Friday, October 17, 2014

Daily Crimes Reported as On 17/10/2014 at 07:00 Hrs


ಅಪಘಾತ ಪ್ರಕರಣ
  • ಕಾಪು:ದಿನಾಂಕ:11/10/2014 ರಂದು ಪಿರ್ಯಾದಿದಾರರಾದ ಶಕುಂತಲ ಮೆಂಡನ್ (30) ಗಂಡ:ಲೀಲಾಧರ್‌ ಸುವರ್ಣ ವಾಸ:ಶಕುಂತಲ ನಿಲಯ, ಕೊಡವೂರು ಗ್ರಾಮ, ಮಲ್ಪೆ ಅಂಚೆ ಉಡುಪಿರವರು ಸಹಸವಾರರಾಗಿ ಆಪಾದಿತ ವಿನೋದ ಕುಂದರ್‌ ತಂದೆ:ಸೋಮಪ್ಪ ಸುವರ್ಣ, ಕೆಮ್ಮಣ್ಣು ಎಂಬವರ  ಕೆಎ 20 ಇಬಿ 6548 ನೇ ಮೋಟಾರ್‌ ಸೈಕಲ್‌ನಲ್ಲಿ ಹೋಗುತ್ತಾ ಬೆಳಿಗ್ಗೆ ಸುಮಾರು 09:00 ಗಂಟೆಗೆ ಉದ್ಯಾವರ ಗ್ರಾಮದ ಕಂಪನಬಟ್ಟು ಬಳಿ ತಲುಪುತ್ತಿದ್ದಂತೆ ವಿನೋದ ಕುಂದರ್‌ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್‌ ಹಾಕಿದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಸಹಸವಾರರಾದ ಶಕುಂತಲ ಮೆಂಡನ್‌ರವರಿಗೆ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಶಕುಂತಲ ಮೆಂಡನ್‌ರವರ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚವನ್ನು ವಿನೋದ ಕುಂದರ್‌ರವರು ಭರಿಸುವುದಾಗಿ ತಿಳಿಸಿದ್ದು ನಂತರ ಆಸ್ಪತ್ರೆಯ ವೆಚ್ಚವನ್ನು ನೀಡಲು ನಿರಾಕರಿಸಿದ್ದರಿಂದ ಈ ದೂರನ್ನು ನೀಡಲು ತಡವಾಗಿರುತ್ತದೆ. ಈ ಅಪಘಾತಕ್ಕೆ ವಿನೋದ ಕುಂದರ್‌ ಎಂಬವರು ತನ್ನ ಕೆಎ 20 ಇಬಿ 6548 ನೇ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ.ಈ ಬಗ್ಗೆ ಶಕುಂತಲ ಮೆಂಡನ್‌ರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 205/2014 ಕಲಂ 279,337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: