Sunday, February 01, 2015

Daily Crime Reports As on 31/01/2015 at 19:30 Hrs

ಇತರೇ ಪ್ರಕರಣ
  • ಕುಂದಾಪುರ: ದಿನಾಂಕ 31.01.2015 ರಂದು ನಾಸೀರ್‌ ಹುಸೇನ್‌, ಪಿ.ಎಸ್‌.ಐ, ಕುಂದಾಪುರ ಪೊಲೀಸ್‌ ಠಾಣೆ ಇವರು  ಠಾಣಾ ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕೋಡಿ ರಾಮನಗರದ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಮಧ್ಯಾಹ್ನ 12:00 ಗಂಟೆಗೆ ಆಪಾದಿತನು ತನ್ನ ಬಾಬ್ತು ಮಾರುತಿ ಓಮ್ನಿ ಕಾರು ನಂಬ್ರ: ಕೆಎ 20 933 ನೇದನ್ನು ಎಂ.ಕೋಡಿ ಕಡೆಯಿಂದ ಕುಂದಾಪುರ ವಿನಾಯಕ ಜಂಕ್ಷನ್ಕಡೆಗೆ ಚಲಾಯಿಸಿಕೊಂಡು ಬಂದಿದ್ದು, ನಿಲ್ಲಿಸುವಂತೆ ಸೂಚನೆ ನೀಡಿದಾಗ ಆಪಾದಿತ ಕೆ. ಜಬ್ಬರ್‌ (50) ತಂದೆ; ಹುಸೈನಾರ್‌ ವಾಸ: ಎಂ. ಕೋಡಿ ಜಂಕ್ಷನ್‌ ಬಳಿ, ಕೋಡಿ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಈತನು ತನ್ನ ಕಾರನ್ನು ತರಾತುರಿಯಲ್ಲಿ ನಿಲ್ಲಿಸಿ, ಕಾರಿನಿಂದ ಕೆಳಗೆ ಇಳಿದು ಓಡಲು ಪ್ರಯತ್ನಿಸಿದವನನ್ನು ಹಿಡಿದಿದ್ದು, ಓಮ್ನಿ ಕಾರನ್ನು ಪರಿಶೀಲಿಸಲಾಗಿ, ಕಾರಿನ ಒಳಗೆ ನೀಲಿ ಬಣ್ಣದ ಟಾರ್ಪಲ್ನಲ್ಲಿ ರಕ್ತ ಮಿಶ್ರಿತ ಪ್ರಾಣಿಯ ಚರ್ಮ ಹಾಗೂ ಉದರಾಂಗಗಳು ಕಂಡು ಬಂದಿದ್ದು, ವಿಚಾರಿಸಲಾಗಿ, ತಾನು ತನ್ನ ಮನೆಯಲ್ಲಿ ಜಾನುವಾರುಗಳನ್ನು ಖರೀದಿಸಿ, ಅವುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಿ ಜಾನುವಾರುಗಳ ಚರ್ಮ ಹಾಗೂ ಉದರಾಂಗಗಳನ್ನು ಮಾರಾಟ ಮಾಡುವರೆ ಕೊಂಡು ಹೋಗುತ್ತಿರುವುದಾಗಿ ತಿಳಿಸಿದಂತೆ, ಆಪಾದಿತನು ಅನಧಿಕೃತವಾಗಿ ದನಗಳ ಚರ್ಮ ಹಾಗೂ ಉದರಾಂಗಗಳನ್ನು ಮಾರಾಟ ಮಾಡಲು ಸಾಗಾಟ ಮಾಡುತ್ತಿರುವುದನ್ನು ಖಾತ್ರಿಪಡಿಸಿಕೊಂಡು, ಮಾರುತಿ ಓಮ್ನಿ ಕಾರು ನಂಬ್ರ: ಕೆಎ 20 933, ನೀಲಿ ಬಣ್ಣದ ಟಾರ್ಪಲ್‌, 6 ಜಾನುವಾರುಗಳ  ಚರ್ಮ ಮತ್ತು ಉದರಾಂಗಗಳನ್ನು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ. 1,26,000/- ಆಗಬಹುದು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 28/2105 ಕಲಂ: 5, 9, 11 Karntaka Prevention Of Cow Slanghter & Cattle Prevention Act-1964   ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಮಣಿಪಾಲ: ಪ್ರೇಮ್ ಕಿರಣ್‌(13.1/2)ಎಂಬವನು ಮಣಿಪಾಲ ಎಮ್‌ಜೆಸಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಂಕ 20.01.15ರಂದು ಶಾಲೆಯಿಂದ ಮನೆಗೆ ಬಂದು ಸಂಜೆ 4:00ಗಂಟೆಗೆ ಎಮ್‌ಐಟಿ ಮೈದಾನದಲ್ಲಿ ಆಟವಾಡಿ ಬರುತ್ತೇನೆಂದು ಹೇಳಿ ಹೋದವನು ಈತನಕ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾಗಿದೆ. ಕಾಣೆಯಾದ ಬಾಲಕನು ಆಪ್ರಾಪ್ತ ವಯಸ್ಸಿನ ಬಾಲಕನಾಗಿರುವುದರಿಂದ ಆತನನ್ನು ಯಾರಾದರೂ ಅಪಹರಿಸಿಕೊಂಡು ಹೋಗಿರಬಹುದಾಗಿದೆ ಯಾ ಕಾಣೆಯಾಗಿರುಬಹುದು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/15 ಕಲಂ 363 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಮಲ್ಪೆ: ದಿನಾಂಕ: 30-01-2015 ರಂದು ಬೆಳಿಗ್ಗೆ 01:30 ಗಂಟೆಗೆ ಪಿರ್ಯಾದಿ ಗುಂಡಪ್ಪ ಪೂಜಾರಿ  ಇವರು ಅವರ ಬಾಬ್ತು ಕೆಮ್ಮಣ್ಣು ನಂದಿನಿ ಹಾಲಿನ ಡೈರಿಯ ಒಳಗೆ ಇರುವಾಗ ಆರೋಪಿ ಸಂದೇಶ ಲೋಬೋರವರು ಅಂಗಡಿಯ ಒಳಗೆ ಬಂದು ಅಂಗಡಿ ಒಳಗಿನ ಗಲೀಜು ನೀರನ್ನು ಆರೋಪಿಯ ಬಾಬ್ತು ಕಟ್ಟಡದ ಹತ್ತಿರದ ತೆಂಗಿನ ಮರಕ್ಕೆ ಹಾಕಿ ಗಲೀಜು ಮಾಡಿದೆಯೆಂದು ಕೋಪಗೊಂಡು ಪಿರ್ಯಾದಿದಾರರ ಸೊಂಟದ ಹಿಂದೆ, ತೊಡೆಗೆ, ಎಡ ಕಿಬ್ಬೊಟ್ಟಿಗೆ 5-6 ಬಾರಿ ಬೂಟು ಕಾಲಿನಿಂದ ತುಳಿದು ಅವಾಚ್ಯೆ ಶಬ್ದಗಳಿಂದ ಬೈದು ನೆಲಕ್ಕೆ ದೂಡಿ ಹೊರಗೆ ಎಳೆದುಕೊಂಡು ಬಂದು ಪುನಃ ಕಾಲಿನಿಂದ ತುಳಿದು ಅಂಗಡಿಗೆ ಹಾಲನ್ನು ಕಾಲಿ ಮಾಡಲಿಕ್ಕೆ ಬಂದ ಸವಿ ಎಂಬುವವರಿಗೆ ಬೈದು ಹಾಗೂ ಹಾಲು ತೆಗೆದುಕೊಂಡು ಹೋಗಲು ಬಂದು ಶೇಖರ್ ಪೂಜಾರಿಯವರಿಗೂ ಹಾಲು ತುಂಬಿಸಲು ಬಿಡದೇ ತೊಂದರೆ ನೀಡಿದ್ದು ಕೊಲೆ ಬೆದರಿಕೆಯನ್ನು ಹಾಕಿ ಪಿರ್ಯಾದಿದಾರ ಹೆಂಡತಿಗೆ ಬೆಳಿಗ್ಗೆ ಆರೋಪಿಯು ಬೈದು ಹೊಡೆಯಲು ಬಂದಿದ್ದು ಪಿರ್ಯಾದಿದಾರರಿಗೆ ಆದ ನೋವಿನ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/2015 ಕಲಂ: 323, 448, 504, 506 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
ಕಳವು ಪ್ರಕರಣ 
  • ಉಡುಪಿ: ದಿನಾಂಕ 27.012.015 ರಂದು ಸಂಜೆ 18.30 ಗಂಟೆಯಿಂದ 31.01.2015 ರ ಬೆಳಿಗ್ಗೆ 10.00 ಗಂಟೆಯ ಮದ್ಯ ಅವದಿಯಲ್ಲಿ ಪಿರ್ಯಾದಿ ಶ್ವೇತಾ ಪೈ ಇವರ ತಾಯಿಯ ಮನೆಯಾದ ಉಡುಪಿ ತಾಲೂಕು ಮೂಡುನಿಡಂಬೂರು ಗ್ರಾಮದ ಎ.ಜೆ ಅಲ್ಸ್ ರಸ್ತೆಯಲ್ಲಿಉರವ  ಶ್ರೀ ವಾಸ ಕುಲ್ಯಾಡಿ ಕಂಪೌಂಡ್ ಎಂಬಲ್ಲಿ ಇರುವ ಮನೆಯ ಎಡ ಬದಿ ಬಾಗಿಲನ್ನು ಯಾರೋ ಕಳ್ಳರು ಒಡೆದು ಮನೆಯ ಒಳಗಡೆ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2015 ಕಲಂ 454,457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕಾಪು: ದಿನಾಂಕ  30-01-2015   ರಂದು  ರಾತ್ರಿ 10-00 ಗಂಟೆಗೆ ಪಿರ್ಯಾದಿ ಯೋಗೀಶ್ ಕೋಟ್ಯಾನ್‌ ಇವರು  ಉಡುಪಿ ತಾಲೂಕು  ಕಾಪು ಪಡು ಗ್ರಾಮದ ಕಾಪು ಪೊಯ್ಯ ಫೊಡಿಕಲ್  ಗರಡಿ  ಬಳಿ   ತನ್ನ ಅಪಾಚಿ ಮೋಟಾರ್   ಸೈಕಲ್  ನಂಬ್ರ  ಕೆಎ-20-ವಿ-5149 ನೇ ದನ್ನು   ನಿಲ್ಲಿಸಿ ಬೀಗ ಹಾಕಿ  ಮೀನುಗಾರಿಕೆ   ಕೆಲಸದ ಬಗ್ಗೆ  ಹೋಗಿದ್ದು ,  ದಿನಾಂಕ   31-01-2015  ರಂದು ಬೆಳಿಗ್ಗೆ 7-00 ಗಂಟೆಗೆ  ಬಂದು  ನೋಡುವಾಗ ಮೋಟಾರ್  ಸೈಕಲ್ ಸ್ಥಳದಲ್ಲಿ  ಇಲ್ಲದೆ  ಇದ್ದು, ಸದ್ರಿಮೋಟಾರ್  ಸೈಕಲನ್ನು ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2015 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: