ಲಿ ರಾತ್ರಿ 19-00 ಗಂಟೆ ಸುಮಾರಿಗೆ ಸದ್ರಿ ಲಾರಿಯ ಚಾಲಕ ತಿರುಮಲನಾಯ್ಡು ಎಂಬುವರು ತನ್ನ ಬಾಬ್ತು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಿಯಂತ್ರಣ ತಪ್ಪಿ ಮಗುಚಿ ಪಲ್ಟಿಯಾಗಿ ಬಿದ್ದ ಪರಿಣಾಮ ಲಾರಿಯು ಪೂರ್ಣ ಜಖಂಗೊಂಡಿರುತ್ತದೆ ಹಾಗೂ ಲಾರಿಯಲ್ಲಿದ್ದ ಸಿಮೆಂಟ್ ಮೂಟೆ ಚೆಲ್ಲ -ಪಿಲ್ಲಿಯಾಗಿರುತ್ತದೆ. ಈ ಅಪಘಾತಕ್ಕೆ ಲಾರಿಯ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೆ ಕಾರಣವಾಗಿರುತ್ತದೆ ಎಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  33/2015 ಕಲಂ. 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾಪು: ದಿನಾಂಕ 27.02.2015 ರಂದು ಕಿರಣ್‌ (40) ತಂದೆ: ದೈವದಿ ಮೂನ್‌ ತಾಲೂಕು ಸತಾರ್‌ ಜಿಲ್ಲೆ ಮಹಾರಾಷ್ಟ್ರ ಇವರು ತನ್ನ ಬಾಬ್ತು ಲಾರಿ ನಂಬ್ರ  50 3966 ನೇದರಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ರಾಹೇ 66ರಲ್ಲಿ ಚಲಾಯಿಸಿಕೊಂಡು ಹೋಗುತ್ತೀರುವಾಗ ಉದ್ಯಾವರ ಗ್ರಾಮದ ನ್ಯೂ ಇಂಡಿಯಾ ವೆಲ್‌ರಿಂಗ್ಸ್ ಬಳಿ ತಲುಪುತ್ತಿದಂತೆ, ಸುಮಾರು 1:30 ಗಂಟೆಗೆ ಸಮಾನ ದಿಕ್ಕಿ ನಿಂದ ಅಂದರೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಓರ್ವ ಮೋಟಾರ್‌ ಸೈಕಲ್‌ ಸವಾರನು ತನ್ನ ಬಾಬ್ತು ಕೆಎ 19 ಇಇ 8102 ನೇ ಮೋಟಾರ್‌ ಸೈಕಲ್‌ನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದು ಅದರ ಪರಿಣಾಮ ಬೈಕ್‌ ಸವಾರನಿಗೆ ತಲೆಗೆ ಗಾಯಗೊಂಡಿದ್ದು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಈ ಅಪಘಾತಕ್ಕೆ ಬೈಕ್‌ ಸವಾರನಾದ ಅನಾನ್‌ ಹುಸೇನ್‌ ರವರು ತನ್ನ ಬಾಬ್ತು ಕೆಎ 19 ಇಇ 8102 ನೇ ಮೋಟಾರ್‌ ಸೈಕಲ್‌ನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿರುವುದೇ ಕಾರಣವಾಗಿರುತ್ತದೆ ಎಂದು ನೀಡಲಾದ ದೂರಿನಂತೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 37/2015 ಕಲಂ 279 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಕಾರ್ಕಳ ಗ್ರಾಮಾಂತರ : ದಿನಾಂಕ 25-02-2015 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಕಾರ್ಕಳ ತಾಲೂಕು, ಕಲ್ಯಾ ಗ್ರಾಮದ ಕೈರಬೆಟ್ಟು ಶಾಲೆ ಹತ್ತಿರ ಹೇಮಲತಾ ದ/ಒ ಮಲ್ಲೇಶ್ ನಾಯ್ಕ್ , ದುರ್ಗಾಪರಮೇಶ್ವರಿ ದೇವಾಸ್ಥಾನ, ಕೈರಬೆಟ್ಟು, ಕಲ್ಯಾ ಇವರು ತನ್ನ ಗಂಡನ ಬಾಬ್ತು ಕೆ ಎ 20 ಇ ಸಿ 8690 ನೇ ನಂಬ್ರದ ಮೋಟಾರು ಸೈಕಲಿನಲ್ಲಿ ಸಹ ಸವಾರರಾಗಿ ಕುಳಿತುಕೊಂಡು ಕೈರಬೆಟ್ಟು ಕಡೆಯಿಂದ ಪಳ್ಳಿ ಕಡೆಗೆ ಹೋಗುವಾಗ ಕೆಎ20ಬಿ6912ನೇ ನಂಬ್ರದ ಮರೋಳಿ ಹೆಸರಿನ ಬಸ್ಸನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇವರು ಕುಳಿತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಮಲ್ಲೇಶ್ ನಾಯ್ಕ ಮತ್ತು ಸಹ ಸವಾರಳಾದ ಹೇಮಲತಾರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಇವರಿಗೆ ಮತ್ತು ಗಂಡ ಮಲ್ಲೇಶ್ ನಾಯ್ಕ ಇವರಿಗೆ ತಲೆಯ ಹಿಂಬದಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  32/2015 ಕಲಂ. 279,337 ಐಪಿಸಿಯಂತೆ ಪ್ರಕ ರಣ ದಾಖಲಿಸಿಕೊಳ್ಳಲಾಗಿದೆ. 
ಕಳವು ಪ್ರಕರಣ : 
  • ಶಂಕರನಾರಾಯಣ : ಕುಂದಾಪುರ ತಾಲೂಕು ಸಿದ್ದಾಫುರ ಗ್ರಾಮದ ಸಿದ್ದಾಫುರ ಬಸ್‌ಸ್ಟಾಂಡ್‌ನಲ್ಲಿರುವ ಕಡ್ರಿ ನಾರಾಯಣ ಮಾಸ್ಟರ್‌ರವರ ಕಾಂಪ್ಲೇಕ್ಸ್‌ ನಲ್ಲಿ ಶ್ರೀ ಬ್ರಾಹ್ಮೀ ಮೊಬೈಲ್‌ಸೆಂಟರ್‌ಎಂಬ ಹೆಸರಿನ ಅಂಗಡಿ ಹೊಂದಿರುತ್ತಾರೆ. ಸಂತೋಷ್‌ ಕೋಟ್ಯಾನ್‌ (32) ತಂದೆ ಗೋವಿಂದ ಪೂಜಾರಿ, ವಾಸ: ನೀಲಮ್ಮ ನಿಲಯ, ಜನ್ಸಾಲೆ,  ಜನ್ಸಾಲೆ ಅಂಚೆ, ಸಿದ್ದಾಪುರ ಗ್ರಾಮ ಕುಂದಾಫುರ ತಾಲೂಕು ಪೋನ್‌ ಇವರು  ದಿನಾಂಕ 27-02-2015 ರಂದು ಮದ್ಯಾಹ್ನಾ 1:50 ಗಂಟೆಗೆ ಅಂಗಡಿಯ ಶೆಟರ್‌ ಎಳೆದು ಶೆಟರ್‌ ಅಡ್ಡ ಚಿಲಕವನ್ನು ಹಾಕಿ ಬೀಗ ಹಾಕದೇ ಊಟಕ್ಕೆಂದು ಹೋಗಿದ್ದು ವಾಪಾಸು 14:10 ಗಂಟೆಗೆ ಬಂದು ನೋಡಿದಾಗ ಇವರ ಬಾಬ್ತು ಅಂಗಡಿಯ ಕ್ಯಾಶ್‌ ಡ್ರಾವರ್‌ನಲ್ಲಿದ್ದ 64,700 ರೂಪಾಯಿ ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 29/2015 ಕಲಂ. 454, 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಶಂಕರನಾರಾಯಣ : ಕುಂದಾಫುರ ತಾಲೂಕು 74 ಉಳ್ಳೂರು ಗ್ರಾಮದ ಅಂಸಾಡಿ ಎಂಬಲ್ಲಿರುವ ಜಯರಾಮ ಹೆಬ್ಬಾರ್‌, ಉಳ್ಳೂರು ಗ್ರಾಮ ಇವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಅಡಿಕೆಯ ಬಾಬ್ತು 4  ಕ್ವಿಂಟಲ್‌ ಸಿಪ್ಪೆ ಇರುವ ಅಡಿಕೆಯನ್ನು ಯಾರೋ ಕಳ್ಳರು ದಿನಾಂಕ 26-02-2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 27-02-2015 ರಂದು ಬೆಳಿಗ್ಗೆ 5:00 ಗಂಟೆ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಅಡಿಕೆಯ ಅಂದಾಜು ಮೌಲ್ಯ ಸುಮಾರು 40,000/- ರೂಪಾಯಿ ಆಗಬಹುದು ಎಂದು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 29/2015 ಕಲಂ. 379 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: