Wednesday, October 01, 2014

PRESS NOTE



UDUPI POLICE COMMANDO



ವಿಶೇಷ ದಳದ ವಿವರಗಳು :
ಚೀತಾ :- ಪ್ರಸ್ತುತ ಜಿಲ್ಲೆಯಲ್ಲಿ ಲಭ್ಯವಿರುವ ಮೋಟರ್ ಸೈಕಲ್‌ಗಳಲ್ಲಿ 4 ಮೋಟರ್ ಸೈಕಲ್‌ಗಳನ್ನು ನವೀಕರಿಸಿ ಲೈಟ್, ಪಿ.ಎ ಸಿಸ್ಟಮ್‌, ಸೈರನ್, ಮತ್ತು ವಾಕಿ ಟಾಕಿಗಳ‌ನ್ನು  ಅಳವಡಿಸಲಾಗಿದ್ದು, ಉಡುಪಿ ನಗರ, ಮಲ್ಪೆ, ಮಣಿಪಾಲ ಠಾಣಾ ವ್ಯಾಪ್ತಿಗಳಲ್ಲಿ ಗಸ್ತು ತಿರುಗುವುದು, ಸಂಚಾರ ನಿಯಂತ್ರಣ, ಚೈನ್ ಸ್ನಾಚಿಂಗ್, ಪಿಕ್ ಪಾಕೆಟ್, ರೋಬರಿಗಳನ್ನು ತಡೆಗಟ್ಟುವುದು ಇದರ ಮುಖ್ಯ ಸೇವೆಯಾಗಿರುತ್ತದೆ. ದಿನದ 24 ಗಂಟೆಗಳಲ್ಲಿ 3 ಪಾಳಿಯಲ್ಲಿ ಸಾರ್ವಜನಿಕರಿಗೆ ಸೇವೆಯು ಲಭ್ಯವಿರುತ್ತದೆ. ಅಲ್ಲದೇ ಯಾವುದೇ ಘಟನೆ ನಡೆದ ಪಕ್ಷದಲ್ಲಿ ಶೀಘ್ರವಾಗಿ ತಕ್ಷಣ ಸ್ಪಂದಿಸುವ ಸೇವೆಯು ಇದರಿಂದ ಲಭ್ಯವಿರುತ್ತದೆ. 
ಹೊಯ್ಸಳ:- ಕುಂದಾಪುರ, ಬ್ರಹ್ಮಾವರ, ಮಲ್ಪೆ, ಮಣಿಪಾಲ, ಉಡುಪಿ ನಗರ, ಕಾಪು ಮತ್ತು ಕಾರ್ಕಳ ನಗರ ಠಾಣಾ ವ್ಯಾಪ್ತಿಗಳ ಪ್ರದೇಶಗಳಲ್ಲಿ ಇದರ ಸೇವೆಯು ಇದ್ದು, ಇದರಲ್ಲಿ ತಾಂತ್ರಿಕವಾಗಿ ಜಿ.ಪಿ.ಎಸ್, ಫಸ್ಟ್ ಏಯ್ಡ್ ಕಿಟ್, ಅಗ್ನಿ ನಂದಕ (Fire Extinguisher) ಬಾಡಿ ಪ್ರೊಟೆಕ್ಟರ್, ಡ್ರಾಗನ್ ಲೈಟ್, ರೋಪ್, ಆಯುಧಗಳು ಮತ್ತು  ಅಶ್ರುವಾಯುಗಳು ಇರುತ್ತವೆ.  ದಿನದ 24 ಗಂಟೆಗಳಲ್ಲಿಯೂ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತದೆ. ಇವುಗಳು ಮುಖ್ಯವಾಗಿ ಗಸ್ತು ತಿರುಗುವುದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದು, ಶಾಂತಿ ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಬಗೆಹರಿಸುವುದು ಮತ್ತು ಎಲ್ಲಾ ರೀತಿಯ ಅಪರಾಧಗಳನ್ನು ತಡೆಗಟ್ಟಿ ಸಾರ್ವಜನಿಕರಿಗೆ ಅಭಯವನ್ನು ನೀಡುವುದು ಇದರ ಆದ್ಯ ಕರ್ತವ್ಯವಾಗಿರುತ್ತದೆ.  
ಕ್ಷಿಪ್ರ ಕಾರ್ಯಾಚರಣೆ ಪಡೆ : ಈ ತಂಡದಲ್ಲಿ 30 ಜನ ವಿವಿಧ ತರಬೇತಿ ಹೊಂದಿದ ಪೊಲೀಸ್ ಸಿಬ್ಬಂದಿಗಳಿದ್ದು, ವಿಶೇಷ ಸಮವಸ್ತ್ರವನ್ನು ಹೊಂದಿರುತ್ತಾರೆ. ಇದರ ಉದ್ದೇಶವೇನೆಂದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಮತ್ತು ನಿಯಂತ್ರಿಸುವುದು. ಕಾನೂನು ಬಾಹಿರ ಶಕ್ತಿಗಳನ್ನು ಹತೋಟಿಗೆ ತರುವುದು. ಗಣ್ಯವ್ಯಕ್ತಿಗಳಿಗೆ ರಕ್ಷಣೆ, ರಸ್ತೆ ತೆರವುಗೊಳಿಸುವುದು, ಅಪಘಾತ ಸಂದರ್ಭದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಲ್ಲದೇ ಮುಖ್ಯವಾಗಿ ನಕ್ಸಲ್ ಬಾದಿತ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ  ಕಾರ್ಯಾಚರಣೆ ನಡೆಸುವುದಾಗಿರುತ್ತದೆ. ತಂಡದಲ್ಲಿ ವಿಶೇಷ ತರಬೇತಿ ಪಡೆದ ಸಿಬ್ಬಂದಿಗಳಿದ್ದು, ವಿವಿಧ ಆಯುಧಗಳಲ್ಲಿ ತರಬೇತಿ, ರೈಡ್, ಅಂಬುಶ್, ಪೆಟ್ರೋಲಿಂಗ್‌, ಕಾರ್ಡನ್ & ಸಚ್ಅಪರೇಷನ್, ಕೂಂಬಿಂಗ್, ಆಯುಧಗಳ ಬಳಕೆ, ರೋಪ್ ಕ್ಲೈಮಿಂಗ್, ಜಂಗಲ್ ಕ್ಯಾಂಪ್, ಮ್ಯಾಪ್ ರೀಡಿಂಗ್, ಶಾರೀರಿಕ ವ್ಯಾಯಾಮ ಪಡೆದಿರುತ್ತಾರೆ. ಇವರಲ್ಲಿ ಸಿಸಿಟಿ & ಸಿಎನ್‌ಟಿ– 11 ಜನ , ಸಿಪಿಟಿ – 5 ಜನ, ಎಲ್ಲಾ ಆಯಧಗಳ ತರಬೇತಿ ಪಡೆದ ಓರ್ವ ಸಿಬ್ಬಂದಿ ಮತ್ತು ಬಿ.ಡಿ.ಡಿ.ಎಸ್ ತರಬೇತಿ ಪಡೆದ ಓರ್ವ ಸಿಬ್ಬಂದಿ, ಅಶ್ರುವಾಯು ತರಬೇತಿ ಪಡೆದ ಓರ್ವ ಸಿಬ್ಬಂದಿ ಇದ್ದು, ಉಳಿದ 10 ಜನ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿಯನ್ನು ನೀಡಲಾಗುತ್ತಿದೆ. ಇನ್ನೋರ್ವ ಸಿಬ್ಬಂದಿಯವರು ಭಾರಿ ವಾಹನ ತರಬೇತಿಯಲ್ಲಿರುತ್ತಾರೆ. ಇದು ಪೊಲೀಸ್ ಅಧೀಕ್ಷಕರ ಮೇಲುಸ್ತುವಾರಿಯಲ್ಲಿರುತ್ತದೆ.

No comments: