Wednesday, January 28, 2015

Daily Crimes Reported as On 28/01/2015 at 07:00 Hrs

ಅಪಘಾತ ಪ್ರಕರಣ
  • ಕೋಟ: ಫಿರ್ಯಾದಿ ನಾಗರಾಜರವರು  ದಿನಾಂಕ:26/01/2015  ರಂದು ಮದ್ಯಾಹ್ನ 2.35  ಗಂಟೆಗೆ ಉಡುಪಿ ತಾಲೂಕು ಕೋಟತಟ್ಟು  ಗ್ರಾಮದ ಕೋಟತಟ್ಟು ಕಾರಂತರ ಹೋಟೇಲ್  ಎದುರುಗಡೆ ತನ್ನ ಸೈಕಲ್ಲಿನಲ್ಲಿ ಸ್ನೇಹಿತ ಕೀರ್ತಿಯನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಹೋಗುತ್ತಿರುವಾಗ  ಕೋಡಿ  ಕಡೆಯಿಂದ ಕೋಟತಟ್ಟು ಕಡೆಗೆ ಆರೋಪಿ ಕೇಶವ ಪೂಜಾರಿ  ತನ್ನ ಬಾಬ್ತು  KA.20.P.6215 ಮಾರುತಿ ಅಲ್ಟೋ ಕಾರನ್ನು  ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತೀರ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿ ಚಲಾಯಿಸುತ್ತಿದ್ದ ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಟಾರು ರಸ್ತೆಗೆ ಬಿದ್ದು ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 14/15 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿ ಸುಧಾಕರ ಕುಲಾಲ್ ಇವರು ದಿನಾಂಕ 27/01/2015 ರಂದು ಸಂಜೆ 4.00 ಗಂಟೆ ಸಮಯಕ್ಕೆ ಸರ್ವಿಸ್ ಬಸ್ಸು ನಿಲ್ದಾಣದಲ್ಲಿ ಕೆಎ 20 ಎಬಿ 7786 ನೇ ಎಮ್‌ಎಮ್ಎಸ್  ಬಸ್ಸಿನ ಚಾಲಕನ ಅನುಮತಿ ಮೇರೆಗೆ ಬಸ್ಸಿನ  ಅಡಿಭಾಗದಲ್ಲಿ  ಗ್ರೀಸ್  ಹೊಡೆಯುತ್ತಿರುವಾಗ,  ಸದ್ರಿ ಬಸ್ಸಿನ ಹಿಂದಿನಿಂದ  ಕೆಎ 20 ಬಿ 3327 ನೇ ನಂಬ್ರದ ಬಸ್ಸು ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಗ್ರೀಸ್  ಹೊಡೆಯುತ್ತಿರುವ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಗ್ರೀಸ್ ಹೊಡೆಯುತ್ತಿದ್ದ ಬಸ್ಸು ಮುಂದಕ್ಕೆ ಚಲಿಸಿ ಪಿರ್ಯಾದಿದಾರರ ಬಲಕೈ ಮುಂಗೈ ಬಳಿ ಮತ್ತು ಬಲಕಾಲಿನ ಮೊಣ ಗಂಟಿನ ಬಳಿ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/15 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಹಲ್ಲೆ ಪ್ರಕರಣ
  • ಅಜೆಕಾರು: ಪಿರ್ಯಾದಿ  ತುಕ್ರ  ಇವರು ದಿನಾಂಕ 26-01-2015 ರ ಸಂಜೆಯ ಸಮಯ ತಾನು ಸಾಕಿದ ಗಬ್ಬದ ದನ ಹಟ್ಟಿಗೆ ಬಾರದೆ ಇದ್ದ ಕಾರಣ ಹುಡುಕಲು ಹೋದಲ್ಲಿ ಅಂಡಾರು ಗ್ರಾಮದ ಕೊಂದಳಿಕೆ ಮೈದಾನದಲ್ಲಿ ಕೆಲವು ದನಗಳಿದ್ದು ಅವುಗಳ ಪೈಕಿ ತನ್ನ ದನ ಇದೆ ಎಂದು ಟಾರ್ಚ ಲೈಟ್ ಹಾಕಿ ಹುಡುಕಾಡುತ್ತಿದ್ದಾಗ ರಾತ್ರಿ 22:15  ಗಂಟೆಗೆ ಆರೋಪಿತ ನವೀನ ಆಚಾರಿ ಮತ್ತು  ಶಂಕರ ಶೆಟ್ಟಿ ಸದ್ರಿ ಸ್ಥಳಕ್ಕೆ ಬಂದು ಟಾರ್ಚ ಲೈಟ್ ಹಾಕಿದ್ದು ಯಾಕೆ ಎಂದು ಹೇಳಿ ತಮ್ಮ ಕೈಯಲ್ಲಿದ್ದ ಮರದ ಕೋಲಿನಿಂದ ಪಿರ್ಯಾಧಿದಾರರಿಗೆ ಹಿಗ್ಗಾಮುಗ್ಗಾ ಹೊಡೆದು ಕಾಲಿನಿಂದ ತುಳಿದು ಕೈಯಿಂದ ದೂಡಿ ರಕ್ತಗಾಯ ಮಾಡಿದ್ದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2015 ಕಲಂ 323, 324  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
  • ಉಡುಪಿ: ಪಿರ್ಯಾದಿದಾರರಾದ ವೀರೇಶರವರು ಸುಧಾರ್ ಬಸ್ಸಿನಲ್ಲಿ ಕಂಡೆಕ್ಟರ್ ಕೆಲಸ ಮಾಡಿಕೊಂಡಿದ್ದು  ದಿನಾಂಕ 26/01/2015 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಪಿರ್ಯಾದಿದಾರರು ಉಡುಪಿ ಕೃಷ್ಣ ಮಠಕ್ಕೆ ಹೋಗಿ ವಾಪಾಸು ಮನೆಗೆ ಹೋಗುವ ಸಲುವಾಗಿ ಮಧ್ಯಾಹ್ನ ಸುಮಾರು 3:00 ಗಂಟೆಗೆ ಉಡುಪಿ ತ್ರಿವೇಣೆ ಜಂಕ್ಷನ್‌ನಲ್ಲಿ ಎಸ್.ಎಮ್.ಎಮ್.ಎಸ್ ಬಸ್‌ ಅನ್ನು ಹತ್ತಿದ್ದು ಸದ್ರಿ ಬಸ್ಸು ಅಲಂಕಾರು ಥಿಯೇಟರ್ ಬಳಿ ಹೋಗುತ್ತಿರುವಾಗ  ಬಸ್ಸಿನ ಕಂಡೆಕ್ಟರ್  ರೋಷನ್ ಎಂಬವರು ಪಿರ್ಯಾದಿದಾರರ ಬಳಿ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಕಾಲಿನಿಂದ ತುಳಿದುದ್ದಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 17/15 ಕಲಂ 504, 323, 506 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇತರೇ ಪ್ರಕರಣ
  • ಕುಂದಾಪುರ: ದಿನಾಂಕ 27/01/2015 ರಂದು 16:40 ಗಂಟೆಗೆ ನಾಸೀರ್‌ ಹುಸೇನ್‌, ಪಿ.ಎಸ್‌.ಐ, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ದೊರೆತ ಖಚಿತ ಮಾಹಿತಿಯಂತೆ ಸಿಬ್ಬಂದಿಯವರ ಜೊತೆಗೆ ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಕಾಂಡ್ಲ ಗದ್ದೆಯ ಕುದ್ರು ಅಬ್ಬುಬಕ್ಕರ್ ಎಂಬುವರ ಮನೆಯ ಬಳಿ ಹೋದಾಗ ಮನೆಯ ಹಿಂಬದಿಯಲ್ಲಿ ಕೆಲವು ಜಾನುವಾರುವನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದು, 17:00 ಗಂಟೆಗೆ ದಾಳಿ ನಡೆಸಿದಾಗ ಆಪಾದಿತ ಅಬೂಬಕ್ಕರ್ ಮತ್ತು ಇನ್ನೊಬ್ಬ ವ್ಯಕ್ತಿ ಓಡಿ ತಪ್ಪಿಸಿಕೊಂಡಿದ್ದು, ಹಿಂಸಾತ್ಮಕವಾಗಿ ಕಟ್ಟಿ ಹಾಕಿದ್ದ ಜಾನುವಾರುಗಳನ್ನು ನೋಡಲಾಗಿ 1) ಕಂದು ಬಣ್ಣದ ದನ -1, 2) ಕಪ್ಪು ಬಣ್ಣದ ದನ -1, 3) ಬಿಳಿ ಕಪ್ಪು ಬಣ್ಣದ  ಗಂಡು ಕರು -1, 4) ಕಪ್ಪು ಬಣ್ಣದ ಗಂಡು ಕರು -2, 5) ಕಪ್ಪು ಬಣ್ಣದ ಗಂಡು ಎತ್ತು 4 (ಓಟ್ಟು 9) ಇವುಗಳನ್ನು ಮತ್ತು ಸದ್ರಿ ಗೋವುಗಳನ್ನು ಕಡಿದು ಮಾಂಸ ಮಾಡಲು ಹತ್ತಿರದಲ್ಲಿ ಇಟ್ಟಿಕೊಂಡಿದ್ದ ವಸ್ತುಗಳಾದ 6) ಸುಮಾರು ಎರಡು ಅಡಿ ಸುತ್ತಳತೆಯ 2 ಅಡಿ ಉದ್ದದ ಮರದ ತುಂಡು -1, 7) ಬಿಳಿ ಬಣ್ಣದ ಹಿಡಿಯಿರುವ ಸುಮಾರು 1 ಅಡಿ ಉದ್ದದ ಚೂರಿ -1,  8) ಕೊಪ್ಪು ಬಣ್ಣದ ಹಿಡಿಯಿರುವ ಸುಮಾರು 1 ಅಡಿ ಉದ್ದದ ಚೂರಿ -1, 9) ಕೆಸರಿ ಬಣ್ಣದ ಹಳೆಯ ಪ್ಲಾಸ್ಟಿಕ್ ಬಾಕ್ಸ್ -1, ಮತ್ತು 10) ಹಸಿರು ಬಣ್ಣದ ಹಳೆಯ ಪ್ಲಾಸ್ಟಿಕ್ ಬಾಕ್ಸ್ -1 ಇವುಗಳನ್ನು ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು, ಇಬ್ಬರು ಆಪಾದಿತರು ಸೇರಿಕೊಂಡು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು, ಅವುಗಳನ್ನು ಅನಧಿಕೃತವಾಗಿ ಕಡಿದು ಮಾಂಸ ಮಾಡುವರೇ ಇಟ್ಟುಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2105 ಕಲಂ: 379 ಐಪಿಸಿ ಮತ್ತು 4, 5, 7 KARNTAKA PREVENTION OF COW SLAUGHTER & CATTLE PREVENTION ACT-1964   ನಂತೆ  ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

No comments: