Monday, January 26, 2015

Daily Crime Reports As on 26/01/2015 at 19:30 Hrs
 ಹಲ್ಲೆ ನಡೆಡಸಿ, ಜೀವ ಬೆದರಿಕೆ ನೀಡಿದ ಪ್ರಕರಣ
  • ಉಡುಪಿ: ದಿನಾಂಕ 25-01-2015 ರಂದು ಫಿರ್ಯಾದಿದಾರರಾದ ಸುಂದರ ಶೇರಿಗಾರ (44) ರಾಜು ದೇವಾಡಿಗ ವಾಸ ಪರಮೇಶ್ವರ ನಿವಾಸ ತಾಂಗದಗಡಿ ನಿಟ್ಟೂರು ಪುತ್ತೂರು ಗ್ರಾಮ ಉಡುಪಿ ತಾಲೂಕು ರವರು ಮನೆಯಲ್ಲಿರುವಾಗ ಕ್ಲಾಸಿಕ್ ಬಿಲ್ಡರ್ಸ್ ಮಾಲೀಕರಾದ ಪ್ರಭಾಕರ ಜಿ ಎಂಬವರು ತಮ್ಮ ಐ 20 ಕಾರನ್ನು ಫಿರ್ಯಾದಿದಾರರ ಮನೆಗೆ ಕಳುಹಿಸಿದ್ದು ಸದ್ರಿ ಕಾರಿನಲ್ಲಿ ಸಚಿನ್ ಮತ್ತು ಓರ್ವ ಕಾರು ಚಾಲಕ ಬಂದು ಮೂಡುಸಗ್ರಿಯಲ್ಲಿನ ಮನೆಯಲ್ಲಿ ಪಂಪ್‌ ಹಾಳಾಗಿದ್ದು ರಿಪೇರಿ ಮಾಡುವಂತೆ ಪ್ರಭಾಕರರವರು ತಿಳಿಸಿದ್ದಾರೆ ಎಂದು ಹೇಳಿ ಫಿರ್ಯಾದಿದಾರರನ್ನು ಕರೆದುಕೊಂಡು ಮೂಡುಸಗ್ರಿ ಮನೆಗೆ ಹೋಗದೆ ವಾಸುಕೀ ನಗರದ ಪ್ರಭಾಕರ ಜಿ ರವರ ಮನೆಗೆ ಕೆರೆದುಕೊಂಡು ಹೋಗಿದ್ದು, ಫಿರ್ಯಾದಿದಾರರು ಮನೆಯ ಹೊರಗಿನ ಹಟ್ ಒಂದರಲ್ಲಿ ಕುಳಿತುಕೊಂಡಿರುವಾಗ ಸಮಯ ಸುಮಾರು ರಾತ್ರಿ 10:45 ಗಂಟೆಗೆ ಪ್ರಭಾಕರ ಜಿ ರವರು ಬಂದು ನನ್ನ ಬಗ್ಗೆ ಗೊತ್ತಿದೆಯಲ್ಲ ನಮ್ಮ ರೌಡಿಸಂ ಎಲ್ಲಾ ಗೊತ್ತುಂಟಾ ಎಂಬುದಾಗಿ ಹೇಳಿ ಏಕಾಏಕಿ ಆತನ ಕೈಯಲ್ಲಿದ್ದ ಪಿಸ್ತೂಲನ್ನು ಫಿರ್ಯಾದಿದಾರರ ಹೊಟ್ಟೆಗೆ ಗುರಿ ಹಿಡಿದನು. ಫಿರ್ಯಾದಿದಾರರು ಶೂಟ್ ಮಾಡು ಎಂದಾಗ ಪ್ರಭಾಕರ ಜಿ, ಸಚಿನ್ ಮತ್ತು ಕಾರು ಚಾಲಕ ಫಿರ್ಯಾದಿದಾರರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದುಲ್ಲದೇ ಪ್ರಭಾಕರ ಜಿ ರವರು ಅಲ್ಲೇ ಇದ್ದ ವಿಸ್ಕಿ ಬಾಟಲಿನಿಂದ ಪಿರ್ಯಾದಿದಾರರ ತಲೆಗೆ ಹೊಡೆದ ಪರಿಣಾಮ ರಕ್ತಗಾಯವಾಗಿದ್ದು, ನಂತರ ಆರೋಪಿತರು ಫಿರ್ಯಾದಿದಾರರನ್ನು ಕಾರಿನಲ್ಲಿ ಕರೆದುಕೊಂಡು ಮನೆಗೆ ತಂದು ಬಿಟ್ಟುಹೋಗಿರುತ್ತಾರೆ. ಫಿರ್ಯಾದಿದಾರರನ್ನ ಚಿಕಿತ್ಸೆಯ ಬಗ್ಗೆ ನೆರೆ ಮನೆಯವರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರಿಗೂ ಮತ್ತು ಪ್ರಭಾಕರ ಜಿ ರವರಿಗೂ ಹಣದ ವ್ಯವಹಾರ ಇದ್ದು ಅದೇ ಕಾರಣದಿಂದ ಆರೋಪಿತರು ಹಲ್ಲೆ ಮಾಡಿದ್ದಾಗಿದೆ ಎಂಬುದಾಗಿ ಆರೋಪಿಸಿ ಸುಂದರ ಶೇರಿಗಾರ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 16/2015 ಕಲಂ: 363,323,324,325,506,ಜೊತೆಗೆ 34 ಐ ಪಿ ಸಿ ಮತ್ತು ಕಲಂ 25 ಶಸ್ರ್ತಾಸ್ರ್ತ ಕಾಯ್ದೆ 1959   ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತ ವ್ಯಕ್ತಿಯು ಮೃತಪಟ್ಟ ಪ್ರಕರಣ
  • ಬೈಂದೂರು: ದಿನಾಂಕ: 26/05/2015 ರಂದು 08:30 ಗಂಟೆಗೆ ಫಿರ್ಯಾದಿದಾರರಾದ ಮಧುಕರ್ ಶೇಟ್ (52) ತಂದೆ; ಶಂಕರ್ ಶೇಟ್ ವಾಸ; ವೈಭವ್ ನಿಲಯ ಬೈಂದೂರು, ಯಡ್ತರೆ ಗ್ರಾಮ ಕುಂದಾಪುರ ತಾಲೂಕು ರವರು ಯಡ್ತರೆಯ ತನ್ನ ಮನೆಯಿಂದ ದೇವಸ್ಥಾನಕ್ಕೆ ಹೋಗುವಾಗ ಯಡ್ತರೆ ಗ್ರಾಮ ಪಂಚಾಯತಿಗೆ ಸಂಬಂದಪಟ್ಟ ಭಟ್ಕಳ ಕಡೆಗೆ ಹೋಗುವ ಬಸ್ ಸ್ಟಾಂಡಿನ  ಸಿಮೆಂಟ್‌ನ ನೆಲದ ಮೇಲೆ ಸುಮಾರು 45 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಶವ ಬಿದ್ದುಕೊಂಡಿದ್ದು ಈತನು ಸುಮಾರು 2-3 ದಿನಗಳಿಂದ ಬಸ್‌ಸ್ಟಾಂಡಿನಲ್ಲಿ ತಿರುಗಾಡಿಕೊಂಡಿದ್ದು ಅಲ್ಲಿಯೇ ಊಟ ಮಾಡಿ ತಂಗಿಕೊಂಡಿದ್ದು ಈ ದಿನ ಬೆಳಿಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿರುತ್ತಾರೆ, ಮೃತರ ಮೈ ಮೇಲೆ ಕಂದು ಬಿಳಿಗೆರೆಗಳಿರುವ ಅರ್ಧ ತೋಳಿನ ಶರ್ಟ್, ಸಿಮೆಂಟ್ ಬಣ್ನದ ಪ್ಯಾಂಟ್, ಬಾಯಿಯ ತುಟಿಯಲ್ಲಿ ರಕ್ತ ಹೊರ ಬರುತಿದ್ದು ಈತನು ಶರಾಬು ಕುಡಿದಿರುವ ವಾಸನೆ ಬರುತಿದ್ದು ಮೃತನು ಬಸ್‌ಸ್ಟಾಂಡಿನಲ್ಲಿ ಪ್ರಯಾಣಿಕರ ಸಿಮೆಂಟಿನ ದಂಡೆಯಾಸನದಿಂದ ಕೆಳಗೆ ಸಿಮೆಂಟ್ ನೆಲದ ಮೇಲೆ ಆಯಾ ತಪ್ಪಿ ಬಿದ್ದು ಗಾಯಗೊಂಡು ಯಾ ಹೃದಯಾಘಾತ ಯಾ ಇನ್ನಿತರ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂಬುದಾಗಿ ಮಧುಕರ್ ಶೇಟ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 02/2015 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ
  • ಅಮಾಸೆಬೈಲು: ಪಿರ್ಯಾದಿದಾರರಾದ ರತ್ನಾಕರ ಶೆಟ್ಟಿ ಪ್ರಾಯ: 51 ವರ್ಷ ತಂದೆ: ದಿ ಸಂಕಯ್ಯ ಶೆಟ್ಟಿ ವಾಸ: ಬೆಪ್ಡೆ ಬ್ರಾಮರ ಬೆಟ್ಟು ಶೇಡಿಮನೆ ಗ್ರಾಮ ಕುಂದಾಪುರ ತಾಲೂಕು ರವರು ಮತ್ತು ಪಿರ್ಯಾದುದಾರರ ಸ್ನೇಹಿತ ಮಂಜುನಾಥ ಎಂಬವರು  ದಿನಾಂಕ 26/01/2015 ರಂದು ಬೆಳಿಗ್ಗೆ 07:00 ಗಂಟೆಗೆ ಮಡಾಮಕ್ಕಿ ಗ್ರಾಮದ ಸಾಯಿ ಎಸ್ಟೇಟ್‌ ಬಳಿ ನಿಂತುಕೊಂಡಿರುವಾಗ ಶೇಡಿಮನೆ ಕಡೆಯಿಂದ KA 20 B 8648 ನೇ ಕಾರು ಮತ್ತು  KA 20 B 1201ನೇ ರಿಕ್ಷಾ  ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಓವರ್‌ ಟೇಕ್‌ ಮಾಡಿ ಕಾರು ಚಾಲಕನು ರಿಕ್ಷಾವನ್ನು  ಓವರ್‌ ಟೇಕ್‌ ಮಾಡಿ ಚಲಾಯಿಸಿಕೊಂಡು ಬಂದಾಗ  ಎದುರುನಿಂದ ಒಂದು ವಾಹನವು ಬರುವುದನ್ನು ಕಂಡು  ಕಾರನ್ನು ಎಡ ಬದಿಗೆ ಚಲಾಯಿಸಿ  ರಿಕ್ಷಾಕ್ಕೆ ತಾಗಿಸಿ ಡಿಕ್ಕಿ ಹೊಡೆದುಕೊಂಡು  ಎರಡು ವಾಹನಗಳು ಹತೋಟಿ ತಪ್ಪಿ ರಸ್ತೆಗೆ ಮಗುಚಿ ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದ್ದು  ರಿಕ್ಷಾದ ಎದುರಿನ ಗ್ಲಾಸ್‌ ಪುಡಿಯಾಗಿದ್ದು ರಿಕ್ಷಾದ ಚಾಲಕನಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರು ಮತ್ತು ರಿಕ್ಷಾ ಚಾಲಕರ ಮೇಲೆ ಸೂಕ್ತ ಕಾನೂನು  ಕ್ರಮ  ಜರಗಿಸುವಂತೆ ರತ್ನಾಕರ ಶೆಟ್ಟಿ ರವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2015 ಕಲಂ: ಕಲಂ:279, 337  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
ಹಲ್ಲೆ ಪ್ರಕರಣಗಳು
  • ಕೊಲ್ಲೂರು:ದಿನಾಂಕ 25.01.2015 ರಂದು ಬೆಳಿಗ್ಗೆ ಸುಮಾರು 08:35 ಗಂಟೆಯ ಸಮಯ ಪಿರ್ಯಾದಿದಾರರಾದ ನಾರಾಯಣ ಪೂಜಾರಿ (46) ತಂದೆ:ಸುಬ್ಬ ಪೂಜಾರಿ ವಾಸ: ಮೆಕ್ಕೆ, ಜಡ್ಕಲ್‌  ಗ್ರಾಮ ಕುಂದಾಪುರ ತಾಲೂಕು ರವರು ಹಾಗೂ ಅವರ ಭಾವ ಭಾಸ್ಕರ ಪೂಜಾರಿರವರು ಮನೆಯ ಅಂಗಳದಲ್ಲಿ ನಿಂತುಕೊಂಡು ಮಾತನಾಡುತ್ತಿದ್ದ ಸಮಯ ಪಿರ್ಯಾದಿದಾರರ ಸಂಭಂದಿಕರಾದ ಲೀಲಾವತಿ ಮತ್ತು ಅವಳ ಗಂಡ ಈಶ್ವರ ಪಿರ್ಯಾದಿದಾರರ ಅಂಗಳಕ್ಕೆ ಬಂದು ಪಿರ್ಯಾದಿದಾರರಿಗೆ ಆವಾಚ್ಯ ಶಬ್ದಗಳಿಂದ ಬೈದು ಅವರಿಬ್ಬರು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಪಿರ್ಯಾದಿದಾರರು ಗಟ್ಟಿಯಾಗಿ ಬೊಬ್ಬೆ ಹಾಕಿದ ಸಮಯ  ಅಲ್ಲಿಯೇ ದಾರಿಯಲ್ಲಿ ಅಡಗಿ ಕುಳಿತಿದ್ದ ಶರತ್‌, ಸಂತೋಷ್‌ ಮೆಕ್ಕೆ, ಹುಲಿಪಾರೆ ಸಂತೋಷ್‌ ಮತ್ತು ಮುತ್ತು ಪೂಜಾರಿ ಇವರುಗಳು ಏಕಾಏಕಿಯಾಗಿ ಬಂದ್ದಿದ್ದು, ಅವರುಗಳು ಪಿರ್ಯಾದಿದಾರರಿಗೆ ಹಾಗೂ ಪಿರ್ಯಾದಿದಾರರ ಭಾವ ಭಾಸ್ಕರ ಎಂಬಾತನಿಗೆ ಕತ್ತಿಯಿಂದ, ಕಲ್ಲಿನಿಂದ, ಹಾಗೂ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ ಪರಿಣಾಮ ಪಿರ್ಯಾದಿದಾರರ ಮೂಗಿಗೆ ಒಳನೋವು ಉಂಟಾಗಿದ್ದು, ತುಟಿಗೆ ರಕ್ತ ಗಾಯವಾಗಿದ್ದು ಸೊಂಟಕ್ಕೆ ನೋವು ಉಂಟಾಗಿರುತ್ತದೆ. ಭಾಸ್ಕರ ಎಂಬವರಿಗೆ ಬೆನ್ನಿಗೆ ಸೊಂಟದ ಭಾಗಕ್ಕೆ ಹಾಗೂ ಬಲ ಕೈ ತೋಳಿಗೆ ತುಂಬಾ ನೋವು ಆಗಿದ್ದು, ಆ ಸಮಯ ಪಿರ್ಯದಿದಾರರ ಮನೆಯ ಕಡೆಗೆ ಬರುತ್ತಿದ್ದ ಶಿವ ಪೂಜಾರಿಯನ್ನು ನೋಡಿ ಆಪಾದಿತರೆಲ್ಲರು ಹೊರಟು ಹೊದರು ಆ ಕೂಡಲೆ ಪಿರ್ಯಾದಿದಾರರರು ಚಿಕಿತ್ಸೆಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಹಣದ ತಕರಾರು ಹಾಗೂ ಜಾಗದ ತಕರಾರು ಈ ಕೃತ್ಯಕ್ಕೆ ಕಾರಣವಾಗಿರುತ್ತದೆ ಎಂಬುದಾಗಿ ನಾರಾಯಣ ಪೂಜಾರಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 09/2015 ಕಲಂ: 143, 147, 148, 504, 324 ಜೊತೆಗೆ 149 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೊಲ್ಲೂರು: ಪಿರ್ಯಾದುದಾರರಾದ ಶರತ್‌ ಪೂಜಾರಿ (21) ತಂದೆ:ಮುತ್ತ ಪೂಜಾರಿ ವಾಸ: ಶ್ರೀ ಮಹಾಗಣಪತಿ ನಿಲಯ ಮೆಕ್ಕೆ, ಜಡ್ಕಲ್‌ ಗ್ರಾಮ ಕುಂದಾಪುರ ತಾಲೂಕು ರವರ ಮಾವ ಮೆಕ್ಕೆ ನಾರಾಯಣ ಪೂಜಾರಿಗೂ ಹಾಗೂ ಪಿರ್ಯಾದಿದಾರರ ಅಮ್ಮನಿಗೂ ಜಾಗದ ಪಾಲಿನ ವಿಷಯದಲ್ಲಿ ತಕರಾರು ಇದ್ದು ದಿನಾಂಕ 25/01/2015 ರಂದು ಬೆಳಿಗ್ಗೆ 08:30 ಗಂಟೆಗೆ ಮೆಕ್ಕೆ ನಾರಾಯಣ ಪೂಜಾರಿ ಹಾಗೂ ಪಿರ್ಯಾದುದಾರರ ಚಿಕ್ಕಪ್ಪ ಭಾಸ್ಕರ ರವರು ಪಿರ್ಯಾದಿದಾರರ ಹಾಗೂ ಅವರ ಅಕ್ಕ ಲೀಲಾವತಿಯವರೊಂದಿಗೆ ಎಕಾಏಕಿ ಜಗಳಕ್ಕೆ ಬಂದು ನಿಮಗೆ ಅಹಂಕಾರವಾಗಿದೆ ಎಂಬುದಾಗಿ ಆವಾಚ್ಯ ಶಬ್ದಗಳಿಂದ ಬೈದು ರಮೇಶ್‌ ಎಂಬಾತ ತನ್ನ ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರಿಗೆ ಕಡಿದು ಗಾಯಗೊಳಿಸಿದ್ದು ತಪ್ಪಿಸಲು ಬಂದ ಪಿರ್ಯಾದಿದಾರರ ಅಕ್ಕನಿಗೂ ಹೊಡೆದು ದೂಡಿ ಹಾಕಿದ್ದು, ಲೀಲಾವತಿಯವರಿಗೆ ಬಲ ಕೈಯ ಮೊಣಗಂಟಿನ ಬಳಿ ನೋವು ಆಗಿದ್ದು,  ಈ ಬಗ್ಗೆ ಪಿರ್ಯಾದಿ ಮತ್ತು ಅವರ ಅಕ್ಕ ಲೀಲಾವತಿ ಯವರನ್ನು  ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರ ಭಾವ ಸಂತೋಷ ಎಂಬವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆತಂದಾಗ ವೈಧ್ಯಾದಿಕಾರಿಯವರು ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿದ್ದು ಈ ಕೃತ್ಯಕ್ಕೆ ಹಣದ ವಿಚಾರ ಮತ್ತು ಜಾಗದ ಪಾಲಿನ ತಕರಾರೇ ಕಾರಣವಾಗಿರುತ್ತದೆ ಎಂಬುದಾಗಿ ಶರತ್‌ ಪೂಜಾರಿ ರವರು ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2015 ಕಲಂ: 504, 324 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: