Friday, October 17, 2014

Daily Crimes Reported as On 17/10/2014 at 17:00 Hrs


ಅಪಘಾತ ಪ್ರಕರಣ
  • ಮಣಿಪಾಲ:ದಿನಾಂಕ:16/10/2014 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರಾದ ಸತೀಶ್‌ ನಾಯ್ಕ, ತಂದೆ:ಕುಂಡ್ಯ ನಾಯ್ಕ, ವಾಸ:ಕೆಳಪರ್ಕಳ, ಕೊಂಬೆ ಹೌಸ್‌, ಪರ್ಕಳ, ಹೆರ್ಗಾ ಗ್ರಾಮ, ಉಡುಪಿರವರ ತಮ್ಮ ಅವಿನಾಶ್‌ ಎಂಬವರು ತನ್ನ ಕೆ.ಎ 47 ಜೆ 6086 ನೇ ಮೋಟಾರು ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಹಿರೆಬೆಟ್ಟು ಗ್ರಾಮದ ಪಟ್ಲ ಎಂಬಲ್ಲಿಗೆ ತಲುಪುವಾಗ ತಿರುವಿನಲ್ಲಿ ಎದುರಿನಿಂದ ಬಂದ ಬಸ್ಸು ನಂಬ್ರ ಕೆ.ಎ 20 ಸಿ 2122 ರ ಚಾಲಕ ಪ್ರದೀಪನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವಿನಾಶ್‌ರವರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿನ ಮೂಳೆ ಮುರಿತ ಹಾಗೂ ಬಲಕೈ ಬೆರಳಿಗೆ ರಕ್ತಗಾಯ  ಆಗಿ ಜಖಂಗೊಂಡಿರುತ್ತದೆ. ಈ ಬಗ್ಗೆ ಸತೀಶ್‌ ನಾಯ್ಕರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 175/14 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ:ಪಿರ್ಯಾದಿದಾರರಾದ ಜಗದೀಶ್ (32) ತಂದೆ:ದಿವಂಗತ ಶೀನ ಮೊಗವೀರ ವಾಸ:ಕೆಪ್ಪನಬೆಟ್ಟು, ಮೂಡಲಕಟ್ಟೆ ಪೋಸ್ಟ್, ಕಂದಾವರ ಗ್ರಾಮ, ಕುಂದಾಪುರ  ತಾಲೂಕು, ಉಡುಪಿ ಜಿಲ್ಲೆರವರು ಕುಂದಾಪುರ ಎಂ.ಐ.ಟಿ ಕಾಲೇಜಿನಲ್ಲಿ ಕೆಲಸ ಮಾಡಿಕೊಂಡಿದ್ದು, ಅವರ ತಾಯಿ ಶ್ರೀಮತಿ ಮೀನಾಕ್ಷಿ (65) ಗಂಡ:ದಿವಂಗತ ಶೀನ ಮೊಗವೀರರವರು ತನ್ನ ಹಿರಿಯ ಮಗನಾದ ಸುರೇಶ್‌ನೊಂದಿಗೆ ಮನೆಯಲ್ಲಿಯೇ ವಾಸವಾಗಿದ್ದು, ಸುರೇಶ್‌ ಮಾನಸಿಕ ಅಸ್ವಸ್ಥನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಗುಣಮುಖರಾಗದೇ ಇದ್ದು ಅದೇ ಕಾರಣಕ್ಕೆ ಜಗದೀಶ್‌ರವರ ತಾಯಿ ಕೂಡಾ ಸುಮಾರು 2 ವರ್ಷ ದಿಂದ ಮಾನಸಿಕವಾಗಿ  ನೊಂದುಕೊಂಡಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:16/10/2014 ರಂದು ಮನೆಯ ಹತ್ತಿರದ ಹಾಡಿಯ ಮಧ್ಯ ಭಾಗದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೀನಾಕ್ಷಿರವರ ಮರಣದಲ್ಲಿ ಯಾವುದೇ ಸಂಶಯವಿಲ್ಲ ಎಂಬುದಾಗಿ ಜಗದೀಶ್‌ರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 56/2014 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: