Thursday, October 09, 2014

Daily Crimes Reported as On 09/10/2014 at 17:00 Hrs


ಅಪಘಾತ ಪ್ರಕರಣ
  • ಬ್ರಹ್ಮಾವರ:ದಿನಾಂಕ:07/10/2014 ರಂದು 19:00 ಗಂಟೆಗೆ ಉಡುಪಿ ತಾಲೂಕು ಹಾವಂಜೆ ಗ್ರಾಮದ ಕೊಳಲಗಿರಿ ಟೆಲಿಫೋನ್  ಎಕ್ಸೇಂಜ್ ಬಳಿ ಗೋವಿಂದ ಶೆಟ್ಟಿರವರ ಮನೆಯ ಎದುರು ಆರೋಪಿ ತನ್ನ ಆಟೋ ರಿಕ್ಷಾ ನಂಬ್ರ:ಕೆಎ-20-ಎ-8584 ನೇದನ್ನು ಕೊಳಲಗಿರಿಯಿಂದ ಹಾವಂಜೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಾವಂಜೆ ಕಡೆಯಿಂದ ಕೊಳಲಗಿರಿ ಕಡೆಗೆ ಪಿರ್ಯಾದಿದಾರರಾದ ನಾರಾಯಣ ಶೆಟ್ಟಿ (51) ತಂದೆ:ದಿವಂಗತ ರಂಗಯ್ಯ ಶೆಟ್ಟಿ ವಾಸ:ಕುಕ್ಕಿಕಟ್ಟೆ ಅಂಚೆ, ಬೆಳ್ಳಂಪಳ್ಳಿ ಗ್ರಾಮ ಉಡುಪಿ ತಾಲೂಕುರವರು ಸವಾರಿ ಮಾಡಿಕೊಂಡು ಬರುತ್ತಿದ್ದ ತನ್ನ ದ್ವಿಚಕ್ರ ವಾಹನ ನಂಬ್ರ:ಕೆಎ-20 ಇ-5323 ನೇದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ನಾರಾಯಣ ಶೆಟ್ಟಿರವರಿಗೆ ಎಡಕಾಲು ಹಾಗೂ ಎಡ ಕೈಗೆ ಮೂಳೆ ಮುರಿತದ ಗಾಯ ಹಾಗೂ ಎಡಕಣ್ಣಿನ ಕೆಳರೆಪ್ಪೆಗೆ ಹಾಗೂ ಬಲ ಕೆನ್ನೆಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ನಾರಾಯಣ ಶೆಟ್ಟಿರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 188/2014 ಕಲಂ:279,338 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ವಾಭಾವಿಕ ಮರಣ ಪ್ರಕರಣಗಳು
  • ಕಾರ್ಕಳ ನಗರ:ಪಿರ್ಯಾದಿದಾರರಾದ ಶ್ರೀ ಜಗನ್ನಾಥ ಶೆಟ್ಟಿ, (46)ತಂದೆ:ದಿವಂಗತ ಕೃಷ್ಣ ಶೆಟ್ಟಿ, ವಾಸ ಚಿಕ್ಕ ಮಜಲು, ಪಳ್ಳಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕುರವರ ಸಹೋದರ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಕೊರ್ಗುಬೆಟ್ಟು ಎಂಬಲ್ಲಿಯ ನಿವಾಸಿ ಸುಮಾರು 40 ವರ್ಷದ ರಾಜೇಶ್‌ ಶೆಟ್ಟಿ ಎಂಬವರು ಬೈಲೂರಿನ ಅರ್ಚನಾ ಬಾರಿನಲ್ಲಿ ಬಿಲ್ಲಿಂಗ್‌ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದು, ಸುಮಾರು 1 ವರ್ಷದಿಂದ ಎರಡೂ ಮೂತ್ರಪಿಂಡಗಳ ವೈಫಲ್ಯ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಮಾಡಿಸಿದರೂ  ಗುಣವಾಗದೇ ಇರುವುದರಿಂದ ಜೀವನದಲ್ಲಿ ನೊಂದು ದಿನಾಂಕ:08/10/2014 ರಂದು 20:00 ಗಂಟೆಯಿಂದ 23:00 ಗಂಟೆಯ  ಮಧ್ಯೆ ತನ್ನ ಕೆಲಸ ಮುಗಿಸಿ ಮನೆಗೆ ಬರುವ ದಾರಿ ಮಧ್ಯೆ ಮನೆ ಸಮೀಪದ ಹುಣಸೆ ಮರಕ್ಕೆ ನೈಲಾನ್‌ ಹಗ್ಗವನ್ನು ಕಟ್ಟಿ ಅದರ  ಇನ್ನೊಂದು ತುದಿಗೆ ಕುತ್ತಿಗೆಯನ್ನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀ ಜಗನ್ನಾಥ ಶೆಟ್ಟಿರವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 44/2014 ಕಲಂ 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಅಜೆಕಾರು:ಪಿರ್ಯಾದಿದಾರರಾದ ನಾರಾಯಣ ನಾಯ್ಕ್‌ (32) ತಂದೆ:ದಿವಂಗತ ಶೀನ ನಾಯ್ಕ್‌, ಶ್ರೀದೇವಿ ಕೃಪಾ, ಗುಡ್ಡೆಯಂಗಡಿ, ಕುಕ್ಕುಜೆ ಗ್ರಾಮರವರ ತಂದೆ ಶೀನ ನಾಯ್ಕ (60) ಎಂಬವರು ದಿನಾಂಕ:08/10/2014 ರಂದು ಸಂಜೆ 07:00 ಗಂಟೆಗೆ ಕುಕ್ಕುಜೆ ಗ್ರಾಮದ ಗುಡ್ಡೆಯಂಗಡಿ ಎಂಬಲ್ಲಿ ಕೃಷಿ ಕೂಲಿ ಕೆಲಸಕ್ಕಾಗಿ ಹೋದವರು ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಮನೆಯ ಅಂಗಳದಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದು ಮೃತ ಪಟ್ಟಿದ್ದು ಮೃತರ ಮರಣದ ಕಾರಣ ತಿಳಿಯುವ ಬಗ್ಗೆ ತನಿಖೆ ನಡೆಸಬೇಕಾಗಿ ನಾರಾಯಣ ನಾಯ್ಕ್‌ರವರು ನೀಡಿದ ದೂರಿನಂತೆ ಅಜೆಕಾರು ಠಾಣಾ ಅಸ್ವಾಭಾವಿಕ ಮರಣ ಕ್ರಮಾಂಕ 13/14 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments: