Monday, October 27, 2014

Daily Crime Reports as on 27/10/2014 at 07:00 Hrsಜುಗಾರಿ ದಾಳಿ ಪ್ರಕರಣ

  • ಕುಂದಾಪುರ: ದಿನಾಂಕ 26/10/2014 ರಂದು 13:30 ಗಂಟೆಗೆ ಕುಂದಾಪುರ ಠಾಣಾ ಉಸ್ತುವಾರಿ ಪ್ರಭಾರ ಶ್ರೀ ಸುನಿಲ್ ಕುಮಾರ್ ಎಂ. ಎಸ್. ಪೊಲೀಸ್ ಉಪ ನಿರೀಕ್ಷಕರು ಅಮಾಸೆಬೈಲು ಪೊಲೀಸ್ ಠಾಣೆರವರು ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕೋಣೆ ಗ್ರಾಮದ ಕೋಣೆ ಚಟ್ಲೆಕರೆ, ಸಿಗಡಿ ಕೃಷಿಯ ಕೆರೆಯ ಬಳಿಯ ಖಾಲಿ ಸ್ಥಳದ ಬಳಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಲ್ಲಿಗೆ ದಾಳಿ ನಡೆಸಿ ಆರೋಪಿಗಳಾದ 1. ರೋಶನ್ ಬೆರೆಟ್ಟೋ ಪ್ರಾಯ 24 ವರ್ಷ ತಂದೆ: ಅಂತೋನಿ ಬೆರೆಟ್ಟೋ ವಾಸ: ಕೋಣೆ ಕೆಳಕೇರಿ, ಕೋಣಿ ಗ್ರಾಮ ಕುಂದಾಪುರ ತಾಲೂಕು, 2. ವಾಸು ಮೊಗವೀರ ಪ್ರಾಯ 48 ವರ್ಷ ತಂದೆ: ಮುತ್ತ ಮೊಗವೀರ ವಾಸ: ಕೋಣೆ ಶಾಲೆ ರೆಸ್ತೆ, ಕೋಣಿ ಗ್ರಾಮ ಕುಂದಾಪುರ ತಾಲೂಕು, 3. ದಿನೇಶ್ ಪ್ರಾಯ 26 ವರ್ಷ ತಂದೆ: ಸುಕ್ರ ವಾಸ: ನೇರಂಬಳ್ಳಿ ಹಂಗಳೂರು ಗ್ರಾಮ ಕುಂದಾಪುರ ತಾಲೂಕು, 4. ಶ್ರೀಕಾಂತ ಪ್ರಾಯ 25 ವರ್ಷ ತಂದೆ: ಬಾಬು ವಾಸ: ಫಯರ್ ಸ್ಟೇಶನ್ ಬಳಿ, ಕೋಣಿ ಗ್ರಾಮ ಕುಂದಾಪುರ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ, ಜುಗಾರಿ ಆಟಕ್ಕೆ ಬಳಿಸಿದ ನಗದು ರೂಪಾಯಿ 2,380/- ಮತ್ತು ಜುಗಾರಿ ಆಟಕ್ಕೆ ಉಪಯೋಗಿಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ದಾಳಿ ಸಮಯ 1. ಕೋಣೆ ಶಾಲೆ ರಸ್ತೆಯ ಫ್ರಾನ್ಸಿಸ್ಡಿ ಸೋಜಾ, 2. ನೇರಂಬಳ್ಳಿಯ ರಾಮ ದೇವಾಡಿಗ ಮತ್ತು 3. ಕೋಣೆ ಶಾಲೆ ರಸ್ತೆಯ ಬಳಿಯ ದಿನೇಶ್ ಎಂಬವರು ಓಡಿ ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 351/2014 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

No comments: