Thursday, October 30, 2014

Daily Crime Reports as on 30/10/2014 at 17:00 Hrs

ಹಲ್ಲೆ ಪ್ರಕರಣ
  • ಬ್ರಹ್ಮಾವರ: ದಿನಾಂಕ: 29/10/2014 ರಂದು ಮದ್ಯಾಹ್ನ 12.00 ಗಂಟೆ ಸಮಯಕ್ಕೆ ಉಡುಪಿ ತಾಲೂಕು ಪೆಜಮಂಗೂರು ಗ್ರಾಮದ ನ್ಯೂ ನಿಸರ್ಗ ಕಾಂಪ್ಲೆಕ್ಸ್ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಆರೋಪಿ ಜಯಕರ ಶೆಟ್ಟಿ ಎಂಬವನು ನೀರಿನ ಟ್ಯಾಂಕನ್ನು ಖರೀದಿಸಿದ ವಿಚಾರದಲ್ಲಿ ಪಿರ್ಯಾದಿ ದಯಾನಂದ ಶೆಟ್ಟಿ ಇವರ ಜೊತೆ ನೀನು ಸೆಕೆಂಡ್ ಹ್ಯಾಂಡ್ ಉಪಯೋಗಿಸಿದ ನೀರಿನ ಟ್ಯಾಂಕನ್ನು ಕೊಟ್ಟಿದ್ದಿ ಎಂದು ಹೇಳಿ ಕೈಯಿಂದ ಹೊಡೆದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣಾ ಅಪರಾಧ ಕ್ರಮಾಂಕ 200/2014 ಕಲಂ: 448, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯಾದಿ ಸುರೇಶ ತಿಂಗಳಾಯ ಇವರು ದಿನಾಂಕ:29/10/2014 ರಂದು ರಾತ್ರಿ ಸುಮಾರು 10:30 ಗಂಟೆಗೆ ತನ್ನ ದೂರದ ಸಂಬಂಧಿ ಶಂಕರ ಮರಕಾಲರೊಂದಿಗೆ ತೆಕ್ಕಟ್ಟೆಯ ವಿನಯ ಬಾರ್‌ನಲ್ಲಿ ಊಟ ಮಾಡಲು ಕುಳಿತು ಕೊಂಡಿರುವಾಗ ಪಿರ್ಯಾದಿದಾರರ ಪರಿಚಯದ ವಿಶ್ವನಾಥ ತಂದೆ:ಅಣ್ಣಪ್ಪ ಮರಕಾಲ ಎಂಬಾತನು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಖಾಲಿ ಬೀಯರ್‌ ಬಾಟಲಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದು ಜೀವ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 210/2014 ಕಲಂ 504, 324, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

No comments: