Monday, October 06, 2014

Daily Crime Reports as on 06/10/2014 at 07:00 Hrsಅಪಘಾತ ಪ್ರಕರಣ
  • ದಿನಾಂಕ 05-10-2014 ರಂದು  18:20 ಗಂಟೆಗೆ ಪಿರ್ಯಾದಿ ಮಹಮ್ಮದ್ ಶಫಿ ಇವರು  ತನ್ನ   ಕಾರು ನಂಬ್ರ   ಕೆಎ-19-ಎಂ.ಸಿ -5834 ನೇ ದನ್ನು ಸುರತ್ಕಲ್ ನಿಂದ  ಉಡುಪಿ ಕಡೆಗೆ  ರಾ.ಹೇ 66 ರಲ್ಲಿ  ಚಲಾಯಿಸಿಕೊಂಡು  ಉಡುಪಿ ತಾಲೂಕು ಪಾಂಗಳ     ಗ್ರಾಮದ  ಪಾಂಗಳ     ಸೇತುವೆ  ಬಳಿ   ತಲುಪುವಾಗ  ಹಿಂದಿನಿಂದ   ಕೆಎ-19-ಸಿ-4529  ನೇ ಬಸ್ಸನ್ನು ಅದರ ಚಾಲಕನು ಅಡ್ಡಾದಿಡ್ಡಿಯಾಗಿ  ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ  ಕಾರಿನ  ಹಿಂಬದಿಗೆ  ಡಿಕ್ಕಿಹೊಡೆದ  ಪರಿಣಾಮ ಪಿರ್ಯಾದಿದಾರರ  ಕಾರಿನ ಹತೋಟಿ  ತಪ್ಪಿ  ಎದುರಿನಿಂದ ಬರುತ್ತಿದ್ದ ಹೊಸ Hyundai  ಕಾರಿಗೆ ಪಿರ್ಯಾದಿದಾರರ ಕಾರು ತಾಗಿದ ಪರಿಣಾಮ Hyundai   ಕಾರಿನ  ಎದುರು ಭಾಗ ಜಖಂಗೊಂಡಿರುತ್ತದೆ ಹಾಗೂ  ಪಿರ್ಯಾದಿದಾರರ ಕಾರಿನ ಹಿಂಬದಿ ಹಾಗೂ ಎದುರು ಬದಿ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾಪು ಠಾಣಾ ಅಪರಾಧ ಕ್ರಮಾಂಕ: 197/2014 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ
  • ಉಡುಪಿ: ಯು ಕೇಶವ ನಾಯ್ಕ್‌ ಇವರು ಅಗಾಗ ಅನಾರೋಗಕ್ಕೆ ಒಳಗಾಗುತ್ತಿದ್ದು ದಿನಾಂಕ: 05/10/2014ರಂದು ಮದ್ಯಾಹ್ನ ಸುಮಾರು 1 ಗಂಟೆಯ ಸಮಯಕ್ಕೆ  ನಿತ್ರಾಣಗೊಂಡವರನ್ನು  ಚಿಕಿತ್ಸೆಯ ಬಗ್ಗೆ ಅಸ್ಪತ್ರೆಗೆ ಕರೆದು ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ  ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 61/14  ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

No comments: