Friday, January 30, 2015

Daily Crime Reports As on 30/01/2015 at 19:30 Hrs



 ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದುದಾರರಾದ ಅಶೋಕ್‌ ಗೌಡ (47) ತಂದೆ: ಭರತ್‌ ಬಿ.ಸಿ ವಾಸ: ನೆಕ್ಕಿಲ ಮನೆ, ಬನ್ನೂರು ಗ್ರಾಮ & ಅಂಚೆ, ಪುತ್ತೂರು ತಾಲೂಕು ರವರು ಇಂಡಸ್‌ ಮೊಬೈಲ್‌ ಕಂಪೆನಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸೆಕ್ಯೂರಿಟಿ ಸೂಪರ್‌ ವೈಸರ್‌ ಆಗಿ ಕೆಲಸ ಮಾಡಿಕೊಂಡಿದ್ದು, ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಬೀಜಾಡಿ ಎಂಬಲ್ಲಿರುವ ಮೊಬೈಲ್‌ ಗೋಪುರಕ್ಕೆ ಅಳವಡಿಸಲಾದ 24 ಬ್ಯಾಟರಿಗಳನ್ನು ದಿನಾಂಕ 24.01.2015 ರ 16:00 ಗಂಟೆಯಿಂದ ದಿನಾಂಕ 26.01.2015 ರ ಬೆಳಿಗ್ಗೆ 11:00 ಗಂಟೆ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕೋಣೆಯ ಬೀಗ ಒಡೆದು ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 28,000/- ಆಗಿರುತ್ತದೆ ಎಂಬುದಾಗಿ ಅಶೋಕ್‌ ಗೌಡ ರವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 27/2015 ಕಲಂ: 454, 457, 380 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 ವಂಚನೆ ಪ್ರಕರಣ

  • ಶಿರ್ವಾ: ಮಹಮ್ಮದ್ ಮನ್ಸುರ್ ಎಂಬವರು ಶಿರ್ವ ಸ್ಟೇಟ್‌ ಬ್ಯಾಂಕ್‌ ಮೈಸೂರು ಶಾಖೆಯ ಬ್ರಾಂಚ್‌ನಲ್ಲಿ ಖಾತೆದಾರರಾಗಿದ್ದು, ದಿನಾಂಕ 23/01/2015 ರಂದು ಯಾರೋ ಅಪರಿಚಿತ ಆರೋಪಿಗಳು ಇ-ಮೇಲ್ ಸಂದೇಶದ ಮುಖಾಂತರ ಮಹಮ್ಮದ್ ಮನ್ಸುರ್ ಎಂಬವರ ಇಮೇಲ್‌  ಸಂದೇಶದ ಮುಖಾಂತರ  ಹೋಲಿಕೆಯ ಸಹಿ ಇರುವ ಲಿಖಿತ ಪತ್ರವನ್ನು ಬ್ಯಾಂಕಿಗೆ ಕಳುಹಿಸಿ ಖಾತೆಯಲ್ಲಿದ್ದ ಆರು ಲಕ್ಷ ಮೊತ್ತವನ್ನು ಎಸ್‌ಬಿಐ ಸರೈ ಕಾವಜ ಬ್ರಾಂಚ್‌ನ ಫರಿದಾಬಾದ್‌ ಬ್ಯಾಂಕ್‌ನ ಖಾತೆ ಸಂಖ್ಯೆಗೆ ವರ್ಗಾಹಿಸುವಂತೆ ಕೋರಿಕೊಂಡ ಮೇರೆಗೆ ಪಿರ್ಯಾದಿದಾರರಾದ ವಲೇರಿಯನ್ ಅರಾನ್ಹ ಎಸ್.ಬಿ.ಎಂ ಬ್ಯಾಂಕ್ ಮೆನೇಜರ್ ಶಿರ್ವ ಬ್ರಾಂಚ್ ಶಿರ್ವ ಗ್ರಾಮ, ಉಡುಪಿ ಜಿಲ್ಲೆ ರವರು ಸದ್ರಿ ಮೊತ್ತವನ್ನು ಕೋರಿಕೊಂಡ ಬ್ಯಾಂಕ್‌ಗೆ ಕಳುಹಿಸಿಕೊಟ್ಟಿದ್ದು, ಮತ್ತೆ ಪುನ: ಖಾತೆದಾರ    ಮೊಹಮ್ಮದ್‌ ಮನ್ಸೂರ್‌ ಎಂಬವರ ಹೆಸರಿನಲ್ಲಿ ಇದ್ದ ಖಾತೆಯಿಂದ ಇಮೇಲ್‌ ಮುಖಾಂತರ ರೂಪಾಯಿ ಒಂಭತ್ತು ಲಕ್ಷ ಮೊತ್ತ  ವರ್ಗಾಹಿಸುವಂತೆ ಇ-ಮೇಲ್‌ ಸಂದೇಶ ಬಂದಿದ್ದು, ಈ ಸಮಯ ಪಿರ್ಯಾದಿದಾರ ಮ್ಯಾನೇಜರ್ ಗೆ ಸಂಶಯ ಬಂದು ಬ್ಯಾಂಕ್‌ನ  ಖಾತೆದಾರ ಮೊಹಮ್ಮದ್‌ ಮನ್ಸೂರ್‌ ಎಂಬವರಿಗೆ ದೂರವಾಣಿ ಕರೆ ಮಾಡಿ ಕೇಳಿದಾಗ ತಾನು ಯಾವುದೇ ರೀತಿಯಲ್ಲಿ ಹಣ ವರ್ಗಾವಹಿಸುವಂತೆ ಇ- ಮೇಲ್‌ ಸಂದೇಶ ಕಳುಹಿಸಿಲ್ಲ ಎಂದು  ತಿಳಿಸಿದ್ದು ಪಿರ್ಯಾದಿದಾರ ಮ್ಯಾನೇಜರ್ ಕೂಡಲೇ  ಈಗಾಗಲೇ   ಹಣವನ್ನು ವರ್ಗಾಹಿಸಲಾದ ಎಸ್‌ಬಿಐ  ಸರೈ ಕಾವಜ ಬ್ರಾಂಚ್‌ನ ಫರಿದಾಬಾದ್‌ ಬ್ಯಾಂಕ್‌ನ ಬ್ರಾಂಚ್‌ ಮ್ಯಾನೇಜರ್‌ರವರಲ್ಲಿ   ವಿಷಯ ತಿಳಿಸಿದಾಗ ಸದ್ರಿ ಆರು ಲಕ್ಷ ರೂಪಾಯಿ ಮೊತ್ತವು ವರ್ಗಾವಣೆ ಆಗಿದ್ದಾಗಿ ತಿಳಿಸಿರುತ್ತಾರೆ. ಆದುದರಿಂದ ಆರೋಪಿತರು ಬ್ಯಾಂಕ್ ಖಾತೆದಾರ ಮೊಹಮ್ಮದ್‌ ಮನ್ಸೂರ್‌ ರವರ ಇ - ಮೇಲ್‌ನ್ನು ಐಡಿಯನ್ನು ಹ್ಯಾಕ್‌ ಮಾಡಿ ಹಣ ವರ್ಗಾಯಿಸಿದ್ದಾಗಿದೆ ಎಂಬುದಾಗಿ ವಲೇರಿಯನ್ ಅರಾನ್ಹ ಎಸ್.ಬಿ.ಎಂ ಬ್ಯಾಂಕ್ ಮೆನೇಜರ್ ಶಿರ್ವ ರವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2015  ಕಲಂ: 66 ಸಿ,66 ಡಿ,ಐಟಿ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.



No comments: