Wednesday, January 28, 2015

Daily Crimes Reported as On 28/01/2015 at 17:00 Hrs


ಅಪಘಾತ ಪ್ರಕರಣ
  • ಕಾಪು:ದಿನಾಂಕ:28/01/2015 ರಂದು ಬೆಳಿಗ್ಗೆ 07:00 ಗಂಟೆಗೆ ಪಿರ್ಯಾದಿದಾರರಾದ ಸಿರಾಜುದ್ದಿನ್‌ (64) ತಂದೆ:ಶೇಕ್‌ ಅಮಿರುದ್ದೀನ್‌ ವಾಸ:ಶಿವಾಂಬ” ಮನೆಯ ಹತ್ತಿರ ಮೂಡಬೆಟ್ಟು ಗ್ರಾಮ ಕಟಪಾಡಿ ಅಂಚೆ ಉಡುಪಿ ಜಿಲ್ಲೆರವರ ಮಗನಾದ ಮೊಹಮ್ಮದ್ ಸುಹೇಲ್‌ ಎಂಬವರು ಡೈರಿಯಿಂದ ಹಾಲು  ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿ 66 ಪೂರ್ವ ಬದಿಯ ಮಣ್ಣು ರಸ್ತೆಯಲ್ಲಿ ಮನೆಗೆ ಬರುತ್ತಾ ಮೂಡಬೆಟ್ಟು ಗ್ರಾಮದ ಸಿರಾಜುದ್ದಿನ್‌ರವರು ಮನೆಯ ಗೇಟ್‌ನ ಎದುರು ತಲುಪುತ್ತಿದ್ದಂತೆ ಓರ್ವ ಓಮಿನಿ ಚಾಲಕನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ತನ್ನ ಕೆಎ 25 ಝಡ್‌ 45 ನೇ ಓಮ್ನಿ ಕಾರನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೇಲೆ ಬಲ ಬದಿಗೆ ತಿರುಗಿಸಿ ಸಿರಾಜುದ್ದಿನ್‌ರವರ ಮಗ ಮೊಹಮ್ಮದ್ ಶುಹೇಬ್‌ನಿಗೆ  ಡಿಕ್ಕಿ ಹೊಡೆದ ಪರಿಣಾಮ, ಮೊಹಮ್ಮದ್ ಶುಹೇಬ್‌ನಿಗೆ ಎಡ ಕಣ್ಣಿನ ಬಳಿ, ಗಲ್ಲಕ್ಕೆ ರಕ್ತ ಗಾಯವಾಗಿದ್ದು, ಹಾಗೂ ಎದೆಗೆ ಗುದ್ದಿದ ಒಳ ನೋವು ಉಂಟಾಗಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಈ ಬಗ್ಗೆ ಸಿರಾಜುದ್ದಿನ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 14/2015 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳವು ಪ್ರಕರಣ
  • ಮಣಿಪಾಲ:ಪಿರ್ಯಾದಿದಾರರಾದ ಜೊಬಿನ್‌ ಜೊಸೇಫ್‌ (37), ತಂದೆ:ಜೊಸೇಫ್‌ ಮ್ಯಾಥ್ಯೂ, ವಾಸ:ತುರುತೆಲ್‌ ಹೌಸ್, ಕಪ್ಪುಂತಲ ಅಂಚೆ, ಮುತ್ತುಚಿರ, ಕೊಟ್ಟಾಯಂ ಜಿಲ್ಲೆ, ಕೇರಳರವರು KCI Medical India Pvt Ltd, Manipal ಇಲ್ಲಿ ಉದ್ಯೋಗ ಮಾಡಿಕೊಂಡು ಬೆನಕ ಅಪಾರ್ಟ್‌ಮೆಂಟ್‌, ಈಶ್ವರನಗರದಲ್ಲಿ ವಾಸವಾಗಿರುತ್ತಾರೆ. ದಿನಾಂಕ:27/01/2015 ರಂದು ಬೆಳಿಗ್ಗೆ 11:30 ಗಂಟೆಗೆ ರೂಮ್‌ಗೆ ಬೀಗ ಹಾಕದೆ ರೂಮ್‌ನಿಂದ ಹೋಗಿದ್ದು, ಮಧ್ಯಾಹ್ನ ಸುಮಾರು 12:30 ಗಂಟೆಗೆ ರೂಮ್‌ಗೆ ವಾಪಸ್ಸು ಬಂದು ನೋಡಿದಾಗ ಜೊಬಿನ್‌ ಜೊಸೇಫ್‌ರವರ ರೂಮ್‌ನಲ್ಲಿದ್ದ 3 ಲ್ಯಾಪ್‌ಟಾಪ್‌ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವಾದ ಲ್ಯಾಪ್‌ಟಾಪ್‌ಗಳ ಅಂದಾಜು ಮೌಲ್ಯ ಸುಮಾರು 40,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಜೊಬಿನ್‌ ಜೊಸೇಫ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 13/15 ಕಲಂ 380 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ:ವಿಠಲ ದೇವಾಡಿಗ (47 ಎಂಬವರು ಕುಂದಾಪುರ ತಾಲೂಕು ವಡೇರ ಹೋಬಳಿ ಗ್ರಾಮದ ರಾಯಪ್ಪನ ಮಠದ ರಸ್ತೆ ಎಂಬಲ್ಲಿ ವಾಸವಾಗಿದ್ದು, ದಿನಾಂಕ:28/01/2015 ರಂದು ಮಧ್ಯರಾತ್ರಿ 01:00 ಗಂಟೆಯಿಂದ 02:30 ಘಂಟೆಯ ನಡುವಿನ ಸಮಯದಲ್ಲಿ ಮನೆಯ ಬಾವಿಯ ರಾಟೆಯ ಕಂಬಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ರವೀಂದ್ರ (44) ತಂದೆ:ನಾಗಪ್ಪ ದೇವಾಡಿಗ ವಾಸ:ರಾಯಪ್ಪನ ಮಠದ ರಸ್ತೆ, ವಡೇರ ಹೋಬಳಿ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಯು.ಡಿ.ಆರ್‌ ಸಂಖ್ಯೆ 03/15 ಕಲಂ 174 ಸಿ ಆರ್ ಪಿ.ಸಿ ಯಂತೆ ಪ್ರಕರಣ  ದಾಖಲಿಸಿ  ತನಿಖೆ ಕೈಗೊಳ್ಳಲಾಗಿದೆ.

No comments: