Tuesday, October 28, 2014

Daily Crime Reports as on 28/10/2014 at 17:00 Hrs



ಹಲ್ಲೆ ಪ್ರಕರಣ

  • ಉಡುಪಿ: ದಿನಾಂಕ: 27/10/2014 ರಂದು ಬೆಳಿಗ್ಗೆ ಸುಮಾರು 8.30 ಗಂಟೆ ಸಮಯಕ್ಕೆ ಫಿರ್ಯಾದಿ ಮಾರುತಿ ಇವರು  ತಮ್ಮ ಕಣ್ಣು ನೋವಿನ ಬಗ್ಗೆ ಔಷಧಿ ತರಲು ಮನೆಯಿಂದ ಎಂ.ಜಿ.ಎಂ. ಕಡೆಗೆ ಹೊರಟು ಕುದ್ಮಲ್‌ ರಂಗರಾವ್‌ ಭಜನಾ ಮಂದಿರದ ಬಳಿ ಸಮಯ ಸುಮಾರು 8.45 ಗಂಟೆಗೆ ಬರುತ್ತಿರುವಾಗ, ಫಿರ್ಯಾದಿದಾರರ ಪರಿಚಯದ ಮಾರುತಿ ಎಂಬುವನು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಆತನ ಬಲಗೈಯನ್ನು ಹಿಡಿದುಕೊಂಡು ಒಂದು ಶೇವಿಂಗ್‌ ಮಾಡುವ ಬ್ಲೇಡ್‌ನಿಂದ 3-4 ಬಾರಿ ಬಲಗೈಯ ಮೊಣಗಂಟಿನ ಕೆಳಗೆ ಗೀರಿದ್ದು ಅಲ್ಲದೇ ಕುತ್ತಿಗೆಯ ಎಡ ಬದಿಗೆ ಬ್ಲೇಡ್‌ನಿಂದ ಗೀರಿ ರಕ್ತಗಾಯ ಮಾಡಿರುತ್ತಾನೆ. ಇದರ ಪರಿಣಾಮ ಫಿರ್ಯಾದಿದಾರರ ಬಗೈಯ ಮೊಣಗಂಟಿನ ಬಳಿ ಹಾಗೂ ಕುತ್ತಿಗೆಯ ಎಡ ಬದಿಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 308/14 ಕಲಂ: 341, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.


ಅಪಘಾತ ಪ್ರಕರಣ

  • ಕಾಪು:  ಪಿರ್ಯಾದಿ ಇಲಿಯಾಸ್‌ ಅಹಮದ್ ಇವರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ದಿನಾಂಕ 27.10.2014 ರಂದು ತನ್ನ ಬಾಬ್ತು ಮೋಟಾರ್‌ ಸೈಕಲ್‌ ನಂಬ್ರ ಕೆಎ 20 ಇಎಫ್ 8970 ನೇದರಲ್ಲಿ ಮೂಳೂರು ಕಡೆಯಿಂದ ಉಡುಪಿ ಕಡೆಗೆ ರಾಹೇ 66ರಲ್ಲಿ ಹೋಗುತ್ತಾ ಸಂಜೆ ಸುಮಾರು 4:00 ಗಂಟೆ ಸಮಯಕ್ಕೆ ಮೂಳೂರು ಶೇಖಬ್ಬ ಸಾಹೇಬರ ಮನೆಯ ಎದರು ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಚಾಲಕನು ತನ್ನ ಬಾಬ್ತು ಕೆಎಲ್‌ 57 ಇ 3374 ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಒಮ್ಮೇಲೆ ಬಲಬದಿಗೆ ಚಲಾಯಿಸಿ ಪಿರ್ಯಾದುದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದನು, ಅದರ ಪರಿಣಾಮ ಪಿರ್ಯಾದುದಾರರು ಮೋಟಾರ್‌ ಸೈಕಲ್‌ ಸಮೇತರಾಗಿ ರಸ್ತೆಗೆ ಬಿದ್ದಿದು. ಗಾಯಗೊಂಡ ಪಿರ್ಯಾದುದಾರರನ್ನು ಮತ್ತು ಹೆಂಡತಿ ಹಾಗೂ ಮಕ್ಕಳನ್ನು ಚಿಕಿತ್ಸೆಯ ಬಗ್ಗೆ ಸಾರ್ವಜನಿಕರು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ ಕಾರು ಚಾಲಕನಾದ  ಮ್ಯಾಥ್ಯು  ಎಂ.ಎಂ ನೇರವರು ತನ್ನ ಬಾಬ್ತು ಕೆಎಲ್‌ 57 ಇ 3374 ನೇ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಅಪರಾಧ ಕ್ರಮಾಂಕ 209/14 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬ್ರಹ್ಮಾವರ : ದಿನಾಂಕ: 27/10/2014 ರಂದು 19:00 ಗಂಟೆಗೆ ಉಡುಪಿ ತಾಲೂಕು ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್ಸು ನಿಲ್ದಾಣದಲ್ಲಿ ಪಿರ್ಯಾದಿ ಗಣಪತಿ ಆಚಾರ್ಯ ಇವರು ಬಸ್ಸಿನಿಂದ ಕೆಳಗೆ ಇಳಿಯುವಾಗ ಆರೋಪಿ ಬಸ್ಸು ಚಾಲಕ ತನ್ನ ಬಾಬ್ತು ಬಸ್ಸು ನಂ: ಕೆಎ-20-ಬಿ-6651 ನೇ ದನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದ ಪರಿಣಾಮ ಪಿರ್ಯಾದಿದಾರರು ಬಸ್ಸಿನಿಂದ ಕೆಳಗೆ ಬಿದ್ದು ಪಿರ್ಯಾದಿದಾರರ ಬಲ ಭಾಗದ ಸೊಂಟ ಹಾಗೂ ಕಾಲಿಗೆ ತೀವ್ರ ತರದ ಒಳ ಜಖಂ ಆಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಅಪರಾಧ ಕ್ರಮಾಂಕ 198/14 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
ಅಸ್ವಾಭಾವಿಕ ಮರಣ ಪ್ರಕರಣ 
  • ಮಣಿಪಾಲ: ಸುಮಿತ್ರಾರವರು ದಿನಾಂಕ 27.10.14ರಂದು ಸಂಜೆ 16:30 ಗಂಟೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ಮೃತ ಸುಮಿತ್ರಾರವರ ಮೊಣಗಂಟು ವಿಪರೀತ ನೋವು ಇದ್ದು, ನಡೆಯಲು ಅಸಾಧ್ಯವಾಗಿದ್ದುದರಿಂದ ಮನೆಯಲ್ಲಿಯೇ ಇದ್ದು ಅದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಸ್ವಾಭಾವಿಕ ಮರಣ ಪ್ರಕರಣ ಕ್ರಮಾಂಕ 36/2014 ಕಲಂ 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಪುರಾತನ ವಸ್ತು ವಶ ಪ್ರಕರಣ
  • ಉಡುಪಿ: ದಿನಾಂಕ 27/10/2014 ರಂದು ಸಂಜೆ 16.00 ಗಂಟೆಗೆ ಶ್ರೀಕಾಂತ್‌ ಕೆ, ಪೊಲೀಸ್ ವೃತ್ತ ನಿರೀಕ್ಷಕರು ಉಡುಪಿ ವೃತ್ತ ಇವರಿಗೆ  ಉಡುಪಿ ಡಯಾನಾ ಸರ್ಕಲ್ ಬಳಿ ಇರುವ ಕಲ್ಪನಾ ಲಾಡ್ಜ್ ರೂಮ್ ನಂಬ್ರ 401 ರಲ್ಲಿ ಕೆಲವರು ಯಾವುದೋ ಪುರಾತನ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರವರೊಂದಿಗೆ  ಉಡುಪಿ ಕಲ್ಪಾನಾ ಲಾಡ್ಜ್ ನ ಕೊಠಡಿ ನಂಬ್ರ 401 ಕ್ಕೆ 16.50 ಗಂಟೆಗೆ ದಾಳಿ ಮಾಡಿದಾಗ ಅಲ್ಲಿ 1) ಮಹಾದೇವ ನಾಯ್ಕ್ ಪ್ರಾಯ:41 ,ತಂದೆ: ಸನಿಯಾರ ನಾಯ್ಕ್ ವಾಸ: ಭದ್ರಮನೆ ಮುಟ್ಟ್ಚಳ್ಳಿ ಗ್ರಾಮ ಮೂಡು ಭಟ್ಕಳ ,ಭಟ್ಕಳ ತಾಲೂಕು . 2) ಈಶ್ವರ ರೆಡ್ಡಿ ಪ್ರಾಯ:44 ,ತಂದೆ: ಸೋಮ ರೆಡ್ಡಿ ,ವಾಸ: ಪಂಚಾಕ್ಷರಿ ನಗರ 4 ನೇ ಕ್ರಾಸ್ ಗದಗ ತಾಲೂಕು & ಜಿಲ್ಲೆ . 3) ಸದಾಶಿವ ಗೌಡ ಪ್ರಾಯ:35 ,ತಂದೆ: ಪುಟ್ಟಣ್ಣ ಗೌಡ ,ವಾಶ: ನೆಕ್ಲಾಜೆ ಮನೆ ಕಮಿಲಾ ಪೋಸ್ಟು ಗುತ್ತಿಗಾರು ಗ್ರಾಮ ಸುಳ್ಯ ತಾಲೂಕು. 4) ಶೇಖರ ಮೆಂಡನ್ ಪ್ರಾಯ:48 ,ತಂದೆ: ಸಾದು ಸುವರ್ಣ ,ವಾಸ: ಮಹಾಲಕ್ಷ್ಮೀ ಹೌಸ್ ಕೊಡವೂರು ಶಂಕರನಾರಾಯಾಣ ದೇವಸ್ಥಾನದ ಬಳಿ ಕೊಡವೂರು ಮಲ್ಪೆ  5) ವೆಂಕಟೇಶ ಜಟ್ಟಪ್ಪ ನಾಯ್ಕ್ ಪ್ರಾಯ: 27 ,ತಂದೆ: ಜಟ್ಟಪ್ಪ ನಾಯ್ಕ್ ,ವಾಸ:ಮನಬುಕ್ಕನ ಮನೆ ಅಂಚೆ ಕಛೇರಿಯ ಬಳಿ ಮುರ್ಡೆಶ್ವರ ,ಭಟ್ಕಳ ತಾಲೂಕು ಕಾರವಾರ  6) ಬಸವರಾಜ್. ಎಸ್.ಹನಗೋಡಿಮಠ್ ಪ್ರಾಯ:40 ,ತಂದೆ:ಸಡಕ್ಷರಯ್ಯ ಹನುಗೋಡಿಮಠ್ ,ವಾಸ: ಕರ್ಜಗಿ ಗ್ರಾಮ ,ಕರ್ಜಗಿ ,ಹಾವೇರಿ ತಾಲೂಕು ಮತ್ತು ಜಿಲ್ಲೆ ಇವರುಗಳಿದ್ದು ಸದ್ರಿ ರೂಮನ್ನು ಪಂಚರ ಸಮಕ್ಷಮದಲ್ಲಿ ಪರಿಶೀಲಿಸಲಾಗಿ ಎರಡು ತಾಮ್ರದ ಹಳೆಯ ಪುರಾತನ ಮೂರ್ತಿಗಳು ಒಂದು ಕಪ್ಪು ಬ್ಯಾಗಿನಲ್ಲಿದ್ದು  ಅದರಲ್ಲಿ ಒಂದು ತಾಮ್ರದ ಶ್ರೀನಿವಾಸ ಮೂರ್ತಿ, ಇನ್ನೊಂದು ತಾಮ್ರದ ಪದ್ಮಾವತಿ ವಿಗ್ರಹವಾಗಿದ್ದು. ಎರಡು ಮೂರ್ತಿಗಳ ಅಂದಾಜು ಮೌಲ್ಯ 5 ಲಕ್ಷ ರೂಪಾಯಿ ಆಗಬಹುದು.  ಹಾಗೂ ಆಪಾದಿತರ ಬಳಿಯಲ್ಲಿದ್ದ ಸ್ಯಾಮ್ ಸಂಗ್ ಕಂಪೇನಿಯ 2 ಮೊಬೈಲ್ ,ನೋಕಿಯಾ ಕಂಪೇನಿಯ 3 ,ಇ-ಟಚ್ ಮೊಬೈಲ್-1 ,ಪೆಂಟಾ ಮೊಬೈಲ್ -1 ಒಟ್ಟು 7 ಮೊಬೈಲ್ ಪೋನುಗಳನ್ನು ಹಾಗೂ ಆರೋಪಿಗಳು ಉಪಯೋಗಿಸಿರುವ ಕಾರು ನಂಬ್ರ  ಕೆ.ಎ.27.ಎಮ್. 4239 ನಂಬ್ರ ಬಿಳಿ ಬಣ್ಣದ ಸ್ವೀಪ್ಟ್ ಕಾರ್ ವಿ.ಡಿ.ಐ ನೇದನ್ನು ಸ್ವಾಧೀನ ಪಡಿಸಿಕೊಂಡಿದ್ದು ಈ ಬಗ್ಗೆ ಉಡುಪಿನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 309/14 ಕಲಂ: 41(1) (ಎ) , 102 ಸಿ.ಆರ್.ಪಿ.ಸಿ, 379 ಐಪಿಸಿ, 3, 25 ಪುರಾತನ ವಸ್ತು ಮತ್ತು ಕಲಾ ಅಧಿನಿಯಮ 1972 ರಂತೆ ಪ್ರಕರಣ ದಾಖಲಾಗಿರುತ್ತದೆ.

No comments: