Friday, January 30, 2015

Daily Crimes Reported as On 30/01/2015 at 17:00 Hrs


ಅಪಘಾತ ಪ್ರಕರಣಗಳು
  • ಕಾರ್ಕಳ ನಗರ:ದಿನಾಂಕ:30/01/2015 ರಂದು ಪೂರ್ವಾಹ್ನ 10:30 ಗಂಟೆಗೆ ಕಾರ್ಕಳ ತಾಲೂಕಿನ ಕಸಬ ಗ್ರಾಮದ ಸಾಲ್ಮರದ ಸುನೀತಾ ಮೋಟಾರ್ಸ್ ಎಂಬಲ್ಲಿ ಪಿರ್ಯಾದಿದಾರರಾದ ಮೊಹಮ್ಮದ್ ಷಫಿ, (33) ತಂದೆ:ಅಬ್ದುಲ್ ಖಾದರ್, ವಾಸ:ಪರನೀರು ಬಂಗ್ಲೆಗುಡ್ಡೆ, ಕಾರ್ಕಳರವರ ತಂದೆ ಅಬ್ದುಲ್ ಖಾದರ್ ಎಂಬವರು ಮಂಜುನಾಥ ಪೈ ಬೀಡಿ ಕಾರ್ಖಾನೆಗೆ ಬೀಡಿ ಕೊಟ್ಟು ಕಾರ್ಕಳ-ಬಂಡಿಮಠ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸೈಕಲಿನಲ್ಲಿ ಮನೆ ಕಡೆಗೆ ವಾಪಾಸು ಬರುತ್ತಿರುವಾಗ, ಡಾಮಾರು ರಸ್ತೆ ಬದಿಯಲ್ಲಿದ್ದ KA.20 Z.2767 ನಂಬ್ರದ ಕಾರಿನವರು ಬಾಗಿಲು ತೆರೆದಾಗ ಸೈಕಲ್ ಪೆಡಲ್ ಕಾರಿನ ಬಾಗಿಲಿಗೆ ತಾಗಿ ರಸ್ತೆಗೆ ಬಿದ್ದ ಸಮಯ ರಿಕ್ಷಾ ನಂಬ್ರ KA.20.C.6694 ನೇದರ ಚಾಲಕನು ರಿಕ್ಷಾವನ್ನು ಅತಿವೇಗ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಸ್ತೆಯಲ್ಲಿ ಬಿದ್ದಿದ್ದ,  ಅಬ್ದುಲ್ ಖಾದರ್‌‌ರವರ ತಲೆಗೆ ತಾಗಿ ತೀವ್ರ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ಪ್ರತಿಭಾ ಆಸ್ಪತ್ರೆಗೆ ಕೊಂಡೊಯ್ದು, ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಪರಾಹ್ನ 2:30 ಗಂಟೆಗೆ ಮೃತಪಟ್ಟಿರುತ್ತಾರೆ.ಈ ಬಗ್ಗೆ ಮೊಹಮ್ಮದ್ ಷಫಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಪರಾಧ ಕ್ರಮಾಂಕ 11/2015 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ ಗ್ರಾಮಾಂತರ:ಪಿರ್ಯಾದಿದಾರರಾದ ಇಮ್ರಾನ್ (21) ತಂದೆ:ಬಸೀರ್ ಅಹಮ್ಮದ್ ವಾಸ:ಕಾಸಿಂ ಮಂಜಲ್, ಕುಂಟಲ್ಪಾಡಿ, ಸಾಣೂರು ಗ್ರಾಮ, ಕಾರ್ಕಳ ತಾಲೂಕುರವರು ದಿನಾಂಕ:29/01/2015 ರಂದು ತನ್ನ ಆಟೋ ರಿಕ್ಷಾ KA 19 C 5381  ನೇ ಬಜಾಜ್ ಆಟೋರಿಕ್ಷಾದಲ್ಲಿ ಸಂಬಂಧಿಕರಾದ ಪರಪಲೆಯ ಮಾವ ರಫೀಕ್, ಅತ್ತೆ ಫೌಜಿಯಾರವರನ್ನು ರಾತ್ರಿ 9 ಗಂಟೆಗೆ ಅತ್ತೂರು ಜಾತ್ರೆಗೆ ಬಾಡಿಗೆಗೆ ಕರೆದುಕೊಂಡು ಹೊರಟು ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ದೂಪದಕಟ್ಟೆ ಅತ್ತೂರು ಚರ್ಚ್ ನ ದ್ವಾರದ ಬಳಿ ಬಲಗಡೆಗೆ ತಿರುಗಲು ಮೋರಿ ಬಳಿ ಸಿಗ್ನಲ್ ನೀಡಿ ಬಲಕ್ಕೆ ತಿರುಗಿ ರಸ್ತೆಯ ಅಂಚಿಗೆ ಚರ್ಚ್ ದ್ವಾರದ ಬಳಿ ಬರುತ್ತಲೇ ನಿಟ್ಟೆ ಕಡೆಯಿಂದ ರಾಜ್ಯ ಹೆದ್ದಾರಿಯಲ್ಲಿ KA 19 B 8561ನೇ ಆಟೋರಿಕ್ಷಾ ಚಾಲಕ ತನ್ನ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇಮ್ರಾನ್‌ರವರ ಆಟೋರಿಕ್ಷಾಕ್ಕೆ ಎಡಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಚರ್ಚ್ ದ್ವಾರದ ಬಳಿ ಮೋರಿಯ  ಮೇಲೆ ಕುಳಿತಿದ್ದ ಜನಗಳ ಪೈಕಿ ಶಾರದ (55) ರವರ  ಎರಡು ಮೊಣ ಕಾಲುಗಳಿಗೆ ಜಖಂ ಆಗಿದ್ದು, ಇಮ್ರಾನ್‌ರವರ ಆಟೋರಿಕ್ಷಾದಲ್ಲಿದ್ದ ಅತ್ತೆ ಫೌಜೀಯಾರವರಿಗೆ ಕಾಲು ಹಾಗೂ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಇಮ್ರಾನ್‌ರವರ ಎಡಕಾಲಿಗೆ ಗುದ್ದಿದ ಗಾಯವಾಗಿದ್ದು ಎರಡೂ ಆಟೋರಿಕ್ಷಾಗಳು ಜಖಂಗೊಂಡಿದ್ದು, ಗಾಯಗೊಂಡವರನ್ನು ಅಲ್ಲಿ ಸೇರಿದ್ದ ಜನರು ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕಾರ್ಕಳ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿದೆ. ಈ ಘಟನೆಗೆ KA 19 B 8561ನೇ ಬಜಾಜ್ ಆಟೋರಿಕ್ಷಾದ ಚಾಲಕನ ಅತೀವೇಗ ಅಜಾಗರೂಕತೆಯೆ ಕಾರಣವಾಗಿರುತ್ತದೆ.ಈ ಬಗ್ಗೆ ಇಮ್ರಾನ್‌ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 14/2015 ಕಲಂ:279,337 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇತರ ಪ್ರಕರಣ
  • ಪಡುಬಿದ್ರಿ:ಪಿರ್ಯಾದಿದಾರರಾದ ರಾಧಕೃಷ್ಣ ನಾಯಕ್ (52) ತಂದೆ:ದಿವಂಗತ ನಾರಾಯಣ ನಾಯ್ಕ್, ವಾಸ:ನಾಯಕ್    ನಿವಾಸ್, ಪಂಪ್  ಹೌಸ್ ಬಳಿ, ಪಡುಬಿದ್ರಿ ,ಉಡುಪಿ ತಾಲೂಕು ಮತ್ತು ಜಿಲ್ಲೆರವರ ತಮ್ಮ ಜಯಂತ್ ನಾಯಕ್ ಎಂಬವರು ಡಿಫೆನ್ಸ್ ಸೆಕ್ಯೂರಿಟಿ ಕೋರ್‌ನಲ್ಲಿ ಕೆಲಸ ಮಾಡಿಕೊಂಡಿದ್ದು ತಾಯಿಯ ಕ್ರಿಯಾ ಕೆಲಸಕ್ಕಾಗಿ ಚಂಡೀಗಢದಿಂದ ದಿನಾಂಕ:೦9/1/2015 ರಂದು ಪಡುಬಿದ್ರಿಗೆ ರಾಧಕೃಷ್ಣ ನಾಯಕ್‌ರವರ ಮನೆಗೆ ಬಂದಿದ್ದು, ಸಂಜೆ 4:30 ಗಂಟೆಗೆ ಜಯಂತ್ ನಾಯಕ್‌ರವರ ಮೊಬೈಲ್‌ಗೆ ಅನಾಮಧೇಯ ಮೊಬೈಲ್‌ ನಂಬ್ರದಿಂದ ಕರೆ ಬಂದು ಬೆಂಗಳೂರು ಎಸ್‌ಬಿಐ ಎಟಿಎಂ ನಿಂದ ಮಾತನಾಡುತ್ತಿದ್ದಾನೆಂದು ಹೇಳಿ ಜಯಂತ್ ನಾಯಕ್‌ರವರ ಎಟಿಎಂ ನಿಂದ 16 ಡಿಜಿಟ್‌‌ ನಂಬ್ರ ಕೇಳಿ ಎಟಿಎಂ ರಿನೀವಲ್ ಮಾಡಿಸಬೇಕು ಎಂದು ಹೇಳಿ ಎಲ್ಲಾ ವಿವರಗಳನ್ನು ಪಡೆದು ಜಯಂತ್ ನಾಯಕ್‌ರವರ ಅಕೌಂಟ್‌‌ನಿಂದ (ಎಸ್‌ಬಿಐ ಪಣಂಬೂರು ಬ್ರಾಂಚ್) ರೂಪಾಯಿ 42,000/- ವನ್ನು ಎ.ಟಿ.ಎಂ ಮುಖೇನ ಹಣ ಡ್ರಾ ಮಾಡಿ ರಾಧಕೃಷ್ಣ ನಾಯಕ್‌ರವರ ತಮ್ಮ ಜಯಂತ್ ನಾಯಕ್‌ರಿಗೆ ನಷ್ಟವುಂಟು ಮಾಡಿರುತ್ತಾರೆ.ಈ ಬಗ್ಗೆ ರಾಧಕೃಷ್ಣ ನಾಯಕ್‌ರವರು ನೀಡಿದ ದೂರಿನಂತೆ ಪಡುಬಿದ್ರಿ ಠಾಣಾ ಅಪರಾಧ ಕ್ರಮಾಂಕ 23/15 ಕಲಂ:66(C), 66(D) INFORMATION TECHNOLOGY ACT 2008 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

No comments: