Saturday, January 31, 2015

Daily Crimes Reported as On 31/01/2015 at 07:00 Hrs

ಅಪಘಾತ ಪ್ರಕರಣ
  • ಬೈಂದೂರು: ದಿನಾಂಕ 30-01-2015 ರಂದು ರಾತ್ರಿ 1-30 ಗಂಟೆಗೆ ಫಿರ್ಯಾದಿ ಸಂತೋಷ್ ಪೂಜಾರಿ ಇವರು ಪ್ರಕಾಶ ದೇವಾಡಿಗ ಎಂಬುವವರು ಸವಾರಿ ಮಾಡಿಕೊಂಡಿದ್ದ ಸೈಕಲ್ ನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಕಂಬದಕೋಣೆಯಿಂದ ಉಪ್ಪುಂದ ಕಡೆಗೆ ರಾ.ಹೆ 66 ನೇ ಡಾಮಾರು ರಸ್ತೆಯ ಎಡಬದಿಯಲ್ಲಿ ಹೊರಟು ಕೆರ್ಗಾಲ್ ಗ್ರಾಮದ ವೆಂಕಟರಮಣ ದೇವಸ್ಥಾನದ ಸಮೀಪ ತಲುಪುವಾಗ ಫಿರ್ಯಾದಿದಾರರ ಹಿಂಬದಿಯಿಂದ ಕೆಎ20ಎಕ್ಸ್ 8866 ನೇ ಮೋಟಾರ್ ಸೈಕಲ್ ನ ಸವಾರ ಗೋಪಾಲ ಪೂಜಾರಿ ಎಂಬುವವರು, ಸದ್ರಿ ಮೋಟಾರ್ ಸೈಕಲ್ ನಲ್ಲಿ ಶಂಕರ ಕುಲಾಲ್ ಎಂಬುವವರನ್ನು ಹಿಂಬದಿ ಸವಾರನನ್ನು ಕುಳ್ಳಿರಿಸಿಕೊಂಡು ಮೋಟಾರ್ ಸೈಕಲ್ ಅನ್ನು ಉಪ್ಪುಂದ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಹಿಂಬದಿ ಸವಾರಿ ಮಾಡಿಕೊಂಡಿದ್ದ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ನಲ್ಲಿದ್ದವರು ಹಾಗೂ ಮೋಟಾರ್ ಸೈಕಲ್ ನಲ್ಲಿದ್ದವರು ಡಾಮಾರು ರಸ್ತೆಗೆ ಬಿದ್ದು ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರರಾಗಿದ್ದ ಶಂಕರ್ ಕುಲಾಲ್ ರವರ ತಲೆಗೆ ತೀವ್ರ ರೀತಿಯ ಪೆಟ್ಟಾಗಿದ್ದು ಹಾಗೂ ಫಿರ್ಯಾದಿದಾರರ ಎಡಕಾಲು ಹಾಗೂ ಎಡಕೈಗೆ ಪೆಟ್ಟಾಗಿದ್ದು ಪ್ರಕಾಶ್ ದೇವಾಡಿಗರವರ ಕೈಕಾಲುಗಳಿಗೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/15 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಹಿರಿಯಡ್ಕ: ದಿನಾಂಕ 30/01/15 ರಂದು ರಾತ್ರಿ  08-30  ಗಂಟೆಗೆ ಫಿರ್ಯಾದಿ ಸನ್ನಿತ್‌ಇವರು ತನ್ನ ತಮ್ಮ ಸುಪ್ರೀತ್‌ ರವರು ಚಲಾಯಿಸುತ್ತಿದ್ದ ಕೆಎ 20 ಝಡ್‌ 9614  ನೇ ಮಾರುತಿ ರಿಟ್ಜ್‌ ಕಾರಿನಲ್ಲಿ ಕುಳಿತು ಹಿರಿಯಡ್ಕ ದಿಂದ ಮಣಿಪಾಲದ ಕಡೆಗೆ ಹೋಗುವಾಗ,  ಅಂಜಾರು ಗ್ರಾಮದ ಓಂತಿಬೆಟ್ಟು ಜಂಕ್ಷನ್‌ ಎಂಬಲ್ಲಿ,  ಕಾರನ್ನು ಅದರ  ಚಾಲಕರು  ಅತಿ ವೇಗ ಹಾಗೂ ದುಡುಕುತನದಿಂದ ಚಲಾಯಿಸುತ್ತಿದ್ದ ವೇಳೆ  ಎದುರು ಬದಿಯಿಂದ ಬರುತ್ತಿದ್ದ ಯಾವುದೋ ವಾಹನವನ್ನು ಢಿಕ್ಕಿಯಾಗುವುದನ್ನು ತಪ್ಪಿಸುವ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಸಿಮೆಂಟ್‌ ಫಲಕಕ್ಕೆ ಢಿಕ್ಕಿಯಾಗಿ ತದ ನಂತರ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿ ಕಾರು ಜಖಂ ಗೊಂಡಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 07/15 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ರತೀಶ್ ಶೆಟ್ಟಿ ಇವರು ದಿನಾಂಕ 30/01/2015 ರಂದು ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರುಗಡೆ ತಮ್ಮ ಕಾರು ನಿಲ್ದಾಣದಲ್ಲಿ ಮಿತ್ರರೊಂದಿಗೆ ನಿಂತುಕೊಂಡಿರುವಾಗ ಸಮಯ ಸುಮಾರು ರಾತ್ರಿ 09:45 ಗಂಟೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬಸ್ ನಂಬ್ರ ಕೆಎ-19 ಡಿ-2699 ನೇದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ರಸ್ತೆಯ ಬದಿಯಲ್ಲಿ ನಿಂತಿದ್ದ ಒಬ್ಬ ಅಪರಿಚಿತ ವ್ಯಕ್ತಿಗೆ ಢಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿ ರಸ್ತೆಗೆ ಬಿದ್ದಿದ್ದು ಪಿರ್ಯಾದುದಾರರು ಮತ್ತು ಇತರರು ಮೇಲಕ್ಕೆತ್ತಿ ಉಪಚರಿಸಿ ಒಂದು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವುದಾಗಿದೆ.ಸದ್ರಿ ಅಪಘಾತಕ್ಕೆ ಬಸ್ ನಂಬ್ರ ಕೆಎ-19 ಡಿ-2699 ನೇದನರ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ದಿನಾಂಕ 30/01/2015 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿ ಶ್ರೀಮತಿ ರೋಹಿಣಿ ಶೆಟ್ಟಿ ಇವರ ಮನೆಯ ಹತ್ತಿರದ ರವಿಕುಮಾರ್ ಎಂಬವರು ಬಂದು ನಿಮ್ಮ ಗದ್ದೆಯಲ್ಲಿರುವ ಬಾವಿಯಲ್ಲಿ ಕೊಳೆತ ವಾಸನೆ ಬರುತ್ತಿದ್ದು ತಾನು ಬಾವಿಯಲ್ಲಿ ಇಣುಕಿ ನೋಡಿದಾಗ ಗಂಡಸಿನ ಕೊಳೆತ ಮೃತ ದೇಹವು ಇರುವುದಾಗಿ ತಿಳಿಸಿದ್ದು , ಈ ವಿಚಾರವನ್ನು ಪಿರ್ಯಾದಿದಾರರು ವಠಾರದಲ್ಲಿ ಎಲ್ಲರಿಗೂ ಹೇಳಿ ನೋಡಿದಾಗ ಬಾವಿಯಲ್ಲಿ ಸುಮಾರು 35-45 ವರ್ಷ ಪ್ರಾಯದ ಗಂಡಸಿನ ಮೃತ ದೇಹವು ಮತ್ತು ಮುಖವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಇದ್ದು ಪರಿಚಯವಾಗಿರುವುದಿಲ್ಲ .ಅಪರಿಚಿತ ವ್ಯಕ್ತಿಯು 2-3 ದಿನಗಳ ಹಿಂದೆ ಬಾವಿಯ ನೀರಿಗೆ ಬಿದ್ದು ಮೃತ ಪಟ್ಟಿರಬಹುದಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 04/15 ಕಲಂ 174(ಸಿ) ಸಿ ಆರ್ ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: