Friday, January 30, 2015

Daily Crimes Reported as On 30/01/2015 at 07:00 Hrs

ಅಪಘಾತ ಪ್ರಕರಣ
  • ಕಾರ್ಕಳ ಗ್ರಾಮಾಂತರ: ದಿನಾಂಕ: 28/01/2015 ರಂದು ರಾತ್ರಿ ಸುಮಾರು 9 ಗಂಟೆಗೆ ಇಬ್ರಾಜ್ ಪ್ರಾಯ:17 ವರ್ಷ ತಂದೆ:ಹಾಜಿ ಅಬ್ಬುಲ್ ರಹೀಮಾನ್ ವಾಸ: ರುಕ್ಕಿಜಾ ಮಂಜಲ್ ಬೊಳ್ಪಾಡಿ ಮಸೀದಿ ಬಳಿ ಕಾಬೆಟ್ಟು ಕಾರ್ಕಳ ಮತ್ತು ಅವರ ಸ್ನೇಹಿತ ಮಹಮ್ಮದ ಪಾಯಜ್ ಕೆ ಎ 20.ಇ ಬಿ,0483 ಪಲ್ಸ್‌ರ್ ಬೈಕ್ ನಲ್ಲಿ  ಅತ್ತೂರು  ಜಾತ್ರೆಗೆ ಹೋಗಿದ್ದು ನಂತರ ಜಾತ್ರೆ ಮುಗಿಸಿ ಮನೆಗೆ ತೆರಳುವರೆ ನಿಟ್ಟೆ ಗ್ರಾಮದ ಗುಂಡ್ಯಡ್ಕ ಜಂಕ್ಷನ್ ಬಳಿಯ ಪಳ್ಳಿ ಕಡೆಗೆ ಹೋಗುವ ಸುಮಾರು 200 ದೂರದಲ್ಲಿ ಇಳಿಜಾರು ರಸ್ತೆಯಲ್ಲಿ  ಬೈಕ್ ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಗೆ ವಾಲಿ ಬೈಕ್ ಬಿದ್ದು ಇದರಿಂದ ಸವಾರ ಮಹಮ್ಮದ್ ಫಯಾಜ್ ಎಂಬುವರಿಗೆ ಗಾಯವಾಗಿರುತ್ತದೆ, ಬೈಕನ್ ಸಹ ಸವಾರರಾದ ಇಬ್ರಾಜ್ ರಿಗೆ ಎಡಕೈ ರಿಸ್ಟ ಬಳಿ ಒಳ ಪೆಟ್ಟು ಆಗಿರುತ್ತದೆ ಮತ್ತು ಎಡ ಮುಖಕ್ಕೆ ಬಲ ಕೈಗೆ ರಕ್ತ ಗಾಯ ವಾಗಿರುತ್ತದೆ. ನಂತರ ಚಿಕಿತ್ಸೆಗೆ ಕಾರ್ಕಳ ಸಿಟಿ ನರ್ಸಿಂಗ್ ಹೋಮ್‌ಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಕೆಎ: 20 ಇಬಿ: 0483 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2015 ಕಲಂ: 279 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
  • ಕೋಟ  :  ಪಿರ್ಯಾದಿ ಶೇಖರ ಇವರು ದಿನಾಂಕ:28/01/2015 ರಂದು ಬೆಳಿಗ್ಗೆ 10:00 ಗಂಟೆಗೆ ತೆಕ್ಕಟ್ಟೆ ಗಣೇಶ ವೈನ್ಸ್ ಹಿಂದುಗಡೆ ನಿಂತುಕೊಂಡಿರುವ ಸಮಯ ಪಿರ್ಯಾಧಿದಾರರ ಪರಿಚಯದ ಹೊಳೆಕಟ್ಟು  ನಿವಾಸಿ ನಾರಾಯಣ ಎಂಬವರು ಪಿರ್ಯಾದಿದಾರರ ಬಳಿ ಬಂದು 20 ರೂಪಾಯಿ ಹಣವನ್ನು ಕೇಳಿದ್ದು  ಪಿರ್ಯಾಧಿದಾರರು ನನ್ನಲ್ಲಿ ಹಣವಿಲ್ಲವೆಂದು ಹೇಳಿದಾಗ ಆರೋಪಿಯು ಅಲ್ಲಿಯೇ ಇದ್ದ ಖಾಲಿ ಬಿಯರ್ ಬಾಟಲಿಯಿಂದ ಪಿರ್ಯಾಧಿದಾರರ ತಲೆಯ ಹಿಂಭಾಗಕ್ಕೆ, ಬಲ ಕಣ್ಣಿನ ಕೆಳಗೆ, ಬಲ ಕೈ ಮೊಣಗಂಟಿಗೆ ಹೊಡೆದೆ ಪರಿಣಾಮ  ರಕ್ತಗಾಯಗೊಂಡು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 19/2015 ಕಲಂ: 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: