Thursday, October 30, 2014

Daily Crime Reports as on 30/10/2014 at 19 :30 Hrsಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 30-10-2014 ರಂದು ಮದ್ಯಾಹ್ನ 12:30 ಗಂಟೆಗೆ ಕುಂದಾಪುರ ತಾಲೂಕು ಉಪ್ಪುಂದ ಗ್ರಾಮದ  ಶಾಲೆ ಬಾಗಿಲು ಎಂಬಲ್ಲಿ ರಾ.ಹೆ 66 ರಲ್ಲಿ ಪಿರ್ಯಾದಿದಾರರಾದ ಸುಬ್ರಾಯ ಹೆಚ್‌ (46) ತಂದೆ: ಗಣಪಯ್ಯ ಶೇರುಗಾರ ವಾಸ: ಹೆಬ್ಬಾಗಿಲು ಮನೆ ಮಯ್ಯಾಡಿ ಬೈಂದೂರು ಗ್ರಾಮ ಕುಂದಾಪುರ ತಾಲೂಕು ಎಂಬವರು ತನ್ನ ಮೋಟಾರ್ ಸೈಕಲಿನಲ್ಲಿ  ಬೈಂದೂರಿನಿಂದ ಉಪ್ಪುಂದ ಕಡೆಗೆ ಹೋಗುತ್ತಿರುವಾಗ ಅವರ ಎದುರಿನಿಂದ ಕೆಎ-20-ಬಿ- 7235 ನೇ ಈಚರ್ ವಾಹನದ ಚಾಲಕನು ಆತನ ವಾಹನವನ್ನು ಬೈಂದೂರಿನಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬೈಂದೂರಿನಿಂದ ಉಪ್ಪುಂದ ಕಡೆಗೆ  ಕೆಎ-20- ಇಬಿ-8016 ನೇ  ಹೊಂಡಾ ಎಕ್ಟಿವ್  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ,  ಹೊಂಡಾ ಎಕ್ಟಿವ್ ನ್ನು ಸವಾರಿ ಮಾಡುತ್ತಿದ್ದ  ಇಬ್ಬರು ವಾಹನ ಸಮೇತ  ರಸ್ತೆಗೆ ಬಿದ್ದು, ಹೊಂಡಾ ಎಕ್ಟಿವ್ ನ್ನು ಸವಾರಿ ಮಾಡುತ್ತಿದ್ದ ನಳಿನಿಯವರ ತಲೆ, ಕೈಕಾಲು, ಮುಖಕ್ಕೆ ರಕ್ತ ಗಾಯವಾಗಿದ್ದಲ್ಲದೆ, ಹಿಂಬದಿ ಸಹ ಸವಾರ ಗೌರಿಯವರಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿತ್ತದೆ. ಅಪಘಾತದಿಂದ ಗಾಯಗೊಂಡ ನಳಿನಿಯವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬುದಾಗಿ ಸುಬ್ರಾಯ ಹೆಚ್‌ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 221/2014 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಾಸ್ತಿಗೊಂಡ (65) ತಂದೆ: ನಾಗಯ್ಯ ಗೊಂಡ ವಾಸ: ಬರ್ಕನಮಕ್ಕಿ ಕಡ್ಕೆ ಯಡ್ತರೆ ಗ್ರಾಮ ಕುಂದಾಪುರ ತಾಲುಕು ಎಂಬವರ  ಕೊಟ್ಟಿಗೆಯಿಂದ  ದಿನಾಂಕ 30-10-2014  ರ ರಾತ್ರಿ 02:00 ಗಂಟೆಯಿಂದ  ದಿನಾಂಕ 30-10-2014 ರ ಬೆಳಿಗ್ಗೆ 06:00 ಗಂಟೆ ಮದ್ಯೆ ಸಮಯದಲ್ಲಿ ಯಾರೋ ಕಳ್ಳರು 2 ಕೋಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಮಾಸ್ತಿಗೊಂಡ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 222/2014 ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

No comments: