Thursday, January 29, 2015

Daily Crimes Reported as On 29/01/2015 at 07:00 Hrs

ಅಪಘಾತ ಪ್ರಕರಣ
  • ಉಡುಪಿ: ಪಿರ್ಯಾದಿ ರವೀಂದ್ರ ಶೆಟ್ಟಿ ಇವರು ರಾಜಾಂಗಣ ಪಾರ್ಕಿಂಗ್ ಸ್ಥಳದಲ್ಲಿ ವಾಚ್‌ಮೆನ್ ಕೆಲಸ ಮಾಡಿ ಕೊಂಡಿದ್ದು ದಿನಾಂಕ 28.01.2015 ರಂದು 10.45 ಗಂಟೆ ಸಮಯಕ್ಕೆ ರಾಜಾಂಗಣ ಪಾರ್ಕಿಂಗ್ ಸ್ಥಳದಲ್ಲಿ ವಾಚ್‌ಮೆನ್  ಕೆಲಸ ಮಾಡುತ್ತಾ ಯಾತ್ರಿ ನಿವಾಸದ ಮುಂಭಾಗದ ದಿಂದ ರಸ್ತೆ ದಾಟುವರೇ ರಸ್ತೆಯ ತೀರ ಎಡ ಬದಿಯಲ್ಲಿ ನಿಂತು ಕೊಂಡಿರುವಾಗ ಕಲ್ಸಂಕ ಕಡೆಯಿಂದ ಕೆಎ 20. ಬಿ. 312 ರಿಕ್ಷಾ ಟೆಂಪೋ ಚಾಲಕ ತನ್ನ ಬಾಬ್ತು  ರಿಕ್ಷಾ ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ರಕ್ತ ಗಾಯ ಮತ್ತು ಬಲ ಕಾಲಿನ ಪಾದದ ಮಣಿಗಂಟಿಗೆ ಒಳ ಜಖಂಗೊಂಡು ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಬೈಂದೂರು: ದಿನಾಂಕ 28-01-2015 ರಂದು ಸಂಜೆ 7-30 ಗಂಟೆ ಸಮಯಕ್ಕೆ  ಕುಂದಾಪುರ ತಾಲೂಕು ನಾವುಂದ ಗ್ರಾಮದ ಮಸ್ಕಿ ಚಾತನಕೆರೆ ಎಂಬಲ್ಲಿ ರಾ.ಹೆ 66 ನೇದರಲ್ಲಿ ಕೆಎ 51 ಪಿ 4702 ನೇ ಕ್ರೇನ್ ಅನ್ನು ಅದರ ಚಾಲಕನು ನಾವುಂದ ಕಡೆಯಿಂದ ಮರವಂತೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತನ್ನ ಎದುರಿನಿಂದ ರಾ.ಹೆ 66 ನೇದರ ತೀರಾ ಎಡಬದಿಯಲ್ಲಿ ಹಾವೇರಿಯ ಚಂದ್ರ ಎಂಬುವವರು ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಚಂದ್ರರವರು ಸೈಕಲ್‌ ಸಮೇತ ಡಾಮಾರು ರಸ್ತೆಗೆ ಬಿದ್ದು, ಆತನ ತಲೆಗೆ ತೀವ್ರ ರೀತಿಯಲ್ಲಿ ಗಾಯವಾಗಿದ್ದು, ಚಂದ್ರರವರನ್ನು ಚಿಕಿತ್ಸೆಯ ಬಗ್ಗೆ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2015 ಕಲಂ: 279, 304(ಎ) ಐಪಿಸಿ ಮತ್ತು 134 (ಎ)(ಬಿ) , 187 ಐಎಮ್‌ವಿ ಕಾಯಿದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ದಯಾನಂದ ಇವರು  ದಿನಾಂಕ:28/01/2015 ರಂದು ಮಧ್ಯಾಹ್ನ 1:15  ಗಂಟೆಗೆ ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ ಕೆ.ಎ:20 ಕ್ಯೂ:290 ನೇ ದರಲ್ಲಿ ಮಹೇಶ ಎಂಬವರನ್ನು ಸಹಸವಾರನ್ನಾಗಿ ಕುಳ್ಳಿರಿಸಿ ಕೊಂಡು  ಸಾಸ್ತಾನಕ್ಕೆ  ಹೋಗುವರೇ ಉಡುಪಿ ತಾಲೂಕು ಬಾಳ್ಕುದ್ರು ಗ್ರಾಮದ ರಾಹೆ 66ರ  ಮಾಬುಕಳ ಸೇತುವೆಯ ದಕ್ಷಿಣ  ತುದಿ ತಲುಪುವಾಗ  ಆರೋಪಿ ಅಬ್ದುಲ್ಲಾ  ಎಂಬವರು ಆತನ ಬಾಬ್ತು ಕೆ.ಎ:30 ಎ:0465 ನೇ ನಂಬ್ರದ ಟ್ಯಾಂಕರ್ ಲಾರಿಯನ್ನು ಉಡುಪಿ ಕಡೆಯಿಂದ ಸಾಸ್ತಾನ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸಮೇತ ಟಾರು ರಸ್ತೆಯ ಮೇಲೆ ಬಿದ್ದ ಪಿರ್ಯಾಧಿದಾರರ ಬಲ ಕಾಲಿನ ಹಿಮ್ಮಡಿಗೆ ಹಾಗೂ ಪಾದಕ್ಕೆ ಮೂಳೆ ಮುರಿತದ ಗಾಯ ಹಾಗೂ ಸಹ ಸವಾರ ಮಹೇಶರವರ ಕಾಲಿಗೆ ತರಚಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  17/2015 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  
  • ಪಡುಬಿದ್ರಿ: ದಿನಾಂಕ. 28.01.2015 ರಂದು 16:05 ಗಂಟೆಗೆ ಎಲ್ಲೂರು ಗ್ರಾಮದ ಉಚ್ಚಿಲದಿಂದ ಪಣಿಯೂರು ಹೋಗುವ ರಸ್ತೆಯಲ್ಲಿ ಪಣಿಯೂರು 5 ಸೆಂಟ್ಸ್ ಹೋಗುವ ಕ್ರಾಸ್ ರಸ್ತೆ ಬಳಿ ಕೆಎ-05-ಡಿ-9873 ನೇ ಟಿಪ್ಪರ್ ಚಾಲಕ ದೇವಣ್ಣ ಎಂಬವರು ಟಿಪ್ಪರನ್ನು ಉಚ್ಚಿಲ ಕಡೆಯಿಂದ ಪಣಿಯೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕೆಎ-20-ಇಜಿ-1726 ನೇ ದ್ವಿಚಕ್ರ ವಾಹನವನ್ನು ಮಧುರ ತಂತ್ರಿರವರು ತನ್ನ ಮಕ್ಕಳಾದ ವಸುಪ್ರದ ಹಾಗೂ ವೈಷ್ಣವಿರವರನ್ನು ಕುಳ್ಳಿರಿಸಿಕೊಂಡು ಉಚ್ಚಿಲದಿಂದ ಪಣಿಯೂರು ಕಡೆಗೆ ಚಲಾಯಿಸಿಕೊಂಡು ಟಿಪ್ಪರನ್ನು ದಾಟಿ ಮುಂದೆ ಹೋಗುತ್ತಿರುವ ಸಮಯದಲ್ಲಿ ಟಿಪ್ಪರ್ ಚಾಲಕನು ಯಾವುದೇ ಸೂಚನೆ ನೀಡದೆ ಅಜಾಗರೂಕತೆಯಿಂದ ಒಮ್ಮೆಲೇ ಲಾರಿಯನ್ನು ಆತನ ಬಲಗಡೆ ಕ್ರಾಸ್ ರೋಡ್ ಗೆ ತಿರುಗಿಸಿದ್ದಾಗ ಟಿಪ್ಪರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನವು ಲಾರಿಯ ಅಡಿಗೆ ಸಿಲುಕಿ ಸವಾರರಾದ ಮಧುರ ತಂತ್ರಿರವರು ಹಾಗೂ ಸಹಸವಾರರಾದ ವಸುಪ್ರದ ಹಾಗೂ ವೈಷ್ಣವಿರವರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  22/2015 ಕಲಂ 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.   
ಹಲ್ಲೆ ಪ್ರಕರಣ 
  • ಕೋಟ: ಪಿರ್ಯಾದಿ ಪಂಜುಪೂಜಾರಿ ಇವರು ದಿನಾಂಕ:27/01/2015 ರಂದು ಮಧ್ಯಾಹ್ನ 4:00  ಗಂಟೆಗೆ ಉಡುಪಿ ತಾಲೂಕು ಶಿರಿಯಾರ  ಗ್ರಾಮದ ನಾಯ್ಕರ ಮನೆಯ ಬಯಲಿನಲ್ಲಿ ಬರುವಾಗ ಆರೋಪಿ ರಾಮ ಪೂಜಾರಿ ಎಂಬವರು ಕಾಣಸಿಕ್ಕಿ ಆತನ ಗದ್ದೆಯಲ್ಲಿ ಪಿರ್ಯಾದಿದಾರರು ಹುಲ್ಲು ಕೊಯ್ದು ಕೊಂಡು ಹೋದ ವಿಚಾರದಲ್ಲಿ ಗಲಾಟೆಯಾಗಿ ಆರೋಪಿಯು ಪಿರ್ಯಾಧಿದಾರರ ಎಡ ಕೆನ್ನೆಗೆ ಕೈಯಿಂದ ಹೊಡೆದಾಗ ಪಿರ್ಯಾಧಿದಾರರು ಬೊಬ್ಬೆ ಹಾಕಿದಾಗ ಆರೋಪಿ ರಾಮ ಪೂಜಾರಿಯ ಹೆಂಡತಿ ಸಾಕು ಎಂಬವರು ಮರದ ಸೊಂಟೆಯನ್ನು ಹಿಡಿದು ಕೊಂಡು ಬಂದು  ಪಿರ್ಯಾಧಿದಾರರ  ಬಲ ಕೈ ಮುಂಗೈಗೆ ಹೊಡೆದ ಪರಿಣಾಮ ಪಿರ್ಯಾಧಿದಾರರ ಮುಂಗೈಗೆ  ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  15/2015 ಕಲಂ 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ಪಿರ್ಯಾದಿ ರಾಮ ಪೂಜಾರಿ ಇವರು ದಿನಾಂಕ:27/01/2015 ರಂದು ಮಧ್ಯಾಹ್ನ 3:45  ಗಂಟೆಗೆ ಉಡುಪಿ ತಾಲೂಕು ಶಿರಿಯಾರ  ಗ್ರಾಮದ ಆನಗಲ್ಲಿ ತೋಟದ ಹತ್ತಿರ ಗದ್ದೆಯಲ್ಲಿ ಕಟ್ಟಿದ ದನಗಳನ್ನು ಬಿಡಿಸಿ ಕೊಂಡು  ಮನೆಗೆ ಬರುವಾಗ ಆರೋಪಿ ಪಂಜು ಪೂಜಾರಿ ಎಂಬವರು ಪಿರ್ಯಾಧಿದಾರರನ್ನು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಬಲ ಕೆನ್ನೆಗೆ ಹೊಡೆದು ಬಲ ಕಿಬ್ಬೊಟ್ಟೆಗೆ ತುಳಿದ ಪರಿಣಾಮ  ಪಿರ್ಯಾಧಿದಾರರು ಬೊಬ್ಬೆ ಹಾಕಿದಾಗ  ಅವರ  ಹೆಂಡತಿ ಸಾಕು ಎಂಬವರು ಅಲ್ಲಿಗೆ ಬಂದಾಗ ಮೂವರೊಳಗೆ ತಳ್ಳಾಟವಾಗಿರುತ್ತದೆ. ಬಳಿಕ ಆರೋಪಿಯು ನಿಮ್ಮಿಬ್ಬರನ್ನು ಈ ದಿನ ಬಿಟ್ಟಿದ್ದೇನೆ, ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಹಲ್ಲೆಯ ಪರಿಣಾಮ ಗಾಯಗೊಂಡ ಪಿರ್ಯಾಧಿದಾರರನ್ನು ಹಾಗೂ ಅವರ ಹೆಂಡತಿ ಸಾಕು ಎಂಬುವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೋಗಿಯಾಗಿ ದಾಖಲಿಸಿದ್ದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ  16/2015 ಕಲಂ 341, 504, 323,506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಕೋಟ: ದಿನಾಂಕ 28/01/2015 ರಂದು ಪಿರ್ಯಾದಿ ನರಸಿಂಹ ಶೆಟ್ಟಿ ಇವರ ಮಗನಾದ ರಾಜೇಶ ಶೆಟ್ಟಿರವರು ಮೋಟಾರ್ ಸೈಕಲ್‌ನಲ್ಲಿ ಗರಿಕೆ ಮಠದ ಕಡೆಯಿಂದ ಅಚಲಾಡಿಯಲ್ಲಿರುವ ತನ್ನ ಮನೆಯ ಕಡೆಗೆ ಹೋಗುತ್ತಿದ್ದಾಗ ಕೆ.ಎ20 ಬಿ2035 ನೇ ನಂಬ್ರದ ಓಮಿನಿ ಕಾರಿನಲ್ಲಿ ಆರೋಪಿತರುಗಳಾದ ಸುಧೀರ ಶೆಟ್ಟಿ ಹಾಗೂ ಇತರ 5-6 ಜನರು ರಾಜೇಶ ಶೆಟ್ಟಿಯವರ ಬಾಬ್ತು  ಮೋಟಾರ್ ಸೈಕಲ್‌ನ್ನು ತಡೆದು ನಿಲ್ಲಿಸಿ ರಾಜೇಶ ಶೆಟ್ಟಿಯನ್ನು ಓಮಿನಿ ಕಾರಿನಲ್ಲಿ ಹಾಕಿಕೊಂಡು ಅಪಹರಿಸಿರುತ್ತಾರೆ, ಓಮಿನಿ ಕಾರಿನಲ್ಲಿದ್ದ ಓರ್ವ ಆರೋಪಿಯು ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿಕೊಂಡು ಹೋಗಿ, ಸುಮಾರು 1 ಗಂಟೆಯ ಬಳಿಕ ರಾಜೇಶ ಶೆಟ್ಟಿಯ ಸ್ನೇಹಿತ ಕಿರಣ ರವರ ಮೊಬೈಲ್ ಪೋನ್‌ಗೆ ಕರೆಮಾಡಿ ರಾಜೇಶ ಶೆಟ್ಟಿ ಜೀವಂತವಾಗಿ ಉಳಿಯ ಬೇಕಾದರೆ ಐವತ್ತು ಸಾವಿರ ರೂಪಾಯಿಯನ್ನು ತಗೆದು ಕೊಂಡು ಹುಣ್ಸೆಮಕ್ಕಿಗೆ ಬರುವಂತೆ ಹೇಳಿದ್ದು, ವಿಚಾರ ತಿಳಿದ ಪಿರ್ಯಾಧಿದಾರರು ಐವತ್ತು ಸಾವಿರ ರೂಪಾಯಿಯನ್ನು ಕಿರಣನಲ್ಲಿ ಕಳುಹಿಸಿ ಕೊಟ್ಟಿದ್ದು ಓಮಿನ ಕಾರಿನಲ್ಲಿದ್ದ ಇಬ್ಬರು ಆರೋಪಿತರು ಐವತ್ತು ಸಾವಿರ ರೂಪಾಯಿಯನ್ನು ಪಡೆದುಕೊಂಡು, ಮೋಟಾರ್ ಸೈಕಲ್‌ನ್ನು ರಸ್ತೆಯ ಬಳಿ ಬಿಟ್ಟು ಬಳಿಕ ಆರೋಪಿತರುಗಳು ಕೈಯಿಂದ ಮತ್ತು ಆಯುಧದಿಂದ ರಾಜೇಶ ಶೆಟ್ಟಿಗೆ ಹೊಡೆದು ಮರಣಾಂತಿಕ ಹಲ್ಲೆಮಾಡಿ ಕೊಲೆಗೆ ಪ್ರಯ್ನತಿಸಿ ರಾಜೇಶ ಶೆಟ್ಟಿಯನ್ನು  ಹೇರಿಕೆರೆ ಬಳಿ ಬಿಟ್ಟುಹೋಗಿರುತ್ತಾರೆ. ರಾಜೇಶ ಶೆಟ್ಟಿ ಹಾಗೂ ಆರೋಪಿ ಸುಧೀರ್ ಶೆಟ್ಟಿಗೆ ಹಣಕಾಸಿನ ವ್ಯವಹಾರದಲ್ಲಿ ತಕರಾರಿದ್ದು ಅದೇ ದ್ವೇಷದಿಂದ ಆರೋಪಿತರೆಲ್ಲರು ಸೇರಿಕೊಂಡು ಈ ಕೃತ್ಯವೆಸಗಿದ್ದು ಆರೋಪಿಗಳು ನಡೆಸಿದ ಹಲ್ಲೆಯಿಂದ ಗಾಯಗೊಂಡ ರಾಜೇಶ ಶೆಟ್ಟಿಯನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 18/2015 ಕಲಂ 143, 147, 148, 341, 363, 386, 307, 149 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: