Wednesday, October 15, 2014

Daily Crimes Reported as On 15/10/2014 at 07:00 Hrs


ಅಪಘಾತ ಪ್ರಕರಣ
  • ಕೋಟ:ಪಿರ್ಯಾದಿದಾರರಾದ ರಾಘವೇಂದ್ರ (35) ತಂದೆ:ಬಸವ ಪೂಜಾರಿ, ವಾಸ:ಬಾಳೆಬೆಟ್ಟು ಮಣೂರು ಗ್ರಾಮ ಉಡುಪಿ  ತಾಲೂಕುರವರು ದಿನಾಂಕ:13/10/2014 ರಂದು ಬೆಳಿಗ್ಗೆ 08:45 ಗಂಟೆಗೆ ತನ್ನ ಮೋಟಾರ್ ಸೈಕಲ್ ನಂಬ್ರ ಕೆ.ಎ 20 ಎಕ್ಸ್ 6363 ನೇದರಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಟ ಕಡೆಯಿಂದ ತೆಕ್ಕಟ್ಟೆ ಕಡೆಗೆ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ಉಡುಪಿ ತಾಲೂಕು ಮಣೂರು ಗ್ರಾಮದ ಸುದೀಂದ್ರ ಎಣ್ಣೆ ಮಿಲ್‌ನ ಎದುರು ತಲುಪುವಾಗ ಸುದೀಂದ್ರ ಎಣ್ಣೆ ಮಿಲ್‌ನ ಕಡೆಯಿಂದ ಆರೋಪಿ ಗುರುದತ್ ಎಂಬವರು ತನ್ನ ಕೆಎ 20 ಎಂ 6405 ನೇ ನಂಬ್ರದ ಮಾರುತಿ ಓಮ್ನಿ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಾಘವೇಂದ್ರರವರು ಸವಾರಿ ಮಾಡಿಕೊಂಡಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಾಘವೇಂದ್ರರವರು ಟಾರು ರಸ್ತೆಯ ಮೇಲೆ ಬಿದ್ದು ಮೂಳೆ ಮುರಿತದ ರಕ್ತಗಾಯಗೊಂಡು ಕೋಟೇಶ್ವರ ಎನ್.ಆರ್.ಆಚಾರ್ಯ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿದ್ದಾಗಿದೆ.ಈ ಬಗ್ಗೆ ರಾಘವೇಂದ್ರರವರು ನೀಡಿದ ದೂರಿನಂತೆ ಕೋಟ ಠಾಣಾ ಅಪರಾಧ ಕ್ರಮಾಂಕ 203/2014 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕುಂದಾಪುರ ಸಂಚಾರ:ದಿನಾಂಕ:14/10/2014 ರಂದು ಸಮಯ ಸುಮಾರು ಬೆಳಿಗ್ಗೆ  8:30  ಗಂಟೆಗೆ  ಕುಂದಾಪುರ  ತಾಲೂಕು ಹೆಮ್ಮಾಡಿಯ  ಮೂವತ್ತು ಮುಡಿ ಬಸ್ಸ್ಟಾಪ್‌‌ ಹತ್ತಿರ ರಾಷ್ಟ್ರೀಯ ಹೆದ್ದಾರಿ  66  ರಲ್ಲಿ, ಆಪಾದಿತ ಪ್ರಕಾಶ್  ಆನಂದ  ರಾವ್  ಸೊಲಕೆ ಎಂಬವರು MH 11-AL-8989 ನೇ  ಲಾರಿಯನ್ನು  ಅರಾಟೆ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿಕೊಂಡು  ಬಂದು,  ಆತನ  ಎದುರಿನಿಂದ  ಬಂದ  ವಾಹನ  ನೋಡಿ ಗಡಿಬಿಡಿಯಲ್ಲಿ  ರಾಷ್ಟ್ರೀಯ ಹೆದ್ದಾರಿ  66 ರಸ್ತೆಯ ತೀರ ಎಡಬದಿಗೆ ಚಲಾಯಿಸಿದಾಗ, ಲಾರಿ ಚಾಲಕನ ಹತೋಟಿ  ತಪ್ಪಿ  ರಸ್ತೆ  ಎಡಬದಿಯ ಹೊಂಡದ  ಸ್ಥಳದಲ್ಲಿ  ಸಿಲುಕಿಕೊಂಡಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಅಪರಾಧ ಕ್ರಮಾಂಕ 127/2014 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
ಕಳವು ಪ್ರಕರಣ
  • ಉಡುಪಿ ನಗರ:ದಿನಾಂಕ:11/10/2014 ರಂದು ಸಂಜೆ 5:30 ಗಂಟೆಗೆ ಪಿರ್ಯಾದಿದಾರರಾದ ವಿಠಲ್‌‌ ಜೆ ಅಮೀನ್‌‌ (43) ತಂದೆ:ದಿವಂಗತ ಜಬ್ಬ ವಾಸ:ಕಂಬಳ ಕಟ್ಟೆ ರಸ್ತೆ ಅಂಬಲಪಾಡಿ ಗ್ರಾಮ ಉಡುಪಿರವರು ಮನೆಗೆ ಬೀಗ ಹಾಕಿ ಮನೆಯವರೊಂದಿಗೆ  ಮೈಸೂರಿಗೆ ಹೋಗಿದ್ದು, ದಿನಾಂಕ:14/10/2014ರಂದು ಮಧ್ಯಾಹ್ನ 1:00 ಗಂಟೆಗೆ ಮನೆಗೆ ಬಂದಾಗ ಮನೆಯ ಅಡುಗೆ ಕೋಣೆಯ  ಹಂಚನ್ನು ಯಾರೋ ಕಳ್ಳರು ವಿಠಲ್‌‌ ಜೆ ಅಮೀನ್‌ರವರು ಇಲ್ಲದ ಸಮಯದಲ್ಲಿ  ಮನೆಯ ಒಳಗೆ  ಪ್ರವೇಶಿಸಿ  ಬೆಡ್‌  ರೂಮ್‌ನ   ಮಂಚದ ಮೇಲೆ ಗೋಡೆಗೆ ಸಿಕ್ಕಿಸಿ ಇಟ್ಟಿದ್ದ ವೆನಿಟಿ ಬ್ಯಾಗ್‌ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು, ಆ ಬ್ಯಾಗಿನಲ್ಲಿರಿಸಿದ್ದ 2 ಹರಳಿನ 2.5 ಗ್ರಾಮ ತೂಕದ ಚಿನ್ನದ ಉಂಗುರ ಕಳವು ಮಾಡಿದ್ದಾಗಿರುತ್ತದೆ. ಕಳವಾದ ಉಂಗುರದ ಬೆಲೆ ಸುಮಾರು 5,000/-ರೂಪಾಯಿ ಆಗಬಹುದು ಎಂಬುದಾಗಿ 290/14  ಕಲಂ 454, 457, 380 (ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ
  • ಮಣಿಪಾಲ:ಪಿರ್ಯಾದಿದಾರರಾದ ಅಂಬಿಕಾ ಜಿ ನಾಯಕ್‌, ತಂದೆ: ಗಣೇಶ್‌ ಎಸ್‌ ನಾಯಕ್‌, ವಾಸ: ಏಕಮನೆ, 7ನೇಕ್ರಾಸ್‌, ಲಕ್ಷೀಂದ್ರನಗರ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ, ಉಡುಪಿರವರು ಸುಮಾರು 12 ವರ್ಷಗಳ ಹಿಂದೆ ಗಣೇಶ್ಎಸ್‌. ನಾಯಕ್ಎಂಬವರನ್ನು ಮದುವೆಯಾಗಿದ್ದು, ಮದುವೆಯಾದ ನಂತರ ಗಣೇಶ್ನಾಯಕ್ರವರು ಅಂಬಿಕಾ ಜಿ ನಾಯಕ್‌ರವರಿಗೆ ಯಾವಾಗಲೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದು, ಬಗ್ಗೆ ಅಂಬಿಕಾ ಜಿ ನಾಯಕ್‌ರವರು ಅವರ ಮನೆಯವರನ್ನು ಕರೆಯಿಸಿ ರಾಜಿ ಮಾಡಿಕೊಳ್ಳುತ್ತಿದ್ದರು. ಆಪಾದಿತ ಗಣೇಶ್ಎಸ್ನಾಯಕ್ರವರು ಅಂಬಿಕಾ ಜಿ ನಾಯಕ್‌ರವರ ಕೆನ್ನೆಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ನೋವುಂಟು ಮಾಡಿದಲ್ಲದೆ, “ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಹಾಗೂ ನಿನ್ನ ಮಕ್ಕಳನ್ನು ಕೊಂದು ಹಾಕುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ. ಅಲ್ಲದೆ ಗಣೇಶ್ಎಸ್ನಾಯಕ್ರವರು ಅಂಬಿಕಾ ಜಿ ನಾಯಕ್‌ರವರನ್ನು ಬಲವಂತವಾಗಿ ಹೆದರಿಸಿ ಎಫ್‌.ಡಿ ಮತ್ತು ಚೆಕ್ಪುಸ್ತಕಕ್ಕೆ ಸಹಿ ತೆಗೆದುಕೊಂಡು 42 ಲಕ್ಷ ರೂಪಾಯಿ ಹಣವನ್ನು ಅಂಬಿಕಾ ಜಿ ನಾಯಕ್‌ರವರ ಖಾತೆಯಿಂದ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಲ್ಲದೆ, ಅಂಬಿಕಾ ಜಿ ನಾಯಕ್‌ರವರ ಲಾಕರ್‌‌ ಕೀಯನ್ನು ಉಪಯೋಗಿಸಿ ಲಾಕರ್‌ನಲ್ಲಿದ್ದ 65 ಪವನ್ಚಿನ್ನ ಹಾಗೂ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿದ್ದಾಗಿರುತ್ತದೆ.ಈ ಬಗ್ಗೆ ಅಂಬಿಕಾ ಜಿ ನಾಯಕ್‌ರವರು ನೀಡಿದ ದೂರಿನಂತೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 173/14 ಕಲಂ 498(ಎ), 323, 504,506, 384 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣ
  • ಕುಂದಾಪುರ:ಪ್ರಮೋದ ಕುಮಾರ (22) ತಂದೆ:ಗಣಪತಿ ಖಾರ್ವಿ, ವಾಸ:ಖಾರ್ವಿ ಮೇಲ್ಕೇರಿ, ಖಾರ್ವಿಕೇರಿ, ಕಸಬಾ ಗ್ರಾಮ, ಕುಂದಾಪುರ ತಾಲೂಕು ಎಂಬವರು ದಿನಾಂಕ:13/10/2014 ರಂದು ರಾತ್ರಿ 10 ಗಂಟೆಗೆ ದೋಣಿಯಲ್ಲಿ ಕುಂದಾಪುರ ತಾಲೂಕು ಕಸಬ ಗ್ರಾಮದ ಪಂಚಗಂಗಾವಳಿ ಹೊಳೆಯಲ್ಲಿ ಮೀನುಗಾರಿಕೆಗೆ ಹೋಗಿದ್ದು, ಬೆಳಿಗ್ಗೆಯಾಗದರೂ ಬಾರದ ಕಾರಣ ಹೊಳೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು, ಬಳಿಕ ದಿನಾಂಕ 14.10.2014 ರಂದು ಸಂಜೆ 5:30 ಗಂಟೆಗೆ ಕೆಳಕೇರಿ ರಿಂಗ್‌ರೋಡ್‌ನ ಉತ್ತರದಲ್ಲಿರುವ ಪಂಚಗಂಗಾವಳಿ ಹೊಳೆಯ ನೀರಿನಲ್ಲಿ ಪ್ರಮೋದ ಕುಮಾರನ ಮೃತ ದೇಹ ದೊರೆತಿದ್ದು, ಆತನು ಮೀನುಗಾರಿಕೆ ನಡೆಸುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರಾದ ಗಣಪತಿ ಖಾರ್ವಿ (51) ತಂದೆ:ದಿವಂಗತ ಲಿಂಗ ಖಾರ್ವಿ ವಾಸ:ಖಾರ್ವಿ ಮೇಲ್ಕೇರಿ, ಖಾರ್ವಿಕೇರಿ, ಕಸಬಾ ಗ್ರಾಮ, ಕುಂದಾಪುರ ತಾಲೂಕುರವರು ನೀಡಿದ ದೂರಿನಂತೆ ಕುಂದಾಪುರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 55/2014  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: