Monday, October 27, 2014

Daily Crime Reports As On 27/10/2014 At 17:00 Hrs



ಕಳವು ಪ್ರಕರಣ

  • ಉಡುಪಿ ನಗರ: ಪಿರ್ಯಾದಿ ಜೆಸಿಂತ ಮಾರ್ಟಿಸ್ (53) ಗಂಡ Jarald martis  ವಾಸ ಡೋ ನಂ 5-102ಸಿ ಬೈಲೂರು ಶಾಲೆ ಹತ್ತಿರ 76 ಬಡಗುಬೆಟ್ಟು ಗ್ರಾಮ ಉಡುಪಿ  ಇವರು ದಿನಾಂಕ 26/10/2014 ರಂದು ಬೆಳಿಗ್ಗೆ 10:30 ಗಂಟೆಗೆ ಮನೆಗೆ ಬೀಗ ಹಾಕಿ ಶಂಕರಪುರಕ್ಕೆ ಹೋಗಿದ್ದು, ದಿನಾಂಕ 27/10/2014 ರಂದು ಬೆಳಿಗ್ಗೆ 07:30 ಗಂಟೆಗೆ ವಾಪಾಸು ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲು ಒಡೆದಿರುವುದು ಕಂಡು ಬಂದಿದ್ದು , ಮನೆಯ ಒಳಗೆ ಹೋಗಿ ನೊಡಿದಾಗ ಮನೆಯ ಬೆಡ್ ರೂಮ್ ಮತ್ತು ಮಾಳಿಗೆಯ ಬೆಡ್ ರೂಮ್ ನ ಬಾಗಿಲಿನ ಬೀಗವನ್ನು ಒಡೆದು ಬೆಡ್ ರೂಮ್‌ನಲ್ಲಿದ್ದ ಮರದ ಕಾಪಾಟುಗಳನ್ನು ಬಲತ್ಕಾರವಾಗಿ ತೆರೆದು ಅದರಲ್ಲಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಪಾಟಿನ ಒಳಗೆ ಬ್ರಿಫ್ ಕೇಸಿನಲ್ಲಿ ಇಟ್ಟಿದ  ಚಿನ್ನದ ಹವಳದ ಸರ ,ಎರಡು ಎಳೆಯ ಚಿನ್ನದ ಕರಿಮಣಿ ಸರ ಇದರಲ್ಲಿ ಕ್ರೋಸ್ ಇರುವ ಪೆಂಡೆಂಟ್, ಚಿನ್ನದ ನಾಲ್ಕು ಬಳೆಗಳು, ಚಿನ್ನದ ಉಂಗುರ ಮೂರು ,ಚಿನ್ನದ ನೆಕ್ಲಸ್ , ಹಾಗೂ 30,000ರೂ ನಗದನ್ನು  ಯಾರೋ ಕಳ್ಳರು  ಕಳವು ಮಾಡಿಕೊಂಡು ಹೋಗಿದ್ದಾಗಿದೆ.ಕಳವಾದ  ಸತ್ತುಗಳ  ಅಂದಾಜು ಮೌಲ್ಯ ಸುಮಾರು 5 ಲಕ್ಷ -ರೂ ಆಗಬಹುದು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ  ಅಪರಾಧ ಕ್ರಮಾಂಕ 307/14  ಕಲಂ 454,457,380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

ಜಾತಿ ನಿಂದನೆ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ ರಾಮ (38), ತಂದೆ: ಕೊರಗ, ವಾಸ: ಅಕಸಾಲಿ ತೋಟ, ಹರ್ಕೂರು ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ: 26/10/2014 ರಂದು ಮರವಂತೆಯಲ್ಲಿ ಕೆಲಸ ಮುಗಿಸಿ ಬಸ್ಸಿನಲ್ಲಿ ಆಲೂರಿಗೆ ಹೋಗಿ ಆಲೂರಿನ ನಂದಿಕೇಶ್ವರ ವೈನ್ಸನಲ್ಲಿ ಕುಡಿದು 20:30 ಗಂಟೆಗೆ ಹೊರಗೆ ಬರುತ್ತಿರುವಾಗ ಮೊನ್ನೆ ಸೈಕಲ್‌ ಸರ್ಕಸ್‌ನ ಬಳಿ ಬಾರಿ ಕುಣಿಯುತ್ತಿದ್ದಿಯಾ ಎನ್ನುವುದಾಗಿ ಪಿರ್ಯಾದಿದಾರರ  ಪರಿಚಯದವರಾದ ಅಪ್ಪು ಕುಲಾಲ್‌ ರವರು ಅವಾಚ್ಯ ಶಬ್ದಗಳಿಂದ ಬೈದು ನಂತರ ಪಿರ್ಯಾದಿದಾರರು  ನೀನೇನು  ನನಗೆ ಹೇಳುವುದು ಎಂದು ಕೇಳಿದಾಗ ಅಲ್ಲಿಯೇ ಇದ್ದ ಅಪ್ಪು ಕುಲಾಲ್‌ರವರ ಮಗ  ಸತೀಶ್‌ ಎಂಬಾತ ಅಲ್ಲೆ ಬಿದ್ದಿದ್ದ ಮರದ ದೊಣ್ಣೆಯಿಂದ ಅರ್ಜಿದಾರರ ಬಲ ಬದಿಯ ಕಣ್ಣಿನ ಬಳಿ ಹಾಗೂ ಎಡಕೈ ಭುಜದ ಬಳಿ ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 180/2014  ಕಲಂ 3(1)(X) POA Act 1989 ಮತ್ತು 324, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ


No comments: