Sunday, October 19, 2014

Daily Crimes Rported as On 19/10/2014 at 17:00 Hrs


ಅಕ್ರಮ ಮದ್ಯ ಮಾರಾಟ ಪ್ರಕರಣ
  • ಶಂಕರನಾರಾಯಣ:ದಿನಾಂಕ:18/10/2014 ರಂದು ಆರ್ಡಿ ಜಗಲ್‌ಗುಡ್ಡೆ ಶ್ಯಾಮ ಶೆಟ್ಟಿರವರು ತನ್ನ ವಾಸ್ತವ್ಯದ ಮನೆಯಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೆ ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿದಾರರಾದ ಶಂಕರನಾರಾಯಣ ಠಾಣಾ ಪಿ.ಎಸ್‌.ಐ, ದೇಜಪ್ಪರವರು ಠಾಣಾ ಸಿಬ್ಬಂದಿಯವರೊಂದಿಗೆ ಕುಂದಾಫುರ ತಾಲೂಕು ಅಲ್ಬಾಡಿ ಗ್ರಾಮದ ಆರ್ಡಿ ಎಂಬಲ್ಲಿರುವ ಶ್ಯಾಮ್‌ ಶೆಟ್ಟಿಯವರು ವಾಸ್ತವ್ಯ ಇರುವ ತೆರೆದ ಛಾವಡಿಗೆ 19:20 ಗಂಟೆಗೆ ದಾಳಿ ನಡೆಸಿ ಆರೋಪಿ ಶ್ಯಾಮ ಶೆಟ್ಟಿ (77) ತಂದೆ:ದಿವಂಗತ ನಾರಾಯಣ ಹೆಗ್ಡೆ ವಾಸ:ಜಗಳಗುಡ್ಡೆ, ಆರ್ಡಿ ಪೋಸ್ಟ್, ಅಲ್ಬಾಡಿ ಗ್ರಾಮರವರನ್ನು ದಸ್ತಗಿರಿ ಮಾಡಿ 1) ಮದ್ಯ ತುಂಬಿದ್ದ 180 ಎಂ.ಎಲ್‌ ನ MYSORE LANCER WHISKY BOTTLE-8, 2) ಅರ್ದ ಮದ್ಯ ತುಂಬಿದ್ದ  180 ಎಂ.ಎಲ್‌ ನ  MYSORE LANCER WHISKY BOTTLE -1 , 3) ಮದ್ಯ ತುಂಬಿರುವ  90 ಎಂ.ಎಲ್‌ ನ MYSORE LANCER WHISKY ಸ್ಯಾಚೆಟ್‌-47, 4) 90 ML MYSORE LANCER WHISKY ಯ ಖಾಲಿ ಸ್ಯಾಚೆಟ್‌-13, 5) 180 ML MYSORE LANCER WHISKY ಯ ಖಾಲಿ ಬಾಟಲಿ-2, 6) ಸ್ಯಾಚೆಟ್‌ಗಳನ್ನು ದಾಸ್ತಾನು ಇಟ್ಟಿದ್ದ ಅಲ್ಯುಮಿನಿಯಂ ಕೊಡಪಾನ-1, 7) ಸ್ಟೀಲ್‌ ಲೋಟ -1 ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ ನಗದು ರೂಪಾಯಿ 470/- ಅನ್ನು ಪಂಚನಾಮೆಯ ಮುಖೇನಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಪಿ.ಎಸ್‌.ಐ, ದೇಜಪ್ಪರವರು ಶಂಕರನಾರಾಯಣ ಠಾಣಾ ಅಪರಾಧ ಕ್ರಮಾಂಕ 156/14 ಕಲಂ:32,34 ಕೆ.ಇ ಆ್ಯಕ್ಟ್‌ನಂತೆ ಪ್ರಕರಣ ದಾಖಲಿಸಿದ್ದಾರೆ.
ಜೀವ ಬೆದರಿಕೆ ಪ್ರಕರಣ
  • ಕೊಲ್ಲೂರು:ದಿನಾಂಕ:18/10/2014 ರಂದು 22.00 ಗಂಟೆಗೆ ಆಪಾದಿತ 1)ಬಾಬು 2)ರಂಗ, ವಾಸ:ಕೊರಗ ಕಾಲೋನಿ, ಉದಯನಗರ, ಮುದೂರು ಗ್ರಾಮ, ಕುಂದಾಪುರ ತಾಲೂಕು ಇವರುಗಳು ಸಮಾನ ಉದ್ದೇಶದಿಂದ ಪಿರ್ಯಾದಿದಾರರಾದ ಸಂತೋಷ (45) ತಂದೆ:ದಿವಂಗತ ನಂದಿ ವಾಸ:ಕೊರಗ ಕಾಲೋನಿ, ಉದಯನಗರ, ಮುದೂರು ಗ್ರಾಮ, ಕುಂದಾಪುರ ತಾಲೂಕುರವರ ಮನೆಯ ಜಗುಲಿಗೆ ಅಕ್ರಮ ಪ್ರವೇಶ ಮಾಡಿ ಜಗುಲಿಯ ಬಾಗಿಲಿಗೆ ಬಡಿದು ನಿಮ್ಮನ್ನು ಕೊಂದೇ ಬಿಡುತ್ತೇವೆ" ಎಂದು ಬೆದರಿಕೆ ಹಾಕಿದ್ದು,  ಸಂತೋಷರವರು ಹೆದರಿ ಹೆಂಡತಿ ಮಕ್ಕಳೊಂದಿಗೆ ಮನೆಯ ಹಿಂದಿನ ಬಾಗಿಲಿನಿಂದ ಓಡಿ ಜೋಸ್‌ ಎಂಬವರ ಮನೆಯಲ್ಲಿ ಆಶ್ರಯ ಪಡೆದಿರುತ್ತಾರೆ.ಈ ಕೃತ್ಯಕ್ಕೆ ಆಪಾದಿತರ ಮನೆಯ ರಾಜು ಎಂಬಾತನು ಸಂತೋಷರವರ ಮನೆಗೆ ಬರುತ್ತಿದ್ದು, ಸಂತೋಷರವರೊಂದಿಗೆ ಒಳ್ಳೆಯ ರೀತಿಯಲ್ಲಿದ್ದು, ಅದೇ ಕಾರಣಕ್ಕೆ ಆಪಾದಿತರುಗಳು ಮತ್ಸರಗೊಂಡು ಈ ಕೃತ್ಯ ಮಾಡಿರುವುದಾಗಿದೆ. ಈ ಬಗ್ಗೆ ಸಂತೋಷರವರು ನೀಡಿದ ದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 68/2014 ಕಲಂ:448, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಶಿರ್ವಾ:ಪಿರ್ಯಾದಿದಾರರಾದ ಶ್ರೀಮತಿ ವಿಜಯ (49) ಗಂಡ:ಶೇಖರ ಪೂಜಾರಿ ವಾಸ:ಗೀತಾ ನಿವಾಸ, ಕುಚ್ಚಿಕಾಡು,ಪಣಿಯೂರು, ಬೆಳಪು ಗ್ರಾಮ, ಉಡುಪಿ ತಾಲೂಕುರವರ ತಾಯಿ ಸುಶೀಲ ಪೂಜಾರ್ತಿ (66) ಎಂಬವರು ಬೆಳಪು ಗ್ರಾಮದ ಪಣಿಯೂರು ಕುಚ್ಚಿಕಾಡು ಎಂಬಲ್ಲಿ ದಿನಾಂಕ:18/10/2014 ರಂದು 16:30 ಗಂಟೆಗೆ ವಾಯುವಿಹಾರಕ್ಕೆಂದು ಹೋದವರು ಸಂಜೆ 18:30 ಗಂಟೆಯಾದರೂ ಮನೆಗೆ ಬಾರದಿದ್ದನ್ನು ಕಂಡು ಹುಡುಕಾಡಿದಾಗ ನೆರೆಮನೆಯ ಗಿರಿಯ ಪೂಜಾರಿಯವರ ಬಾವಿಯಲ್ಲಿ ಸುಶೀಲ ಪೂಜಾರ್ತಿರವರ ಮೃತ ದೇಹ ತೇಲುತ್ತಿದ್ದು, ಸದ್ರಿಯವರು 2 ದಿನಗಳಿಂದ ತನ್ನ ಸಂಬಂಧಿ ರಾಧ ಪೂಜಾರ್ತಿಯವರು  ಮೃತಪಟ್ಟಿ ಬಗ್ಗೆ ಮಾನಸಿಕ ಖಿನ್ನತೆಯಿಂದ ಇದ್ದು, ಅದೇ ಬೇಸರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ  ಎಂಬುದಾಗಿ ಶ್ರೀಮತಿ ವಿಜಯರವರು ನೀಡಿದ ದೂರಿನಂತೆ ಶಿರ್ವಾ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 14/2014 ಕಲಂ:174 ಸಿ.ಆರ್.ಪಿ.ಸಿಯಂತೆ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: