Friday, February 27, 2015

Daily Crime Reports As on 27/02/2015 at 19:30 Hrs

ಕಳವು ಪ್ರಕರಣ
  • ಶಂಕರನಾರಾಯಣ: ಪಿರ್ಯಾದಿದಾರರಾದ ಜಯರಾಮ್‌ ಹೆಬ್ಬಾರ (68) ತಂದೆ: ಏ ಅನಂತಯ್ಯ ಹೆಬ್ಬಾರ ವಾಸ: ಅಂಸಾಡಿ, 74 ಉಳ್ಳೂರು ಗ್ರಾಮ  ಕುಂದಾಪುರ ತಾಲೂಕು ಎಂಬವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಅಡಿಕೆಯ ಬಾಬ್ತು 4  ಕ್ವಿಂಟಲ್‌ ಸಿಪ್ಪೆ ಇರುವ ಅಡಿಕೆಯನ್ನು ಯಾರೋ ಕಳ್ಳರು ದಿನಾಂಕ 26-02-2015 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 27-02-2015 ರಂದು ಬೆಳಿಗ್ಗೆ 5:00 ಗಂಟೆ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಅಡಿಕೆಯ ಅಂದಾಜು ಮೌಲ್ಯ ಸುಮಾರು 40,000/- ರೂಪಾಯಿ ಆಗಿರುತ್ತದೆ ಎಂಬುದಾಗಿ ಜಯರಾಮ್‌ ಹೆಬ್ಬಾರ್ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2015 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ
  • ಕುಂದಾಪುರ: ದಿನಾಂಕ 27/02/2015 ರಂದು ಸಮಯ ಬೆಳಿಗ್ಗೆ 08:15 ಗಂಟೆಗೆ  ಕುಂದಾಪುರ  ತಾಲೂಕು  ಬಸ್ರೂರು ಗ್ರಾಮದ ಪಾನಕದ ಕಟ್ಟೆ ಬಸ್ ನಿಲ್ದಾಣದ ಬಳಿ ರಾಜ್ಯ ಹೆದ್ದಾರಿ 52 ರಸ್ತೆಯಲ್ಲಿ ಆಪಾದಿತ ಸತೀಶ ಎಂಬವರು KA-20 C-6866 ನೇ ಬಸ್‌  ನ್ನು ಸಿದ್ದಾಪುರ  ಕಡೆಯಿಂದ  ಕುಂದಾಪುರ  ಕಡೆಗೆ  ಚಲಾಯಿಸಿಕೊಂಡು  ಬಂದು, ಬಸ್ಸಿನ ನಿರ್ವಾಹಕ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಲು ಸೂಚನೆ ನೀಡಿದಂತೆ ಬಸ್‌ನ್ನು ಚಾಲಕ ನಿಲ್ಲಿಸಿದ್ದು, ಫಿರ್ಯಾದಿದಾರರಾದ ರಂಜಿತ್ (24) ತಂದೆ ನಾಗರಾಜ ಮೊಗವೀರ ವಾಸ: ದೇವಕಿ ನಿಲಯ, ದೊಡ್ಡಮನೆ ಬೆಟ್ಟು ಬಳ್ಕೂರು ಗ್ರಾಮ, ಕುಂದಾಪುರ ತಾಲೂಕು ರವರ ತಂಗಿ ಲಾವಣ್ಯ (16) ರವರು ಬಸ್ಸಿನ ಮುಂದಿನ  ಡೋರ್ ನಿಂದ ಇಳಿಯುತ್ತಿರುವಾಗ, ಬಸ್ಸಿನ ನಿರ್ವಾಹಕ ಮುಂದೆ ಚಲಿಸಲು ಸೂಚನೆ ನೀಡುವ ಮೊದಲು ಬಸ್ಸಿನ  ಚಾಲಕ ಸತೀಶ ರವರು ಒಮ್ಮಲೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಲಾವಣ್ಯರವರು ಬಸ್ಸಿನ  ಡೋರ್‌ ನಿಂದ  ರಸ್ತೆಯಲ್ಲಿ  ಬಿದ್ದು ತಲೆಯ ಹಿಂಬದಿಗೆ ಗಾಯವಾಗಿ ಕುಂದಾಪುರ  ವಿನಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದು, ಹೆಚ್ಚಿನ  ಚಿಕಿತ್ಸೆ  ಬಗ್ಗೆ  ಉಡುಪಿ  ಆದರ್ಶ  ಆಸ್ಪತ್ರೆಗೆ  ದಾಖಲಿಸಿರುವುದಾಗಿದೆ ಎಂಬುದಾಗಿ   ರಂಜಿತ್ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2015 ಕಲಂ 279, 337 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ
  • ಮಲ್ಪೆ: ಪಿರ್ಯಾದಿದಾರರಾದ ಕೌಶಿಕ್ ಪ್ರಾಯ: 20 ವರ್ಷ ತಂದೆ: ಜಯ ಕೋಟ್ಯಾನ್ ವಾಸ: ಕೊಳ, ಮಲ್ಪೆ ಕೊಡವೂರು ಗ್ರಾಮ ಉಡುಪಿ ತಾಲೂಕು ರವರು ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 27/02/2015 ರಂದು ಪಿರ್ಯಾದಿದಾರರು ಮಲ್ಪೆ ಬಂದರಿನಲ್ಲಿರುವಾಗ ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಕೊಡವೂರು ಗ್ರಾಮದ ಮಲ್ಪೆ ಬಂದರಿನ 2ನೇ ಧಕ್ಕೆಯಲ್ಲಿ ಸಮುದ್ರದಲ್ಲಿ ಒಂದು ಅಪರಿಚಿತ ಗಂಡಸಿನ ಮೃತ ದೇಹವು ಸಮುದ್ರದ ನೀರಿನಲ್ಲಿ ತೇಲುತ್ತಿದ್ದು, ಅಗ್ನಿಶಾಮಕ ದಳ ಮತ್ತು ಪೊಲೀಸರು ಶವವನ್ನು ಎತ್ತಿ ಮೇಲಕ್ಕೆ ಹಾಕಿರುವುದಾಗಿದೆ. ಮೃತ ಅಪರಿಚಿತ ವ್ಯಕ್ತಿಯು ಸುಮಾರು 35-40 ವರ್ಷ ಪ್ರಾಯಸ್ಥನಾಗಿದ್ದು ದಿನಾಂಕ 26/02/2015 ರಂದು ರಾತ್ರಿ ಅಥವಾ ಬೆಳಿಗ್ಗೆ ಮೀನು ಹಿಡಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದಾಗಿದೆ. ಮೃತ ವ್ಯಕ್ತಿಯ ಚಹರೆ: ಸಾಮಾನ್ಯ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಗೆರೆಗಳಿರುವ ಟಿ ಶರ್ಟು ಹಾಗೂ ಕಪ್ಪು ಅರ್ಧ ಪ್ಯಾಂಟ್ ಧರಿಸಿರುತ್ತಾನೆಮುಖದಲ್ಲಿ ಗಡ್ಡ ಇರುತ್ತದೆ. 2 ಇಂಚು ಉದ್ದದ ಕಪ್ಪು ತಲೆ ಕೂದಲನ್ನು ಹೊಂದಿರುತ್ತಾನೆ ಆತನ ವಾರೀಸುದಾರರು ಯಾರೆಂದು ತಿಳಿದು ಬಂದಿರುವುದಿಲ್ಲ ಎಂಬುದಾಗಿ ಕೌಶಿಕ್ ರವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 09/2015  ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: