Monday, October 13, 2014

Daily Crimes Reported as On 13/10/2014 at 07:00 Hrs


ಅಪಘಾತ ಪ್ರಕರಣಗಳು
  • ಕಾಪು:ದಿನಾಂಕ:12/10/2014 ರಂದು ಪಿರ್ಯಾದಿದಾರರಾದ ಚಂದ್ರು (32) ತಂದೆ:ಮನೋಹರ್ ವಾಸ:ಕಲಕಪ್ಪನವರ್ , ಹೂವಿನ ಸಿಗ್ಲಿ ಸವಣೂರು ತಾಲೂಕು ಹಾವೇರಿ ಜಿಲ್ಲೆ, ಹಾಲಿ ವಿಳಾಸ:C/O ತೋಮ್ರ ಪೂಜಾರಿ,ಪೊಲಿಪೊ ಕಾಪು ಪಡು, ಉಡುಪಿ ಜಿಲ್ಲೆರವರ ಪರಿಚಯದ ಹನುಮಂತ ಎಂಬವರೊಂದಿಗೆ  ಕಾಪು ಪೇಟೆಗೆ ಬರುವರೇ ರಾಷ್ಟ್ರೀಯ ಹೆದ್ದಾರಿ 66ರ ಸಾರ್ವಜನಿಕ ಡಾಮರು ರಸ್ತೆಯ ಪೂರ್ವಬದಿ ಮಣ್ಣುರಸ್ತೆಯಲ್ಲಿ  ನಡೆದುಕೊಂಡು ಬರುತ್ತಾ ಪೊಲಿಪು ಮಸೀದಿ ಬಳಿ ಬಂದು ರಸ್ತೆ ದಾಟುವರೇ ನಿಂತುಕೊಂಡಿರುವಾಗ ಮದ್ಯಾಹ್ನ ಸುಮಾರು 2:30 ಗಂಟೆಗೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಓರ್ವ ಕಾರು ಚಾಲಕ ನೂರುಲ್ಲ ಅಮೀನ್ ತನ್ನ ಕೆಎ 19 ಎಂಎ 1860 ನೇ ಕಾರನ್ನು ಅಡ್ಡಾದಿಡ್ಡಿಯಾಗಿ ನಿರ್ಲಕ್ಷತನದಿಂದ ಚಲಾಯಿಸುತ್ತಾ  ಬಂದು ಚಂದ್ರುರವರ ಪಕ್ಕದಲ್ಲಿ ನಿಂತಿರುವ ಹನುಮಂತನಿಗೆ ಡಿಕ್ಕಿ ಹೊಡೆದ ಪರಿಣಾಮ ಹನುಮಂತನು ಕಾರಿನ ಮೇಲೆ ಬಿದ್ದು ನಂತರ ರಸ್ತೆಗೆ ಬಿದ್ದು ತಲೆಗೆ ಹಾಗೂ ಎಡ ಕಾಲಿಗೆ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ ದಾಖಲಾಗಿರುವುದಾಗಿದೆ.ಈ ಬಗ್ಗೆ ಚಂದ್ರುರವರು ನೀಡಿದ ದೂರಿನಂತೆ ಕಾಪು ಠಾಣಾ ಅಪರಾಧ ಕ್ರಮಾಂಕ 202/2014 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   
  • ಕೊಲ್ಲೂರು:ದಿನಾಂಕ:12/10/2014 ರಂದು 05:00 ಗಂಟೆಗೆ ಪಿರ್ಯಾದಿದಾರರಾದ ಅನಿಲ್ (35) ತಂದೆ:ಥೋಮಸ್ ವಾಸ:ನಾಯ್ಕೋಡಿ ಕೊಟ್ಟಾರಕಲ್ ಜಡ್ಕಲ್ ಗ್ರಾಮ, ಕುಂದಾಫುರ ತಾಲೂಕುರವರು ತನ್ನ ಸ್ನೇಹಿತ ಮನೋಜ್ ಕುಮಾರನೊಂದಿಗೆ ಕೊಲ್ಲೂರು ಕಡೆಯಿಂದ ಚಿತ್ತೂರು ಕಡೆಗೆ ಹೋಗುತ್ತಿರುವಾಗ ಕುಂದಾಪುರ ಕೊಲ್ಲೂರು ರಾಜ್ಯ ಹೆದ್ದಾರಿಯಲ್ಲಿ ಕೊಲ್ಲೂರು ಮಾಸ್ತಿಕಟ್ಟೆಯ ಬ್ರಿಡ್ಜ್ ಬಳಿ ಕೊಲ್ಲೂರು ಕಡೆಯಿಂದ ಸಾಗಿಬಂದ ಬೈಕೊಂದು ಅತ್ಯಂತ ವೇಗವಾಗಿ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಹೊರಳಾಡುತ್ತಿದ್ದುದನ್ನು ಕಂಡು ಅಲ್ಲಿ ಸೇರಿದ ಜನರ ಸಹಾಯದಿಂದ, ಆಗ ಅಲ್ಲಿಗೆ ಬಂದ ಬಸವ ಪೂಜಾರಿಯವರ ಜೀಪಿಗೆ  ಗಾಯಾಳುವನ್ನು ಹಾಕಿಕೊಂಡು ನಂತರ ಅಂಬುಲೆನ್ಸ್‌ನಲ್ಲಿ ಕುಂದಾಪುರ ಸರ್ಕಾರಿ ಆಸ್ಪತ್ರೆ ಗೆ ಕೊಂಡೊಯ್ದಲ್ಲಿ ವೈಧ್ಯಾದಿಕಾರಿಯವರು ಪರೀಕ್ಷಿಸಿ  ಸದ್ರಿ ವ್ಯಕ್ತಿ ಆಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಸದ್ರಿ ಬೈಕ್ ಸವಾರರಿಗೆ ತಲೆಗೆ, ಕಾಲು ಮತ್ತು ಕೈ ಗೆ ತೀವೃತರದ ರಕ್ತ ಗಾಯವಾಗಿದ್ದು  ಈ ಅಪಘಾತಕ್ಕೆ ಕೆ.ಎ.15 ಯು 4419 ನೇ ಬೈಕ್ ಸವಾರ ಮುರುಗನ್ ತಂದೆ:ಚೆಲುವ, ಕೆ.ಬಿ ಸರ್ಕಲ್, ಹೊಸನಗರ, ತಾಲೂಕುರವರ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಅನಿಲ್‌ರವರು ನೀಡಿದದೂರಿನಂತೆ ಕೊಲ್ಲೂರು ಠಾಣಾ ಅಪರಾಧ ಕ್ರಮಾಂಕ 66/2014 ಕಲಂ:279, 304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

No comments: