Thursday, October 23, 2014

Daily Crime Reports as on 23/10/2014 at 19:30 Hrs

ಜೀವ ಬೆದರಿಕೆ ನೀಡಿದ ಪ್ರಕರಣ
  • ಕಾರ್ಕಳ: ಪಿರ್ಯಾದಿದಾರರಾದ ಹರಿಪ್ರಸಾದ್ ಇರ್ವತ್ರಾಯ ತಂದೆ: ಶಿವರಾಮ್ ಇರ್ವತ್ರಾಯ, ವಾಸ: ತಂಗೋಯಿ ಮನೆಒಡಿನಾಳ ಗ್ರಾಮಬೆಳ್ತಂಗಡಿ ತಾಲೂಕು ಎಂಬವರು ದಿನಾಂಕ 20.10.2014 ರಂದು ಕಾರ್ಕಳ ತಾಲೂಕುಮಾಳಾ ಗ್ರಾಮದ ಗ್ರಾಮ ಪಂಚಾಯತ್ ಕಛೇರಿಗೆ ಮದ್ಯಾಹ್ನ ಸುಮಾರು 2:40 ಗಂಟೆಗೆ ಭೇಟಿ ನೀಡಿ ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿದ ಮಾಹಿತಿಯ ಪ್ರತಿಗಳಿಗೆ ಶುಲ್ಕದ ಮೊತ್ತವನ್ನು ಪಾವತಿಸಲು ಹೋಗಿದ್ದು ಆ ಸಮಯದಲ್ಲಿ ಆರೋಪಿ ಸುಧಾಕರ ಶೆಟ್ಟಿ, ಪಿ.ಡಿ.ಓ, ಮಾಳಾ ಗ್ರಾಮ ಪಂಚಾಯತ್ ರವರು ಪಿರ್ಯಾದಿದಾರರಿಗೆ ಯಾವುದೋ ಪುಸ್ತಕಕ್ಕೆ ಸಹಿ ಮಾಡುವಂತೆ ತಿಳಿಸಿದಾಗ ಪಿರ್ಯಾದಿದಾರರು ಸಹಿ ಹಾಕಲು ನಿರಾಕರಿಸಿರುವುದರಿಂದ ಆರೋಪಿಯು ಕುಪಿತಗೊಂಡು ಪಿರ್ಯಾದಿದಾರರನ್ನು ಉದ್ದೇಶಿಸಿ "ರಶೀದಿ ಕೊಟ್ಟು ಹೊರಗೆ ನಡೆ, ಇಲ್ಲವಾದರೆ ಬಿಡುವುದಿಲ್ಲವೆಂದು ಮಾಹಿತಿ ಹಕ್ಕಿನಲ್ಲಿ ಎಷ್ಟು ಮಾಹಿತಿ ಕೇಳುತ್ತಿ ಎಂದು ನಿನ್ನನ್ನು ಹಾಗೆಯೇ ಬಿಡುವುದಿಲ್ಲ" ಎಂದು ಹೇಳಿ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ಹರಿಪ್ರಸಾದ್ ಇರ್ವತ್ರಾಯ ರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 122/2014 ಕಲಂ 506 ಐ.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ. 
ಜುಗಾರಿ ದಾಳಿ ಪ್ರಕರಣ
  • ಕಾರ್ಕಳ: ದಿನಾಂಕ: 23.10.2014 ರಂದು 14:30 ಗಂಟೆಗೆ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ಮಾಳಾ  ಗ್ರಾಮದ ಹುಕ್ರಟ್ಟೆ ಸ.ಹಿ.ಪ್ರಾ ಶಾಲೆಯ ಹಿಂದೆ ಹಾಡಿಯಲ್ಲಿ ಆರೋಪಿತರು ತಮ್ಮ ತಮ್ಮ ಸ್ವಂತ ಲಾಭಕ್ಕಾಗಿ ಹಣವನ್ನು ಪಣವಾಗಿಟ್ಟು "ಒಳಗೆ ಹೊರಗೆ" ಎಂಬ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದವರನ್ನು ಖಚಿತ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಮಹಾದೇವ ಶೆಟ್ಟಿ ಕೆ.ಎಂ ಇವರು  ಸಿಬ್ಬಂದಿಗಳ ಜೊತೆ ಸಂಜೆ 15:30 ಗಂಟೆ ಸಮಯಕ್ಕೆ ಸದ್ರಿ ಸ್ಥಳಕ್ಕೆ ಧಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾದ 1. ನಿತ್ಯಾನಂದ (38) ತಂದೆ: ದಯಾನಂದ, ವಾಸ: ಮಂಜಲ್ತಾರ್‌ ಅಂಚೆ, ಮಾಳ ಗ್ರಾಮ ಕಾರ್ಕಳ ತಾಲೂಕು, 2. ಜಗ್ಗು (34) ತಂದೆ: ದಿ.ದೂಮಪ್ಪ, ವಾಸ: ಕೊಡಂಚಡ್ಕ ಮನೆ, ನಲ್ಲೂರು ಅಂಚೆ ಮತ್ತು  ಗ್ರಾಮ, ಕಾರ್ಕಳ ತಾಲೂಕು, 3. ರಾಜೀವ (34) ತಂದೆ: ಧರ್ಮರಾಜ್‌, ವಾಸ: ದರ್ಖಾಸ್‌ ಮನೆ ಹುಕ್ರಟ್ಟೆ ಮಾಳ ಗ್ರಾಮ, ಕಾರ್ಕಳ ತಾಲೂಕು, 4. ಬಾಬು (38) ತಂದೆ: ದಿ. ನೇಮು ವಾಸ: ಗುಂಡೂಣಿ ಮನೆ ಹುಕ್ರಟ್ಟೆ ಮಾಳ ಗ್ರಾಮ, ಕಾರ್ಕಳ ತಾಲೂಕು, 5. ಧರ್ಮಣ್ಣ (56) ತಂದೆ: ತನಿಯ ಮೂಲ್ಯ, ವಾಸ: ಕಂಡದಲ್ಕೆ ಹುಕ್ರಟ್ಟೆ ಮಾಳ ಗ್ರಾಮ ಕಾರ್ಕಳ ತಾಲೂಕು, 6. ಬಾಬು (36) ದಿ ಶ್ರೀನಿವಾಸ ವಾಸ: ದರ್ಖಾಸು ಮನೆ ಹುಕ್ರಟ್ಟೆ ಮಾಳ ಗ್ರಾಮ ಕಾರ್ಕಳ ತಾಲೂಕು, 7.ರಕ್ಷಿತ್‌ (24) ತಂದೆ: ಗೋಪಾಲ್‌ ಶೆಟ್ಟಿ ವಾಸ: ನೆಕ್ಕೆರೆಪಲ್ಕೆ ಹುಕ್ರಟ್ಟೆ ಮಾಳ ಕಾರ್ಕಳ ತಾಲೂಕು ಎಂಬವರನ್ನು ದಸ್ತಗಿರಿ ಮಾಡಿ ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 2,500/- ಹಾಗೂ ಜುಗಾರಿ ಆಟಕ್ಕೆ ಬಳಸಿದ ಇತರ ಪರಿಕರಗಳನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 123/2014 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ. 

No comments: