Thursday, January 29, 2015

Daily Crimes Reported as On 29/01/2015 at 17:00 Hrs

ಅಪಘಾತ ಪ್ರಕರಣ
  • ಗಂಗೊಳ್ಳಿ: ದಿನಾಂಕ 29/01/2015 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿ ನಾಗೇಶ ದೇವಾಡಿಗ ಎಂಬವರು  ತ್ರಾಸಿ ಮೀನು ಮಾರ್ಕೇಟ್  ಹತ್ತಿರ ನಿಂತಿರುವಾಗ ತ್ರಾಸಿ ಕಡೆಗೆ ಗಂಗೊಳ್ಳಿ ತ್ರಾಸಿ ಮುಖ್ಯ ರಸ್ತೆಯ ಎಡ ಭಾಗದಿಂದ ಅವರ ಸಂಬಂಧಿ ಶಂಕರ ದೇವಾಡಿಗ ನಡೆದುಕೊಂಡು ಬರುತ್ತಿರುವಾಗ KA 20 D 3596  ಟಾಟಾ ಜಿಪ್ಸ್ ವೇಗವಾಗಿ ಬರುತ್ತಿದ್ದು ಅದರ ಹಿಂಬದಿಯ ಬಾಡಿಯ ಗಾರ್ಡ ಪೈಪು ಬಲಗಡೆಯಿಂದ ಜಂಪಿಗೆ ಎದ್ದು ತಿರುಗಿ ರಸ್ತೆಯ ಎಡಗಡೆ ಬದಿಯಲ್ಲಿ ಹೋಗುತ್ತಿದ್ದ ಶಂಕರ ದೇವಾಡಿಗರವರ ತಲೆಯ ಹಿಂಭಾಗಕ್ಕೆ ಬಡಿದ ಪರಿಣಾಮ ತಲೆಗೆ ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಚಿನ್ಮಯಿ  ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: