Thursday, February 26, 2015

Daily Crimes Reported as On 26/02/2015 at 17:00 Hrs


ಅಪಘಾತ ಪ್ರಕರಣ
  • ಮಣಿಪಾಲ:ಪಿರ್ಯಾದಿದಾರರಾದ ಗಣಪತಿ ಕಾಮತ್‌, ತಂದೆ:ದಿವಂಗತ ಕೇಶವ ಕಾಮತ್‌, ವಾಸ:ಕುಳೇದ್ದು ಮನೆ, ಪಂಚನಬೆಟ್ಟು ಅಂಚೆ, ವಯಾ ಹಿರಿಯಡ್ಕ, ಉಡುಪಿರವರು ದಿನಾಂಕ:25/02/2015 ರಂದು ತನ್ನ ಅತ್ತಿಗೆ ಸುಮ ಕಾಮತ್‌‌ರವರ ಜೊತೆಯಲ್ಲಿ ಮನೆಯ ಕಡೆಗೆ ಹೋಗುವರೇ ಎಮ್‌ಜೆಸಿ ಕಾಲೇಜು ಕಡೆಯಿಂದ ಎಮ್‌ಜೆಸಿ ಬಸ್ಸು ನಿಲ್ದಾಣದ ಕಡೆಗೆ ಹೋಗುವರೇ ರಸ್ತೆ ದಾಟುತ್ತಿರುವಾಗ 17:30 ಗಂಟೆಗೆ ಉಡುಪಿ ಕಡೆಯಿಂದ ಮಣಿಪಾಲ ಕಡೆಗೆ  ಕೆಎ 18 ಇ2277 ನೇದರ ಮೋಟಾರ್ ಸೈಕಲ್‌ನ ಸವಾರನು ತಾನು ಸವಾರಿ ಮಾಡಿಕೊಂಡು ಬಂದ ಮೋಟಾರ್ ಸೈಕನ್ನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಸುಮ ಕಾಮತ್‌ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗ, ಬೆನ್ನು, ಎರಡು ಕೈಗಳಿಗೆ ಗಾಯವಾಗಿರುತ್ತದೆ. ಗಣಪತಿ ಕಾಮತ್‌ರವರು ಅವರ ಅತ್ತಿಗೆ ಸುಮ ಕಾಮತ್‌ರವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಗಣಪತಿ ಕಾಮತ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 25/15 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜೀವ ಬೆದರಿಕೆ ಪ್ರಕರಣಗಳು
  • ಉಡುಪಿ ನಗರ:ದಿನಾಂಕ:24/02/2015ರಂದು ಸಂಜೆ ಸುಮಾರು 17:50 ರ ಹೊತ್ತಿಗೆ ರಮೇಶ ಕೋಟ್ಯಾನ್‌ ಬಿನ್‌ ರಾಮ ಕೆಳಾರ್ಕಳಿಬೆಟ್ಟು ಎಂಬವರು ಪಿರ್ಯಾದಿದಾರರಾದ ಶೇಖರ ಹಾವೆಂಜೆ(42) ತಂದೆ:ದಾಸು, ವಾಸ:ಹಾವೆಂಜೆ ಗ್ರಾಮ ಹಾಗೂ ಅಂಚೆ, ಉಡುಪಿ ತಾಲೂಕುರವರನ್ನು ಹಿಂಬಾಲಿಸಿಕೊಂಡು ಬಂದು ಶೇಖರ ಹಾವೆಂಜೆರವರ ಬೈಕನ್ನು ಕರಾವಳಿ ಬೈಪಾಸ್‌ ಸಮೀಪ  ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ  ಹಾಕಿತ್ತಾರೆ. ಈ ಬಗ್ಗೆ ಶೇಖರ ಹಾವೆಂಜೆರವರು ನೀಡಿದ ದೂರಿನಂತೆ ಉಡುಪಿ ನಗರ ಠಾಣಾ ಅಪರಾಧ ಕ್ರಮಾಂಕ 41/2015 ಕಲಂ:341, 504, 506  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ:ಪಿರ್ಯಾದಿದಾರರಾದ ದೇವದಾಸ್‌ ಶೆಟ್ಟಿ (38) ತಂದೆ:ವಿಠ್ಠಲ ಶೆಟ್ಟಿ ವಾಸ:ಶ್ರೀ ಲಕ್ಷ್ಮೀ ನಿಲಯ, ಚಾಂತಾರು  ಗ್ರಾಮರವರು ಅವರ ಅಣ್ಣಂದಿರ ಪೈಕಿ ಆಪಾದಿತ ಗಣೇಶ ಶೆಟ್ಟಿ, ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ನಕಲಿ ದಾಖಲಾತಿ ಮಾಡಿ ತನ್ನ ಹೆಂಡತಿಯ ಹೆಸರಿಗೆ ಮಾಡಿಸಿಕೊಂಡಿರುವ ಬಗ್ಗೆ ಕುಂದಾಪುರ ಸಿವಿಲ್‌ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ವಿಚಾರಣೆಯಲ್ಲಿರುತ್ತದೆ. ಈ ಬಗ್ಗೆ ದೇವದಾಸ್‌ ಶೆಟ್ಟಿರವರು ಆಪಾದಿತನಿಗೆ ದಿನಾಂಕ:19-02-2015 ರಂದು ಶಿರೂರು ಎಂಬಲ್ಲಿ ಭೇಟಿಯಾಗಿ ಬುದ್ದಿಮಾತು ಹೇಳಿದ್ದಕ್ಕೆ, ಸಿಟ್ಟುಗೊಂಡು ಅದರ ನಂತರ ಆತನ ಬೆಂಬಲಿಗನಾದ ಆಪಾದಿತ ಗುರುಪ್ರಸಾದ ಎಂಬವನ ಮುಖಾಂತರ ಸೇಡು ತೀರಿಸಲು ದೇವದಾಸ್‌ ಶೆಟ್ಟಿರವರ ಸ್ನೇಹಿತರಿಗೆ ಆಗಾಗ ಪೋನ್‌ ಕರೆ ಮಾಡಿ, ದೇವದಾಸ್‌ ಶೆಟ್ಟಿರವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ದೇವದಾಸ್‌ ಶೆಟ್ಟಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 40/15 ಕಲಂ: 506 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಅಜೆಕಾರು:ದಿನಾಂಕ:25/02/2015 ರಂದು ಸಂಜೆ ಸುಮಾರು 19:00 ಗಂಟೆಯಿಂದ 19:30 ಗಂಟೆಯ ನಡುವೆ ಕಾರ್ಕಳ ತಾಲೂಕು ಅಂಡಾರು ಗ್ರಾಮದ  ರಾಮಗುಡ್ಡೆ ಎಂಬಲ್ಲಿ ಪಿರ್ಯಾದಿದಾರರಾದ ನಟರಾಜ್ ಭಂಡಾರಿ (37) ತಂದೆ:ಈಶ್ವರ ಭಂಡಾರಿ, ವಾಸ:ಹರಿಹರಪುರ ಅಂಚೆ, ಕೊಪ್ಪ ತಾಲೂಕುರವರ ಭಾವ ಸೀತಾರಾಮ ಭಂಡಾರಿ (33) ತಂದೆ:ನಾರಾಯಣ ಭಂಡಾರಿ, ವಾಸ:ಕಲ್ಲಂಜೆ  ಅಂಡಾರು ಗ್ರಾಮ ಕಾರ್ಕಳ ತಾಲೂಕು ಎಂಬವರು ವಿಪರೀತ ಕುಡಿತದ ಚಟದಿಂದ ಬೇಸತ್ತು ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿದ್ದು, ಅವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ನಟರಾಜ್ ಭಂಡಾರಿರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 03/2015 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಬ್ರಹ್ಮಾವರ:ದಿನಾಂಕ:25/02/2015 ರಂದು ಬೆಳಿಗ್ಗೆ ಸುಮಾರು 11;00 ಗಂಟೆಗೆ ಉಡುಪಿ ತಾಲೂಕು ಚಾಂತಾರು ಗ್ರಾಮದಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಮಮತಾ ಎಮ್‌. ಪೈ (51) ಗಂಡ:ದಿವಂಗತ ಮಧುಸೂಧನ ಪೈ, ವಾಸ:ದಿಶಾ, ಮಟಪಾಡಿ ರಸ್ತೆ, ಚಾಂತಾರು ಗ್ರಾಮರವರ ಮನೆಯಲ್ಲಿ ಮಮತಾ ಎಮ್‌. ಪೈರವರ ಮಗ ದಿವಾಕರ ಪೈ (32) ರವರು ಹೊಟ್ಟೆನೋವಿನಿಂದ ಅಸ್ವಸ್ಥಗೊಂಡವರನ್ನು ಪ್ರಣವ್‌ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಯಾವುದೋ ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದು, ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಅದೇ ದಿನ ರಾತ್ರಿ ಸುಮಾರು 10:00 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ದಿವಾಕರ ಪೈ ದಿನಾಂಕ:20/08/2014 ರಂದು ಪ್ರಿಯಾ ಎಂಬವರನ್ನು ಮದುವೆಯಾಗಿದ್ದು, ಮದುವೆಯಾದ 1 ತಿಂಗಳ ಬಳಿಕ ಬೇರೆ ಮನೆಮಾಡುವ ಹಾಗೂ ಆಸ್ತಿಯ ವಿಚಾರದಲ್ಲಿ ಮತ್ತು ಮಮತಾ ಎಮ್‌. ಪೈರವರ ವಿಷಯದಲ್ಲಿಯೂ ದಿವಾಕರ ಪೈ ಹಾಗೂ ಅವರ ಪತ್ನಿ ಪ್ರಿಯಾರಿಗೂ ಆಗಾಗ ಜಗಳ ಆಗುತ್ತಿದ್ದು, ಜಗಳವಾದಾಗ ಪ್ರಿಯಾಳು ತನ್ನ ತಾಯಿ ಶಾರದಾ ದೇವಿ ಹಾಗೂ ತಂಗಿ ಪೂನಮ್‌ರಿಗೆ ವಿಷಯ ತಿಳಿಸುತ್ತಿದ್ದು, ನಂತರ ಅವರು ಮೂರು ಜನರು ಸೇರಿ ದಿವಾಕರ ಪೈರವರಿಗೆ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ದುಷ್ಪ್ರೇರಣೆ ನೀಡಿರುವುದರಿಂದ, ದಿವಾಕರ ಪೈ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಮತಾ ಎಮ್‌. ಪೈರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 41/15 ಕಲಂ:306.ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: