Saturday, November 22, 2014

ಪತ್ರಿಕಾ ಪ್ರಕಟಣೆ


ಠಾಣೆಗಳಲ್ಲಿ ದಿನ ನಿತ್ಯದ ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸುವ ಸಲುವಾಗಿ ಹಾಗೂ ಠಾಣೆಗೆ ಬರುವ ಸಾರ್ವಜನಿಕರ ಸಮಸ್ಯೆಗೆ/ದೂರುಗಳಿಗೆ ಕೂಡಲೆ ಸ್ಪಂದಿಸಿ ಅವರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ಉಪವಿಭಾಗದ ಠಾಣೆಗಳ ಪೈಕಿ ಈಗಾಗಲೇ ಮಾದರಿ ಠಾಣೆಯನ್ನಾಗಿ ಕಾಪು, ಪಡುಬಿದ್ರಿ ಹಾಗೂ ಕಾರ್ಕಳ ನಗರ ಠಾಣೆಯನ್ನು ಆಯ್ಕೆ ಮಾಡಿ ಕಳೆದ 3 ತಿಂಗಳಿನಿಂದ ಸದ್ರಿ ಠಾಣೆಗಳಲ್ಲಿನ ಆಂತರಿಕ ಕೆಲಸ ಕಾರ್ಯಗಳು, ನೊಂದಣಿ ಪುಸ್ತಕಗಳ ಜೋಡಣೆ/ನಿರ್ವಹಣೆ ಹಾಗೂ ಠಾಣೆಯ ಒಳಗೆ ಹಾಗೂ ಬಾಹ್ಯ ಪರಿಸರವನ್ನು ಸಂಪೂರ್ಣವಾಗಿ ಬದಲಾಯಿಸಿ ಒಂದು ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಮೂರೂ ಪೊಲೀಸ್ ಠಾಣೆಗಳನ್ನು Quality Management System (QMS) ರವರು ಪರಿಶೀಲಿಸಿ ISO 9001:2008 ರಂತೆ ಮಾದರಿ ಠಾಣೆಗಳನ್ನಾಗಿ ಪರಿಗಣಿಸಿ Quality Management System (QMS) ISO 9001:2008 Certificate  ನೀಡಿರುತ್ತಾರೆ.
        ದಿನಾಂಕ:20/11/2014 ರಂದು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪಶ್ಚಿಮ ವಲಯ ಮಂಗಳೂರುರವರು ಕಾರ್ಕಳ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿ Quality Management System (QMS) ISO 9001:2008 Certificate ನ್ನು ಕಾಪು, ಪಡುಬಿದ್ರಿ ಹಾಗೂ ಕಾರ್ಕಳ ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರುಗಳಿಗೆ ನೀಡಿರುತ್ತಾರೆ.

No comments: